ರಾಜಧಾನಿಯಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ವಾರಾಂತ್ಯದ ಮೋಜು ಮಸ್ತಿಗೆ ಹೋದ ಮಂದಿಗೆ ಮಳೆ ಸ್ವಲ್ಪ ಅಡ್ಡಿ ಉಂಟು ಮಾಡಿತು. ಭಾನುವಾರ ಬೆಳಗ್ಗೆಯಿಂದ ನಗರದಲ್ಲಿ ಬಿಸಿಲ ವಾತಾವರಣವಿತ್ತು. ಆದರೆ, ಸಂಜೆ ಆಗುತ್ತಿದಂತೆ ಮಳೆಯ ವಾತಾವರಣ ಸೃಷ್ಟಿಯಾಗಿ ಸಂಜೆ ನಗರದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಬೆಂಗಳೂರು (ಜು.3) ರಾಜಧಾನಿಯಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ವಾರಾಂತ್ಯದ ಮೋಜು ಮಸ್ತಿಗೆ ಹೋದ ಮಂದಿಗೆ ಮಳೆ ಸ್ವಲ್ಪ ಅಡ್ಡಿ ಉಂಟು ಮಾಡಿತು.
ಭಾನುವಾರ ಬೆಳಗ್ಗೆಯಿಂದ ನಗರದಲ್ಲಿ ಬಿಸಿಲ ವಾತಾವರಣವಿತ್ತು. ಆದರೆ, ಸಂಜೆ ಆಗುತ್ತಿದಂತೆ ಮಳೆಯ ವಾತಾವರಣ ಸೃಷ್ಟಿಯಾಗಿ ಸಂಜೆ ನಗರದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಸಂಜೆ 6ರ ಸುಮಾರಿಗೆ ಆರಂಭಗೊಂಡ ಮಳೆಯು ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು. ನಂತರ ಆಗಾಗ ಸಣ್ಣ ಪ್ರಮಾಣ ಮಳೆ ಮುಂದುವರೆಯಿತು. ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ಇದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಕೆಲವು ಕಡೆ ಟ್ರಾಫಿಕ್ ಜಾಮ್ ಆಯಿತು.
ಮಳೆರಾಯನ ಆರ್ಭಟಕ್ಕೆ ಪರದಾಡಿದ ಬೆಂಗ್ಳೂರಿನ ಜನ..!
ಇನ್ನು ವಾರಾಂತ್ಯದ ಮೋಜು ಮಸ್ತಿಗೆ ಭಾನುವಾರ ಸಂಜೆ ಹೋಟೆಲ್, ಪಾರ್ಕ್, ಮಾಲ್ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಹೋದ ಬೆಂಗಳೂರಿಗರು ಮಳೆಯಲ್ಲಿ ನೆನೆಯಬೇಕಾಯಿತು.
ಹಂಪಿನಗರಲ್ಲಿ 2.6 ಸೆಂ.ಮೀ.
ಭಾನುವಾರ ರಾತ್ರಿ 10.15ರ ಮಾಹಿತಿ ಪ್ರಕಾರ ಬೆಂಗಳೂರಿನ ಹಂಪಿನಲ್ಲಿ ಅತೀ ಹೆಚ್ಚು 2.65 ಸೆಂ.ಮೀ. ಮಳೆಯಾಗಿದೆ. ಗಾಳಿಆಂಜನೇಯ ದೇವಸ್ಥಾನ ವಾರ್ಡ್‌ನಲ್ಲಿ 2.4, ಕೊಟ್ಟಿಗೆ ಪಾಳ್ಯ, ವಿದ್ಯಾಪೀಠದಲ್ಲಿ ತಲಾ 2.3, ಕಾಟನ್‌ಪೇಟೆಯಲ್ಲಿ 2.2, ನಾಗಪುರದಲ್ಲಿ 2, ರಾಜಮಹಲ್ ಗುಟ್ಟಹಳ್ಳಿ, ದಯಾನಂದನಗರ, ಸಂಪಂಗಿರಾಮನಗರದಲ್ಲಿ ತಲಾ 1.95, ನಂದಿನಿ ಲೇಔಟ್‌ನಲ್ಲಿ 1.8, ನಾಯಂಡನಹಳ್ಳಿ ಹಾಗೂ ಕೋರಮಂಗಲದಲ್ಲಿ ತಲಾ 1.7, ಪಟ್ಟಾಭಿರಾಮನಗರ ಹಾಗೂ ಮಾರುತಿ ಮಂದಿರ ವಾರ್ಡ್‌ನಲ್ಲಿ 1.6 ಹಾಗೂ ಆಗ್ರಹಾರ ದಾಸರಹಳ್ಳಿಯಲ್ಲಿ 1.5 ಸೆಂ,ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
