Asianet Suvarna News Asianet Suvarna News

ಬೆಂಗಳೂರಿಗೆ ಬೆಂಕಿ ಕಾಟ: 50ಕ್ಕೂ ಅಧಿಕ ಐಷಾರಾಮಿ ಖಾಸಗಿ ಬಸ್‌ಗಳು ಬೆಂಕಿಗಾಹುತಿ

ಬೆಂಗಳೂರಿನ ವೀರಭದ್ರ ನಗರದಲ್ಲಿರುವ ಖಾಸಗಿ ಬಸ್‌ನ ಗ್ಯಾರೇಜ್‌ನಲ್ಲಿ ನಿಂತಿದ್ದ 50ಕ್ಕೂ ಅಧಿಕ ಐಷಾರಾಮಿ ಖಾಸಗಿ ಬಸ್‌ಗಳು ಬೆಂಕಿಗಾಹುತಿಯಾಗಿವೆ. 

Bengaluru fire incident More than 50 private buses caught fire at veerabhadra Nagar sat
Author
First Published Oct 30, 2023, 1:17 PM IST

ಬೆಂಗಳೂರು (ಅ.30): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರಿನ ವೀರಭದ್ರ ನಗರದ ಗ್ಯಾರೇಜ್‌ ಬಳಿ ನಿಲ್ಲಿಸಲಾಗಿದ್ದ 50ಕ್ಕೂ ಅಧಿಕ ಖಾಸಗಿ ಬಸ್‌ಗಳಿಗೆ ಬೆಂಕಿ ಹತ್ತಿಕೊಂಡು ಸ್ಥಳದಲ್ಲಿಯೇ ಸುಟ್ಟು ಕರಕಲಾಗಿವೆ. ಇನ್ನು ಯಾವುದೇ ಪ್ರಾಣಹಾನಿ ಆಗಿರುವ ಮಾಹಿತಿ ಲಭ್ಯವಾಗುತ್ತಿಲ್ಲ.

ಬೆಂಗಳೂರು- ಮೈಸೂರು ರಸ್ತೆಯ ಅನತಿ ದೂರದಲ್ಲಿರುವ ವೀರಭದ್ರ ನಗರದ ಬಸ್‌ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ 50ಕ್ಕೂ ಹೆಚ್ಚು ಬಸ್‌ಗಳು ಬೆಂಕಿಗಾಹುತಿಯಾಗಿವೆ. ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಬಸ್ ಗಳಿಗೆ ಬೆಂಕಿ ತಗುಲಿದ್ದು, ತೀವ್ರ ಹತ್ತಿರ ಹತ್ತಿರದಲ್ಲಿ ಬಸ್‌ಗಳನ್ನು ನಿಲ್ಲಿಸಿದ್ದರಿಂದ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿದೆ. ಆದ್ದರಿಂದ ಘಟನಾ ಸ್ಥಳಕ್ಕೆ 5ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿವೆ. ಆದರೆ, ಬೆಂಕಿ ಕೆನ್ನಾಲಿಗೆ ಜೋರಾಗಿದ್ದ ಹಿನ್ನೆಲೆಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಬಸ್‌ಗಳು ಸುಟ್ಟು ಕರಕಲಾಗಿವೆ. 

61 ಸ್ಕೀಂಗಳಿಗೆ ಕೇಂದ್ರ ಸರ್ಕಾರ ನಯಾಪೈಸೆ ಕೊಟ್ಟಿಲ್ಲ: ಸಿಎಂ ಕಿಡಿ

ವೀರಭದ್ರ ನಗರದಲ್ಲಿ ಖಾಲಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಗ್ಯಾರೇಜ್‌ ಬಳಿ ಖಾಸಗಿ ಬಸ್‌ಗಳ ಸರ್ವಿಸ್‌, ರಿಪೇರಿ ಹಾಗೂ ಇತರೆ ದುರಸ್ತಿ ಮಾಡಲಾಗುತ್ತಿತ್ತು. ಇಲ್ಲಿ ನೂರಾರು ಖಾಸಗಿ ಬಸ್‌ಗಳು ಬಂದು ರಿಪೇರಿ ಹಾಗೂ ಸರ್ವಿಸ್‌ಗಾಗಿ ನಿಲ್ಲುತ್ತಿದ್ದವು. ಜೊತೆಗೆ, ಖಾಲಿ ಪ್ರದೇಶದಲ್ಲಿ ಖಾಸಗಿ ಬಸ್‌ಗಳ ಪಾರ್ಕಿಂಗ್‌ ತಾಣವನ್ನಾಗಿ ಮಾಡಲಾಗಿತ್ತು. ನೂರಾರು ಬಸ್‌ಗಳು ನಿಲ್ಲಿಸುವ ತಾಣವಾಗಿದ್ದರೂ ಇಲ್ಲಿ ಬೆಂಕಿ ನಿರೋಧಕ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದ್ದರಿಂದ ಖಾಸಗಿ ಬಸ್‌ಗಳ ಗ್ಯಾರೇಜ್‌ ನಂತರದ ಖಾಸಗಿ ಬಸ್‌ಗಳ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿತ್ತು.

ಕೆವು ಐಷಾರಾಮಿ ಸ್ಲೀಪರ್‌ ಕೋಚ್‌ ಬಸ್‌ಗಳನ್ನು ಇಲ್ಲಿ ತಂದು ನಿಲ್ಲಿಸಲಾಗುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ಎಲ್ಲ ಬಸ್‌ಗಳು ನಿಗದಿತಪ್ರದೇಶಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತಗತಿದ್ದವು. ಇನ್ನು ಸೋಮವಾರ ರಾಜ್ಯ ಹಾಘೂ ಹೊರ ರಾಹ್ಯದ ವಿವಿಧ ಮೂಲೆಗಳಿಂದ ಪ್ರಯಾಣಿಕರನ್ನು ಕರೆತಂದಿದ್ದ ಬಸ್‌ಗಳು ಪಾರ್ಕಿಂಗ್‌ ಸ್ಥಳಕ್ಕೆ ಬಂದು ನಿಂತಿದ್ದವು. ಆದರೆ, ಒಂದು ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಢ ಸಂಭವಿಸುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂಸಿ ಹೊರಗೆ ಓಡಿ ಹೋಗಿದ್ದಾರೆ. ಆದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರು: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್‌ ಬ್ಯಾಂಕ್

ಇನ್ನು ಸ್ಥಳಕ್ಕೆ 5 ಅಗ್ನಿಶಾಮಕ ವಾಹನ, ಸಿಬ್ಬಂದಿ ದೌಡಾಯಿಸಿದ್ದರು. ಸುಮಾರು 50 ಬಸ್ ಗಳು ಭಸ್ಮವಾಗಿದ್ದು, ಬೆಂಕಿ ಜ್ವಾಲೆಯಲ್ಲಿ ಯಾರೊಬ್ಬರೂ ಬಿದ್ದು ಸಾವನ್ನಪ್ಪಿದ ಬಗ್ಗೆ ವರದಿಯಾಗಿಲ್ಲ. ಬಸ್ ಗ್ಯಾರೆಜ್ ನಲ್ಲಿ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಮಧ್ಯಾಹ್ನ 1.20ರವರೆಗೆ ಬೆಂಕಿಯ ಕೆನ್ನಾಲಿಗೆ ಬಸ್‌ಗಳನ್ನು ಸುಟ್ಟುಹಾಕಿದೆ. ಮತ್ತೊಂದೆಡೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ನೀಡಿದ್ದರೂ 
ಇನ್ನೂ ಧಗಧಗಿಸಿ ಉರಿಯುತ್ತಿರುವ ಬೆಂಕಿಯಾವುದೇ ಕ್ರಮ ಕೈಗೊಂಡಿದಲ್ಲ ಎಂದು ತಿಳಿಸಿದರು.

Follow Us:
Download App:
  • android
  • ios