ಕೆರೆಗಳ ನೀರಲ್ಲಿ ತೇಲುತ್ತಿದೆ ಬೊಮ್ಮನಹಳ್ಳಿ ವಲಯ! -200ಕ್ಕೂ ಹೆಚ್ಚು ಮನೆಗಳಿಗೆ ನೀರು 2 ಸಾವಿರಕ್ಕೂ ಅಧಿಕ ಜನರಿಗೆ ತೊಂದರೆ ಜನರ ಕಷ್ಟಕ್ಕೆ ಟೊಂಕ ಕಟ್ಟಿನಿಂತ ಶಾಸಕ ಸತೀಶ್ ರೆಡ್ಡಿ

ಬೆಂಗಳೂರು (ಸೆ.7) : ಕ್ಷೇತ್ರದಲ್ಲಿ ಮಳೆಯಿಂದಾಗಿ ಹಲವು ರೀತಿಯ ಸಮಸ್ಯೆ ಎದುರಾಗಿದೆ. ನೂರಾರು ಮನೆಗಳು, ಅಪಾರ್ಚ್‌ಮೆಂಟ್‌ಗಳ ಸೆಲ್ಲರ್‌ಗಳು ನೀರಿನಲ್ಲಿ ಮುಳುಗುತ್ತಿವೆ. ಕೆರೆಯ ನೀರು ನೇರವಾಗಿ ಕೆಲವು ಲೇಔಟ್‌ಗಳಿಗೆ ನುಗ್ಗಿದೆ. ಇದರಿಂದ 200ಕ್ಕೂ ಹೆಚ್ಚು ಮನೆಗಳಲ್ಲಿ ವಾಸವಾಗಿರುವ ಸುಮಾರು 2000 ಜನರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಈ ಬಾರಿ ಬಿಬಿಎಂಪಿ, ಜಲಮಂಡಳಿ, ಅಗ್ನಿಶಾಮಕ ದಳ ತ್ವರಿತವಾಗಿ ಸ್ಪಂದಿಸುತ್ತಿರುವುದು ಜನರಿಗೆ ತುಸು ನಿರಾಳರಾಗಿದ್ದಾರೆ.

Bengaluru: 51 ವರ್ಷಗಳಲ್ಲಿ ದಾಖಲೆಯ 709 ಎಂ.ಎಂ ಮಳೆ ಸುರಿದಿದೆ: ಬಿಬಿಎಂಪಿ ಮುಖ್ಯ ಆಯುಕ್ತ

ಎಚ್‌ಎಸ್‌ಆರ್‌ ಬಡಾವಣೆಯ 4, 6, 7ನೇ ಹಂತ, ವಿಜಯಶ್ರೀ ಬಡಾವಣೆ, ಅನುಗ್ರಹ ಲೇಔಟ್‌, ಹೊಂಗಸಂದ್ರದ ಮುನಿಯಪ್ಪ ಬಡಾವಣೆ, ಕೋಡಿಚಿಕ್ಕನಹಳ್ಳಿ ಬಡಾವಣೆಗಳ ತಗ್ಗುಪ್ರದೇಶ, ಇಬ್ಬಲೂರು ವ್ಯಾಪ್ತಿಯಲ್ಲಿ ತೀವ್ರವಾಗಿ ಸಮಸ್ಯೆಗೆ ಒಳಗಾಗಿವೆ. ಈ ಬಡಾವಣೆಗಳ ವ್ಯಾಪ್ತಿಯಲ್ಲಿ ಮಡಿವಾಳ ಕೆರೆ, ಬೆಳ್ಳಂದೂರು ಕೆರೆಗಳ ನೀರು ಹರಿದು ಹೋಗಲು ಇರುವ ರಾಜಕಾಲುವೆ ಒತ್ತುವಾರಿಯಾಗಿದೆ. ಇದರಿಂದ ಸಣ್ಣ ಮಳೆಗೂ ಅನುಗ್ರಹ ಬಡಾವಣೆ ತೀವ್ರ ತೊಂದರೆಗೆ ಒಳಗಾಗಿದೆ. ಇಲ್ಲಿನ 50 ಮನೆಗಳು ನೀರಿನಲ್ಲಿ ಮುಳುಗಿವೆ. ಇನ್ನು ಇಬ್ಬಲೂರಿನಲ್ಲಿ ಇರುವ ಸನ್‌ ಸಿಟಿ ಅಪಾರ್ಚ್‌ಮೆಂಟ್‌ ಸೆಲ್ಲರ್‌, ವಿಜಯಶ್ರೀ ಬಡಾವಣೆಯ ಹಲವು ಮನೆಗಳು, ಎಚ್‌ಎಸ್‌ಆರ್‌ ಲೇಔಟ್‌ನ 6ನೇ ಸೆಕ್ಟರ್‌ನ ಅಪಾರ್ಚ್‌ಮೆಂಟ್‌ಗಳ ಸೆಲ್ಲರ್‌ಗಳಿಗೆ ನೀರು ನುಗ್ಗಿದೆ. ಸದ್ಯಕ್ಕೆ ಇಲ್ಲಿನ ಜನರನ್ನು ಸ್ಥಳಾಂತರಿಸಿಲ್ಲ. ಜನರು ಅಲ್ಲಿಯೇ ವಾಸವಾಗಿದ್ದಾರೆ. ಅವರಿಗೆ ಬೇಕಾದ ಆಹಾರ, ನೀರು, ಇನ್ನಿತರ ವ್ಯವಸ್ಥೆಯನ್ನು ಬಿಬಿಎಂಪಿಯು ಕಲ್ಪಿಸಿದೆ. ಇನ್ನು ನೀರು ಸರಾಗವಾಗಿ ಹರಿದು ಹೋಗಲು ದೊಡ್ಡ ಮೋಟರ್‌ಗಳನ್ನು ಬಳಸಲಾಗುತ್ತಿದೆ. ಬಿಬಿಎಂಪಿಯ ಪ್ರಹರಿ ತಂಡವು ಜನರು ಕರೆ ಮಾಡಿದ ತಕ್ಷಣ ಅವರ ನೆರವಿಗೆ ಧಾವಿಸುತ್ತಿದೆ. ಅಲ್ಲದೆ ಶಾಸಕ ಎಂ.ಸತೀಶ್‌ ರೆಡ್ಡಿ ಅಧಿಕಾರಿಗಳ ಜೊತೆಯಲ್ಲಿಯೇ ಸ್ಥಳ ಪರಿಶೀಲನೆ ಮಾಡಿ, ತಕ್ಷಣ ಪರಿಹಾರಕ್ಕೆ ಸೂಚಿಸಿದ್ದಾರೆ.

Bengaluru Rain; 1998ರ ಬಳಿಕ ಮೊದಲ ಬಾರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ!

2017ರಿಂದಲೇ ಮಳೆುಂದ ಹೆಚ್ಚು ತೊಂದರೆಯನ್ನು ನಿವಾಸಿಗಳು ಅನುಭಸುತ್ತಿದ್ದು, ಡ್ರೈನ್ಸ್‌ ಶಿಲ್ಟಿಂಗ್‌ ಮಾಡದಿರುವುದೇ ಮಳೆ ನೀರು ಮನೆಗಳಿಗೆ ನುಗ್ಗಲು ಕಾರಣವಾಗಿದೆ. ಈ ಬಗ್ಗೆ ಬಿಬಿಎಂಪಿಗೆ ಹಲವಾರು ಭಾರಿ ದೂರು ನೀಡಿದರೂ, ಬೇಸಿಗೆಯಲ್ಲಿ ಮಾಡಬೇಕಾದ ಕಾಮಗಾರಿಗಳನ್ನು ಮಳೆಗಾಗಲದಲ್ಲಿ ಮಾಡುತ್ತಾರೆ. ಸಾರ್ವಜನಿಕರ ಹಣ ಪೋಲಾಗುತ್ತಿದೆ. ಪ್ರೈಮರಿ ಡ್ರೈನ್ಸ್‌ಗಳನ್ನು ಬಿಬಿಎಂಪಿ ಮುಚ್ಚಿ ಹಾಕಿದ್ದಾರೆ. ಇದರಿಂದಾಗಿ ಹೆಚ್ಚು ಅನಾಹುತವಾಗುತ್ತಿದೆ.

-ಶೈಲಜಾ, ವಕೀಲೆ, ಎಚ್‌ಎಸ್‌ಆರ್‌ ನಿವಾಸಿ

ಬಿಬಿಎಂಪಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆದಿದ್ದು, ಸಾರ್ವಜನಿಕರ ದೂರುಗಳಿಗೆ ಶೀಘ್ರ ಸ್ಪಂದಿಸಲಾಗುವುದು. ಮಳೆಯ ನೀರು ಸರಾಗವಾಗಿ ಹರಿಯುವಂತೆ ಈಗಾಗಲೇ ಹೆಚ್ಚು ಕ್ರಮ ಜರುಗಿಸಿದ್ದು, ಯಾವುದೇ ಹೆಚ್ಚಿನ ಅನಾಹುತವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಮಳೆ ಸಮಸ್ಯೆ: ಇಂದು ಕಂಪನಿಗಳೊಂದಿಗೆ ಸಭೆ

ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗಿರುವ ಅನಾಹುತ, ವಿಳಂಬವಾಗುತ್ತಿರುವ ಪರಿಹಾರ ಕಾರ್ಯಾಚರಣೆ ಬಗ್ಗೆ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸಮಸ್ಯೆಗಳ ಬಗ್ಗೆ ಚರ್ಚಿಸಲು ಐಟಿ-ಬಿಟಿ ಸಚಿವ ಡಾ ಅಶ್ವತ್ಥ ನಾರಾಯಣ ಅವರು ಸೆ.7ರಂದು ಸಾಫ್‌್ಟವೇರ್‌ ಕಂಪನಿಗಳ ಮುಖ್ಯಸ್ಥರು, ಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ಬುಧವಾರ ಸಂಜೆ 5ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್‌ ಆಯುಕ್ತರು, ಬೆಂಗಳೂರು ಜಲಮಂಡಳಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇಸ್ಫೋಸಿಸ್‌, ವಿಪ್ರೊ, ಎಂಫಸಿಸ್‌, ನಾಸ್ಕಾಂ, ಇಂಟೆಲ್‌, ಟಿಸಿಎಸ್‌, ಫಿಲಿಫ್ಸ್‌, ಸೊನಾಟಾ ಸಾಫ್‌್ಟವೇರ್‌ ಮುಂತಾದ ಕಂಪನಿಗಳ ಮುಖ್ಯಸ್ಥರು ಅಥವಾ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಕಂಪನಿಗಳ ಅಹವಾಲು ಆಲಿಸಲಾಗುವುದು. ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.