ನಿರಂತರ ಮಳೆಯಿಂದಾಗಿ ತೋಟದಲ್ಲೇ ಹಾಳಾಗುತ್ತಿರುವ ಬೆಳೆಯಿಂದ ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಪೂರೈಕೆ ಕೊರತೆಯಿಂದಾಗಿ ನುಗ್ಗೆಕಾಯಿ ₹200, ಡಬಲ್ ಬೀನ್ಸ್ ₹300 ಮತ್ತು ಬಟಾಣಿ ₹400 ದಾಟಿದೆ.
ಬೆಂಗಳೂರು(ಜೂ.9): ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲೇ ಹಾಳಾಗುತ್ತಿರುವ ಬೆಳೆ ಇದರ ಪರಿಣಾಮವಾಗಿ ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿವೆ. ಕೆ.ಆರ್.ಮಾರ್ಕೆಟ್‌ಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿಗಳು ಆಗಮಿಸದ ಹಿನ್ನೆಲೆ ಪೂರೈಕೆ ಕೊರತೆಯಿಂದ ದರಗಳು ಗಗನಕ್ಕೇರಿವೆ.
ನುಗ್ಗೆಕಾಯಿ ₹200 ಗಡಿ ದಾಟಿದರೆ, ಡಬ್ಬಲ್ ಬಿನ್ಸ್ ಕೆಜಿಗೆ ₹300 ಗಡಿ ದಾಟುವ ಸಾಧ್ಯತೆಯಿದೆ. ಇನ್ನು ಬಟಾಣಿ ಈಗಾಗಲೇ ₹400 ಗಡಿ ದಾಟಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ಸುಸ್ತಾಗಿದ್ದಾರೆ.
ಆಗಿದ್ರೆ ಯಾವ ತರಕಾರಿ ಬೆಲೆ ಎಷ್ಟಿದೆ(ಪ್ರತಿ ಕೆ.ಜಿ)?
ಬೀನ್ಸ್- 80- 100
ಕ್ಯಾರೆಟ್-60-80
ಊಟಿ ಕ್ಯಾರೆಟ್- 100
ಬದನೆಕಾಯಿ-60
ಬಿಳಿ ಬದನೆಕಾಯಿ- 80
ಬೆಂಡೆಕಾಯಿ- 50-60
ತೊಂಡೆಕಾಯಿ- 60
ಬಿಟ್ರೂಟ್- 40
ಚಪ್ಪರದವರೆಕಾಯಿ- 100
ನುಗ್ಗೆಕಾಯಿ- 200
ಬಟಾಣಿ- 400
ಹೀರೇಕಾಯಿ- 60
ಹಾಗಲಕಾಯಿ-80
ಸೌತೆಕಾಯಿ - 60
ಸೋರೆಕಾಯಿ- 60
ಹೂಕೋಸು- 40
ಈರುಳ್ಳಿ- 25
ಬೆಳ್ಳುಳ್ಳಿ- 100
ಮೆಣಸಿನಕಾಯಿ- 60
ಕ್ಯಾಪ್ಸಿಕಂ- 80
ನವಿಲುಕೋಸು- 80
ಡಬ್ಬಲ್ ಬೀನ್ಸ್- 300
ಮಂಗಳೂರು ಸೌತೆ- 60
