ರಾಮಮೂರ್ತಿ ನಗರದ ಟೆಕ್ಕಿ ಶರ್ಮಿಳಾ ಸಾವು ಬೆಂಕಿ ಅವಘಡವೆಂದು ಭಾವಿಸಲಾಗಿತ್ತು, ಆದರೆ ಇದು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಆರೋಪಿ ಕರ್ನಲ್ ಕುರೈ, ಶರ್ಮಿಳಾಳನ್ನು ಎರಡು ತಿಂಗಳು ಗಮನಿಸಿ, ಕಿಟಕಿ ಮೂಲಕ ಒಳನುಗ್ಗಿ, ಗ್ಯಾಸ್ ಸೋರಿಕೆಯಂತೆ ಕಾಣುವಂತೆ ಮಾಡಿ ಕೊಲೆ ಮಾಡಿದ್ದನು.

ರಾಮಮೂರ್ತಿ ನಗರ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿ ಹೇಳುತ್ತಿರುವ ಎಲ್ಲ ವಿಚಾರಗಳೂ ಶಾಕಿಂಗ್ ಆಗಿವೆ. ಟೆಕ್ಕಿ ಶರ್ಮಿಳಾ ಚಲನ ವಲನವನ್ನ ಎರಡು ತಿಂಗಳಿಂದ ತುಂಬಾ ಸುಧೀರ್ಘವಾಗಿ ಗಮನಿಸಿದ್ದ ಆರೋಪಿ ಯುವಕ ಕರ್ನಲ್ ಕುರೈ, ಓದುವ ನೆಪದಲ್ಲಿ ಆಗಾಗ ಟೆರಸ್ ಮೇಲೆ ಹೋಗುತ್ತಿದ್ದನು. ಇನ್ನು ಶರ್ಮಿಳಾ ಸ್ನೇಹಿತೆ ಇಲ್ಲದಿರುವ ಸಮಯ ನೋಡಿಯೇ ಎಂಟ್ರಿಯಾಗಿದ್ದನು. ಆರೋಪಿ ಕರ್ನಲ್ ಶರ್ಮಿಳಾ ಮನೆಗೆ ಎಂಟ್ರಿಯಾಗಿದ್ದು ಇದೇ ಮೊದಲು. ಆದರೆ, ಇದಕ್ಕೂ ಮೊದಲು ಹಲವು ಬಾರಿ ಮನೆಯೊಳಗೆ ಹೇಗೆ ಹೋಗಬೇಕು ಎಂದು ಪೂರ್ಣವಾಗಿ ತಿಳಿದುಕೊಂಡಿದ್ದನು.

ಕಾಲೇಜಿನಲ್ಲಿ ಕಿಟಕಿ ಸ್ಲೈಡಿಂಗ್ ಟೆಕ್ನಿಕ್ ಕಲಿತಿದ್ದ

ಶರ್ಮಿಳಾ ವಾಸವಿದ್ದ ಮನೆಗೆ ಇರುವ ಸ್ಲೈಡಿಂಗ್ ಕಿಟಕಿಯನ್ನು ಸರಿಸಿ, ಒಳಗೆ ನುಗ್ಗುವುದನ್ನು ಕೂಡ ನೋಡಿಕೊಂಡಿದ್ದನು. ಸ್ಲೈಡಿಂಗ್ ಕಿಟಕಿಯನ್ನು ಹೇಗೆ ಓಪನ್ ಮಾಡಬೇಕು ಎಂಬುದನ್ನು ಕಾಲೇಜಿನಲ್ಲಿ ಕಲಿತುಕೊಂಡಿದ್ದನು. ಕಾಲೇಜಿನ ತಗತಿ ಕೋಣೆಯಲ್ಲಿದ್ದ ಕಿಟಕಿಗೆ ಇರುವ ಸ್ಲೈಡಿಂಗ್ ಕಿಟಕಿಗೆ ಬುಕ್ ಸಿಕ್ಕಿಕೊಂಡಾಗ ಅದನ್ನು ಹೇಗೆ ತೆಗೆಯಬೇಕು ಎಂದು ಕರಗತ ಮಾಡಿಕೊಂಡಿದ್ದನು. ಇದೇ ಟೆಕ್ನಿಕ್ ಅನ್ನು ಶರ್ಮಿಳಾ ಮನೆಗೂ ಅನ್ವಯ ಮಾಡಿ, ಕಿಟಕಿ ಓಪನ್ ಮಾಡುವ ಪ್ರಾಕ್ಟೀಸ್ ಮೊದಲೇ ಮಾಡಿಕೊಂಡಿದ್ದನು. ಆದರೆ, ಆರೋಪಿ ಕಿಟಕಿಯಿಂದ ಪರಾರಿಯಾಗಿದ್ದರೂ, ತನಿಖೆಗೆ ಹೋಗಿದ್ದ ಪೊಲೀಸರು ಕಿಟಕಿಯನ್ನು ಸುಲಭವಾಗಿ ತೆಗೆಯಲಾಗದೇ ಪರದಾಡಿದ್ದರು.

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಆರೋಪಿ

ಇನ್ನು ಕರ್ನಲ್ ಪೂರ್ವಪರದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಈ ಹಿಂದೆ ಕಾಲೇಜಿನಲ್ಲಿ ಏನಾದರೂ ಈ ರೀತಿ ವರ್ತನೆ ತೋರಿದ್ನಾ ಎಂದು ಹುಡುಕಿದ್ದಾರೆ. ಆದರೆ, ಆತ ಕಾಲೇಜು ಅಥವಾ ಶಾಲೆಯಲ್ಲಿ ಇಂತಹ ಕೃತ್ಯವನ್ನು ಎಸಗಿಲ್ಲ. ಆರೋಪಿ ಕರ್ನಲ್ ಕುರೈ ತುಂಬಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದನು. ಎಸ್ ಎಸ್ ಎಲ್ ಸಿಯಲ್ಲಿ ಶೇ.97 ಪರ್ಸೆಂಟ್ ಸ್ಕೋರ್ ಮಾಡಿ, ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿದ್ದನು. ಇನ್ನು ಆರೋಪಿ ಕರ್ನಲ್ ಹಾಗೂ ಆತನ ತಾಯಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಈತನ ತಾಯಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಕೊಲೆಯಾಗಿದೆ ಅನ್ನೋದಕ್ಕೆ ಸಾಕ್ಷಿಯೇ ಇರಲಿಲ್ಲ

ಟೆಕ್ಕಿ ಶರ್ಮಿಳಾ ಸಾವಿನ ಘಟನೆ ನೋಡಿದಾಗ ಪೊಲೀಸರಿಗೆ ಮೊದಲು ಬೆಂಕಿ ಅವಘಡ ಸಂಭವಿಸಿದೆ ಅನ್ನಿಸೋದಕ್ಕೆ ಹಲವು ಕಾರಣಗಳು ಕಂಡುಬಂದಿದ್ದವು. ಆರೋಪಿ ಕರ್ನಲ್, ಶರ್ಮಿಳಾ ಮನೆಗೆ ಎಂಟ್ರಿಯಾಗುವ ಹೊತ್ತಿಗೆ ಅಡುಗೆ ಮನೆಯಲ್ಲಿದ್ದ ಶರ್ಮಿಳಾ, ಸ್ಟವ್ ಆನ್ ಮಾಡಿ ಹಾಲು ಕಾಯಿಸಲು ಇಟ್ಟಿದ್ದಳು. ಅಗ ಮನೆಯೊಳಗೆ ಎಂಟ್ರಿಯಾಗಿದ್ದ ಆರೋಪಿ ಕರ್ನಲ್ ಆಕೆಯನ್ನು ಹಿಂದಿನಿಂದ ತಳ್ಳಿದ್ದನು. ಆಗ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟವ್‌ನ ಬೆಂಕಿ ಆರಿ ಹೋಗಿತ್ತು. ಅದ್ರೆ ಸ್ಟವ್ ಆಫ್ ಆಗಿರಲಿಲ್ಲ ಇದರಿಂದ ಗ್ಯಾಸ್ ಲೀಕ್ ಅಗಿರಬಹುದು. ಅಗ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು.

ಗ್ಯಾಸ್ ಸೋರಿಕೆಯಿಂದ ಸಾವಾಗಿದೆ ಎಂಬ ವಾತಾವರಣ ಸೃಷ್ಟಿ

ಇನ್ನು ಬೆಂಕಿಯ ತೀವ್ರತೆಯ ಮೊಬೈಲ್ ಕೂಡ ಕರಗಿ ಹೋಗಿರಬಹುದು ಎಂದು ಪೊಲೀಸರು ಪ್ರಾಥಮಿಕವಾಗಿ ಅಂದಾಜಿಸಿದ್ದರು. ಅಲ್ಲದೆ ಇಡೀ ಘಟನೆಯ ಬಗ್ಗೆ ಕೂಡ ಎಲೆಕ್ಟ್ರಿಕಲ್‌ ಇಂಜಿನಿಯರ್ ಕೂಡ ಅದನ್ನೆ‌ ಹೇಳಿದ್ದರು. ಗ್ಯಾಸ್ ಸೋರಿಕೆಯಿಂದ, ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕಿಚನ್ ಹತ್ತಿರ ಹೋಗಲು ಟ್ರೈ ಮಾಡಿ ಹಾಲ್‌ನಲ್ಲಿ ಬಿದ್ದಿದ್ದಾಳೆ. ಗ್ಯಾಸ್ ಆಕೆಯ ಶ್ವಾಸಕೋಶಕ್ಕೆ ಹೋಗಿ‌ದೆ. ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ಘಟನೆ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ತಿಳಿಸಿದ್ದರು. ಶರ್ಮಿಳಾ ಸಾವಿಗೆ ಬೇರಾವ ಕಾರಣವಿಲ್ಲ ಎಂದು ಪೊಲೀಸರು ಸುಮ್ಮನಾಗಿದ್ದರು.

ಪ್ರತಿನಿತ್ಯ ಮಾಹಿತಿ ಕಲೆ ಹಾಕುತ್ತಿದ್ದ ಕರ್ನಲ್

ಆದರೆ, ಕೊಲೆಯ ಬಗ್ಗೆ ಆತಂಕವಿದ್ದ ಯುವಕ ಕರ್ನಲ್ ಒಂದು ವಾರ ಘಟನೆಯ ಬಗ್ಗೆ ಯಾರ ಬಳಿಯೂ ಕೂಡ ಹೇಳಿಕೊಂಡಿರಲಿಲ್ಲ. ಕೊಲೆಯ ವಿಚಾರ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರತಿದಿನ ಟಿವಿಯಲ್ಲಿ ನ್ಯೂಸ್, ಪೆಪರ್ ಓದುತ್ತಿದ್ದನು. ಇನ್ನು ಈ ಕೇಸಿನಲ್ಲಿ ತಾನು ಸಿಕ್ಕಿ ಹಾಕೊಳ್ಳೊಲ್ಲ ಎಂದು ತಿಳಿದುಕೊಂಡು ಶರ್ಮಿಳಾ ಮನೆಯಿಂದ ಎತ್ತಿಕೊಂಡು ಬಂದಿದ್ದ ಪೋನ್‌ಗೆ ತನ್ನ ಸಿಮ್ ಕಾರ್ಡ್ ಹಾಕಿದ್ದನು.

ಮೊಲೈಲ್‌ನಿಂದ ಸಿಕ್ಕಿಬಿದ್ದ ಆರೋಪಿ

ಆದರೆ, ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆಯ ಭಾಗವಾಗಿ ಮೊದಲು ಅಲ್ಲಿಯೇ ಅಕ್ಕ-ಪಕ್ಕದಲ್ಲಿ ವಾಸವಾಗಿದ್ದ ನಾಲ್ಕಾರು ಯುವಕರನ್ನ ಕರೆತಂದು ವಿಚಾರಣೆ ಮಾಡಿದ್ದಾರೆ. ಕೊಲೆಯಾಗಿದ್ದರೆ ಸುತ್ತಲಿನವರೇ ಕೊಲೆ ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಯಾವುದೇ ಸಾಕ್ಷಿ ಸಿಗದೇ ಪೋಲಿಸರಿಗೆ ‌ಹಿನ್ನೆಡೆಯಾಗಿತ್ತು. ಕರ್ನಲ್‌ನ ಬಗ್ಗೆ ಅನುಮಾನ ಬಂದಾಗ, 18 ವರ್ಷದ ಹುಡುಗ ಹೇಗೆ 36 ವರ್ಷದ ಯುವತಿಯನ್ನು ಕೊಲೆ ಮಾಡೋದಕ್ಕೆ ಸಾಧ್ಯ ಎಂದಿದ್ದರಂತೆ. ಕೊನೆಗೆ, ಫೋನ್ ಮೂಲಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪೋಲಿಸರು ‌ತಮ್ಮ ಕರ್ತವ್ಯ ಮಾಡಿದ್ದು, ಆರೋಪಿಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಎಫ್ ಎಸ್ ಎಲ್ ವರದಿ ಬಂದ ನಂತರ ಅತ್ಯಾ*ಚಾರ ಆಗಿದ್ಯಾ ಅನ್ನೋದು ತಿಳಿದು ಬರುತ್ತದೆ.