Asianet Suvarna News Asianet Suvarna News

Bengaluru Rain; 1998ರ ಬಳಿಕ ಮೊದಲ ಬಾರಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ!

ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆಯ ನಂತರ ನಿರಂತರವಾಗಿ ಮಳೆಯಾಗುತ್ತಿದ್ದು, ರಸ್ತೆಗಳ ಜಲಾವೃತವಾಗಿ ಜನಜೀವನ ಸಂಕಷ್ಟದಲ್ಲಿದೆ. 1998ರ ಬಳಿಕ ಬೆಂಗಳೂರಿನಲ್ಲಿ ಆಗಿರುವ ಮಹಾಮಳೆ  ಇದಾಗಿದೆ. 

After 1998  first time heavy rainfall in bengaluru gow
Author
First Published Sep 5, 2022, 6:05 PM IST

ಬೆಂಗಳೂರು (ಸೆ.5):  ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಸಂಜೆಯ ನಂತರ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಜೀವನ ಅಸ್ತವ್ಯಸ್ತವಾಗಿದೆ. ಮಹಾಮಳೆ ಗೆ ಜನರು ನಲುಗಿ ಹೋಗಿದ್ದಾರೆ. ಹಲವೆಡೆ ಮರದ ಕೊಂಬೆಗಳು ಮುರಿದು ರಸ್ತೆಗೆ ಬಿದ್ದಿದೆ. 1998ರ ಬಳಿಕ ಬೆಂಗಳೂರಿನಲ್ಲಿ ಆಗಿರುವ ಮಹಾಮಳೆ  ಇದಾಗಿದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,  ಆಗಸ್ಟ್ 30 ಮತ್ತು 31 ರ ರಾತ್ರಿ ಬೆಂಗಳೂರಿನಲ್ಲಿ ಬಹಳ ಮಳೆ ಆಗಿತ್ತು. ಆದರೆ ಹೆಚ್ಚೇನು ಹಾನಿ ಆಗಿರಲಿಲ್ಲ. ಆದ್ರೇ ಭಾನುವಾರ ಸುರಿದ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಬೊಮ್ಮನಹಳ್ಳಿ, ಮಹಾದೇವ ಪುರದಲ್ಲಿ ಈಸ್ಟ್ ಝೋನ್ ನಲ್ಲಿ ಹೆಚ್ಚಿನ ಮಳೆ ಆಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ 330mm ಮಳೆ ಆಗಬೇಕಿತ್ತು. ಆದರೆ ಭಾನುವಾರ 709mm ಮಳೆ ಆಗಿದೆ. ಇದು 1998ರ ಬಳಿಕ ಸುರಿದ ಸೆಕೆಂಡ್ ಹೈಯಸ್ಟ್ ಮಳೆ. 1998ರಲ್ಲಿ 725mm ಮಳೆ ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಸೆ. 3ರಂದು ಕೂಡ  ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್ ಹೊಡೆದು ಮಳೆ ಹಾನಿ ಸಂಬಂಧ ತಪಾಸಣೆ ನಡೆಸಿದ್ದರು. ಕೆ.ಆರ್.ಪುರಂ, ಗೊರುಗುಂಟೆಪಾಳ್ಯ, ಸುಮನಹಳ್ಳಿ ಸೇರಿ ಹಲವೆಡೆ  ಭೇಟಿ ನೀಡಿದ್ದರು.  ಆಯುಕ್ತರಿಗೆ ಅಧಿಕಾರಿಗಳು ಸಾಥ್ ನೀಡಿದ್ದರು.  

ರಸ್ತೆಗಳು ಜಲಾವೃತ: ನಗರದ ಕಸ್ತೂರಿ ಬಾ ರಸ್ತೆ, ರಿಚ್‌ಮಂಡ್‌ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋಡ್‌, ಆನಂದ್‌ ರಾವ್‌ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಶಿವಾನಂದ ವೃತ್ತದ ಬಳಿ ಮ್ಯಾನ್‌ ಹೋಲ್‌ನಿಂದ ನೀರು ಹೊರ ಬಂದು ಸಮಸ್ಯೆ ಉಂಟಾಯಿತು.

ಯೆಲ್ಲೋ ಅಲರ್ಚ್‌: ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ 8.30ರ ತನಕ ನಗರಕ್ಕೆ ‘ಯೆಲ್ಲೋ ಅಲರ್ಚ್‌’ (6.45 ಸೆಂ. ಮೀ ನಿಂದ 11.55 ಸೆಂ.ಮೀ) ಎಚ್ಚರಿಕೆ ನೀಡಲಾಗಿದೆ.

\Heavy Rain in Bengaluru: ನಗರದಲ್ಲಿ ಮಳೆರಾಯನ ಆರ್ಭಟ: ಯೆಲ್ಲೋ ಅಲರ್ಟ್

ರಾಜಮಹಲ್‌ ಗುಟ್ಟಹಳ್ಳಿ 8ಸೆಂ.ಮೀ, ಬಾಣಸವಾಡಿ ಮತ್ತು ವಿದ್ಯಾಪೀಠ 7.2, ಸಂಪಂಗಿರಾಮನಗರ 6.8, ಸೆಂ.ಮೀ, ಬೆಳ್ಳಂದೂರು 6.7 ಸೆಂ.ಮೀ, ವರ್ತೂರು 5.8, ಮಾರತಹಳ್ಳಿ 5.6, ಹಂಪಿನಗರ 4.4 ಸೆಂ.ಮೀ.

Heavy Rain in Bengaluru: ಇನ್ನೂ ಮೂರು ಗಂಟೆ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ಬಾಗಲಕುಂಟೆ ಮತ್ತು ರಾಜರಾಜೇಶ್ವರಿ ನಗರ (2), ಎಚ್‌ಎಎಲ್‌ ತಲಾ 6.4, ದೊಡ್ಡನೆಕ್ಕುಂದಿ 5.4, ಹೆಮ್ಮಿಗೆಪುರ 3.3, ಕೊನೇನ ಅಗ್ರಹಾರ 4.9, ದೊಡ್ಡಬಿದಿರಕಲ್ಲು 2.8, ದಯಾನಂದನಗರ 2.5, ಕಮ್ಮನಹಳ್ಳಿ ಮತ್ತು ಎಚ್‌.ಗೊಲ್ಲಹಳ್ಳಿ ತಲಾ 2.3, ಮನೋರಾಯನಪಾಳ್ಯ ಮತ್ತು ಶೆಟ್ಟಿಹಳ್ಳಿ ತಲಾ 2.1 ಸೆಂ.ಮೀ ಮಳೆಯಾಗಿದೆ.
 

Follow Us:
Download App:
  • android
  • ios