ಬೆಂಗಳೂರು ಮೈಸೂರು ಹೆದ್ದಾರಿ ಟೋಲ್‌ಗೆ ಪ್ರಕಾಶ್‌ ರಾಜ್‌ ವಿರೋಧ: ರಸ್ತೆ ಹಾಕ್ಸಿದ್‌ ನಮ್‌ ದುಡ್ಡು- ನಾವೇ ಟೋಲ್‌ ಕಟ್ಟಬೇಕು

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಯನ್ನು ಜನರ ತೆರಿಗೆ ಹಣದಿಂದಲೇ ನಿರ್ಮಿಸಲಾಗಿದ್ದು, ಈಗ ಟೋಲ್‌ ಸಂಗ್ರಹವನ್ನು ಯಾಕೆ ಮಾಡಲಾಗುತ್ತಿದೆ ಎಂದು ನಟ ಪ್ರಕಾಶ್‌ರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Prakash Raj opposes Bengaluru Mysuru Expressway toll collection on social media sat

ಬೆಂಗಳೂರು (ಮಾ.13): ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಿ ಮಾ.12ರಂದು ಅಧಿಕೃತವಾಗಿ ವಾಹನ ಸಂಚಾರಕ್ಕೆ ಉದ್ಘಾಟನೆಯನ್ನೂ ನೆರವೇರಿಸಲಾಗಿದೆ. ಆದರೆ, ಈ ರಸ್ತೆಯನ್ನು ಜನರ ತೆರಿಗೆ ಹಣದಿಂದಲೇ ನಿರ್ಮಿಸಲಾಗಿದ್ದು, ಈಗ ಟೋಲ್‌ ಸಂಗ್ರಹವನ್ನು ಯಾಕೆ ಮಾಡಲಾಗುತ್ತಿದೆ ಎಂದು ನಟ ಪ್ರಕಾಶ್‌ರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಜಸ್ಟ್‌ಆಸ್ಕಿಂಗ್‌ (#Justasking) ಎಂಬ ಹ್ಯಾಷ್‌ಟ್ಯಾಗ್‌ನಡಿ ಸರಣಿ ಟ್ವೀಟ್‌ಗಳನ್ನು ಮಾಡಿ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ವಿಧಿಸಲಾಗುತ್ತಿರುವ ಟೋಲ್‌ ದರವನ್ನು ವಿರೋಧಿಸಿದ್ದಾರೆ.

ನಾಳೆಯಿಂದಲೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್‌ ಆರಂಭ: ಸರ್ವಿಸ್‌ ರಸ್ತೆ ಸಂಚಾರಕ್ಕೆ ಮುಕ್ತ

"ಪ್ರಜೆಗಳ ದುಡ್ಡು ಎಲ್ಲಮ್ಮನ ಜಾತ್ರೆ.. ತಂತ್ರಜ್ಯಾನದ ವಿಶ್ವಗುರು ದಿಲ್ಲಿಯಿಂದಲೇ ಲೋಕಾರ್ಪಣೆ ಮಾಡಬಹುದಾದ ಹೆದ್ದಾರಿಗೆ... ಕುರಿಗಳ ಹಾಗೆ ಜನರನ್ನ ಹಣ, ಹೆಂಡ, ಬಿರ್ಯಾನಿ ಪ್ಯಾಕೆಟ್ ಕೊಟ್ಟು ಲಾರಿ, ಬಸ್ಸುಗಳಲ್ಲಿ ಕರ್ಕೊಂಡ ಬರೋ ದುಡ್ಡನ್ನ .. ಈ ಹೆದ್ದಾರಿಯಿಂದ  ದುಡಿಮೆ ಕಳೆದುಕೊಂಡ ಸಾವಿರಾರು ಬಡವರಿಗೆ ಹಂಚಬಹುದಿತ್ತಲ್ಲವೆ?" ಎಂದು ಪ್ರಶ್ನೆ ಮಾಡಿದ್ದಾರೆ. 

ರಸ್ತೆಯಲ್ಲಿ ಓಡಾಡೋಕೆ ಟೋಲ್‌ ಕಟ್ಟೋದು ನಾವೆ: ನೆನಪಿರಲಿ ಪ್ರಜೆಗಳೆ…. ರಸ್ತೆ ಹಾಕ್ಸಿದ್ ದುಡ್ ನಮ್ದು … ನಾಳೆ ಅದ್ರಲ್ಲಿ ಓಡಾಡೋಕೆ TOLL ಕಟ್ಟೋದು ನಾವೆ ..   ಇದನ್ನೂ Share ಮಾಡಿ ಎಂದು ಕೇಳಿದ್ದಾರೆ.   ಮತ್ತೊಂದೆಡೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೆ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಲೋಕಾರ್ಪಣೆ ಆಗಲಿದೆ ಎಂಬ ಮಾಹಿತಿಯನ್ನು ಸಂಸದ ಪ್ರತಾಪ್‌ಸಿಂಹ ಹಂಚಿಕೊಂಡಿದ್ದರು. ಇದನ್ನು ಇನ್ನಷ್ಟು ಜನರಿಗೆ ತಿಳಿಯುವಂತೆ ಮಾಡಲು ಶೇರ್‌ ಮಾಡಿ ಎಂದು ಹೇಳಿದ್ದರು. ಅವರ ಟ್ವಿಟರ್‌ಗೆ ಟಾಂಗ್‌ ನೀಡುವ ನಿಟ್ಟಿನಲ್ಲಿ ರಸ್ತೆ ನಮ್ಮದು, ದುಡ್ಡು ನಮ್ಮದು, ಸಂಚಾರ ಮಾಡೋರು ನಾವು, ಟೋಲ್‌ ಕಟ್ಟೋರು ಕೂಡ ನಾವೇ ಎಂಬುದನ್ನೂ ಕೂಡ ಶೇರ್‌ ಮಾಡಿ ಎಂದು ಹೇಳಿದ್ದಾರೆ.

ವಾಹನ ಸವಾರರಿಗೆ ಮತ್ತೆ ಬರೆ: ಏಪ್ರಿಲ್‌ 1ರಿಂದ ಹೈವೇ ಟೋಲ್‌ ದರ ಶೇ. 5ರಿಂದ ಶೇ.10 ರಷ್ಟು ಏರಿಕೆ..?

ಚಕ್ಕಂತ ಯಾರ್ ಹೇಳಿ ನೋಡೋಣ:  ಇನ್ನು ನರೇಂದ್ರ ಮೋದಿ ಮಂಡ್ಯಕ್ಕೆ ಬಂದು ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಿ ಹೋಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಕಾಶ್‌ರಾಜ್‌ " ಫ್ರೆಂಡ್ಸ್…. ಅವರ್ ಬಂದ್ರು… ಹಾರ ತುರಾಯಿ ಹಾಕಸ್ಕೊಂಡ್ರು……ಒಂದಿಬ್ರನ್ ಬೈದ್ರು.. ಒಂದಿಬ್ರನ್ ತಮ್ ಪಕ್ಷಕ್ ಸೇರುಸ್ಕೊಂಡ್ರು… ಹೊಂಟೋದ್ರು … ಚಕ್ಕಂತ ಯಾರ್ ಹೇಳಿ ನೋಡೋಣ" ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಕೆಲವು ಸ್ಥಳದಲ್ಲಿ ರಸ್ತೆ ಕಾಮಗಾರಿ ಪೂರ್ಣ ಆಗದಿರುವ ಕುರಿತ ವೀಡಿಯೋವನ್ನು ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ ಟೋಲ್‌ ಸಂಗ್ರಹ ಆರಂಭ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ (ಮಾ.14ರ ಬೆಳಗ್ಗೆ 8 ಗಂಟೆಯಿಂದ)  ಟೋಲ್ ಸಂಗ್ರಹ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಧಾರ ಮಾಡಲಾಗಿದೆ. ಈಗ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟದವರೆಗೆ ಟೋಲ್‌ ಸಂಗ್ರಹ ಮಾಡಲಾಗುತ್ತಿದ್ದು, ಈ ಭಾಗದಲ್ಲಿನ ಎಲ್ಲ ಸರ್ವಿಸ್‌ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್‌ ಸಂಗ್ರಹವನ್ನು ಆರಂಭಿಸಲಾಗುತ್ತಿದೆ.

Latest Videos
Follow Us:
Download App:
  • android
  • ios