ಬೆಂಗಳೂರಿಗೆ ಆಗಮಿಸಿದ್ದ ವೇಳೆ ಕೊರೋನಾ ಸೋಂಕು ಪೀಡಿತ ಹೈದ್ರಬಾದ್ ಟೆಕ್ಕಿ ಉಳಿದುಕೊಂಡಿದ್ದ ಪಿಜಿಯ ಆತಮ ರೂಮ್ ಮೇಟ್  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಬೆಂಗಳೂರು [ಮಾ.03] : ಕೊರೋನಾ ಸೋಂಕಿತ ದುಬೈನಿಂದ ಬೆಂಗಳೂರಿಗೆ ಆಮಿಸಿದ್ದ ಹೈದರಬಾದ್ ಮೂಲದ ಟೆಕ್ಕಿ ಉಳಿದುಕೊಂಡಿದ್ದ ಪಿಜಿಯ ರೂಮ್ ಮೇಟ್ ಆಸ್ಪತ್ರೆಗೆ ದಾಖಲಾಗಿದ್ದಾನೆ. 

ನೆಗಡಿ ಜ್ವರದ ಸಮಸ್ಯೆಯಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಕೊರೋನಾ ಸೋಂಕಿತ ಟೆಕ್ಕಿ ದುಬೈನಿಂದ ಆಗಮಿಸಿ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಂಚರಿಸಿದ್ದು, ಈ ವೇಳೆ ಆತ ಇಲ್ಲಿನ ಪಿಜಿಯೊಂದರಲ್ಲಿ ನೆಲೆಸಿದ್ದ. 

ಕ್ರಿಕೆಟ್‌ಗೆ ತಟ್ಟಿದ ಕೊರೊನಾ ವೈರಸ್; ಸಂಕಷ್ಟದಲ್ಲಿ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯ!...

ಆತ ನೆಲೆಸಿದ್ದ ರೂಮ್ ನಲ್ಲಿಯೇ ಇದ್ದ ವ್ಯಕ್ತಿಗೆ ಅನಾರೋಗ್ಯ ಕಾಡಿದ್ದು ಆತನ ರಕ್ತದ ಮಾದರಿ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಆತನಿಗೆ ಚಿಕಿತ್ಸೆ ಮುಂದುವರಿಯಲಿದೆ. 

ವಿಶ್ವದ ಶೇ.70ರಷ್ಟು ಜನರಿಗೆ ಕೊರೋನಾ ಭೀತಿ : ಹೊರಬಿತ್ತು ಮತ್ತೊಂದು ಆತಂಕದ ವಿಚಾರ...

 ಎರಡು ದಿನಗಳ ಕಾಲ ಟೆಕ್ಕಿ ಸಂಪರ್ಕದಲ್ಲಿದ್ದ ಎಲ್ಲಾ ಜನರನ್ನೂ ಕೂಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲರ ಮೇಲೆಯೂ 14 ದಿನಗಳ ಕಾಲ ನಿಗಾ ಇಡಲಾಗಿದೆ.