Asianet Suvarna News Asianet Suvarna News

ಮಂಡ್ಯದಲ್ಲಿ ಕೇಸರಿ ಧ್ವಜ ತೆರವು ಬೆನ್ನಲ್ಲಿಯೇ, ಶಿವಾಜಿನಗರ ಹಸಿರು ಧ್ವಜವನ್ನೂ ತೆರವುಗೊಳಿಸಿದ ಪೊಲೀಸರು!

ಮಂಡ್ಯದ ಕೆರಗೋಡಿನಲ್ಲಿ ಅಳವಡಿಕೆ ಮಾಡಿದ್ದ ಕೇಸರಿ ಬಣ್ಣದ ಹನುಮ ಧ್ವಜದ ತೆರವುಗೊಳಿಸಲಾಗಿದರ. ಇಕ ಬೆಂಗಳೂರು ನಗರ ಪೊಲೀಸರು ಶಿವಾಜಿನಗರದಲ್ಲಿ ಅಳವಡಿಸಿದ್ದ ಹಸಿರು ಧ್ವಜವನ್ನು ತೆರವುಗೊಳಿಸಿದ್ದಾರೆ. 

Bengaluru city police was muslim flag removed on installed at Shivaji Nagar Chandni chowk sat
Author
First Published Jan 30, 2024, 4:20 PM IST

ಬೆಂಗಳೂರು (ಜ.30): ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಉಂಟಾದ ಹನುಮಧ್ವಜ (ಕೇಸರಿ ಧ್ವಜ) ತೆರವಿನಿಂದಾದ ವಿವಾದ ಪ್ರಕರಣ ಇಡೀ ರಾಜ್ಯದಲ್ಲಿಯೇ ಧ್ವಜ ದಂಗಲ್‌ಗೆ ಕಾರಣವಾಗಿದೆ. ಕೆರಗೋಡಿನಲ್ಲಿ ಅಳವಡಿಸಿದ್ದ ಕೇಸರಿ ಧ್ವಜವನ್ನು ಮಂಡ್ಯ ಪೊಲೀಸರು ತೆರವುಗೊಳಿಸಿದ ಬೆನ್ನಲ್ಲಿಯೇ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿ ಅಳವಡಿಸಿದ್ದ ಹಸಿರು (ಮುಸ್ಲಿಂ) ಧ್ವಜವನ್ನು ಬೆಂಗಳೂರು ಪೊಲೀಸರು ತೆರವುಗೊಳಿಸಿದ್ದಾರೆ.

ಕೆರಗೋಡಿನಲ್ಲಿ ಸ್ಥಳೀಯ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ ವತಿಯಿಂದ 108 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಿ ಅದರಲ್ಲಿ ಹನುಮಧ್ವಜ ಅಳವಡಿಕೆ ಮಾಡಲಾಗಿತ್ತು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಒಂದು ಧರ್ಮಕ್ಕೆ ಸಂಬಂಧಿಸಿದ ಧ್ವಜವನ್ನು ಹಾರಿಸುವಂತಿಲ್ಲ ಎಂದು ಸರ್ಕಾರ ಕೂಡಲೇ ಅದನ್ನು ತೆರವು ಮಾಡಲು ಮುಂದಾಗಿತ್ತು. ಮಂಡ್ಯ ಜಿಲ್ಲಾ ಪೊಲೀಸರು ಬೆಳ್ಳಂಬೆಳಗ್ಗೆ ಬಂದು ಕೇಸರಿ ಧ್ವಜವನ್ನು ತೆರವುಗೊಳಿಸಿದ್ದರು. ಇದರ ಬೆನ್ನಲ್ಲಿಯೇ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜ್ಯಾದ್ಯಂತ ಕೇಸರಿ ಧ್ವಜದ ದಂಗಲ್ ಸೃಷ್ಟಿಯಾಗಿದೆ.

ಕೆರಗೋಡು ಹನುಮಧ್ವಜ ವಿವಾದಕ್ಕೆ ಪಿಡಿಒ ತಲೆದಂಡ ಕೊಟ್ಟ ಸರ್ಕಾರ!

ಇನ್ನು ಮಂಡ್ಯದ ಕೆರಗೋಡಿನಲ್ಲಿ ಕಳೆದ ಮೂರು ದಿನಗಳ ಹಿಂದೆ ಹನುಮ ಧ್ವಜವನ್ನು ತೆರವುಗೊಳಿಸಿ ಮರುದಿನ ರಾಷ್ಟ್ರಧ್ವಜವನ್ನು ಅಳವಡಿಕೆ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ಶಿವಾಜಿನಗರದ ಚಾಂದಿನಿ ಚೌಕ್‌ನ ಹೈ-ಮಾಸ್ಕ್‌ ವಿದ್ಯುತ್‌ ಕಂಬದಲ್ಲಿ ಅಳವಡಿಕೆ ಮಾಡಲಾಗಿದ್ದ ಹಸಿರು (ಮುಸ್ಲಿಂ) ಧ್ವಜವನ್ನು ಬೆಂಗಳೂರು ಪೊಲೀಸರು ತೆರವುಗೊಳಿಸಿದ್ದಾರೆ. ನಂತರ ಮತ್ತೊಮ್ಮೆ ಅಲ್ಲಿ ಯಾವುದೇ ಧರ್ಮದ ಬಾವುಟವನ್ನು ಅಳವಡಿಕೆ ಮಾಡಲು ಅವಕಾಶವಿಲ್ಲದಂತೆ ರಾಷ್ಟ್ರಧ್ವಜದ ಬಾವುಟವನ್ನು ಅಳವಡಿಕೆ ಮಾಡಲಾಗಿದೆ.

ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿ ಹೈಮಾಸ್ಕ್‌ ವಿದ್ಯುತ್ ದೀಪದ ಕಂಬದಲ್ಲಿ ಮುಸ್ಲಿಂ ಧ್ವಜ ಹಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್‌ನಲ್ಲಿ) ಪೋಸ್ಟ್ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಆಯುಕ್ತರಿಗೆ ಡ್ಯಾಗ್ ಮಾಡಲಾಗಿತ್ತು. ಶಿವಾಜಿನಗರದ ಚಾಂದಿನಿ ಚೌಕ್ ಬಿಬಿಎಂಪಿ ವ್ಯಾಪ್ತಿಗೆ ಸೇರಿರುತ್ತದೆ. ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಚಾಂದಿನಿ ಚೌಕ್‌ನಲ್ಲಿ ಮುಸ್ಲಿಂ ಧ್ವಜ ಅಳವಡಿಕೆ ಮಾಡಲು ಬಿಬಿಎಂಪಿ ಅನುಮತಿ ಪಡೆದಿದ್ದಾರೆಯೇ ಎಂದು ಪರಿಶೀಲನೆ ಮಾಡಿದ್ದಾರೆ. ಆಗ ಯಾವುದೇ ಅನುಮತಿಯನ್ನೂ ಪಡೆಯದೇ ಅನಧಿಕೃತವಾಗಿ ಒಂದು ಧರ್ಮದ ಧ್ವಜ ಅಳವಡಿಕೆ ಮಾಡಿವುದು ತಿಳಿದುಬಂದಿದೆ. 

Mandya: ಹನುಮ ಧ್ವಜ ವಿವಾದ ಪ್ರಕರಣ: ಯಾರದ್ದು ಸರಿ? ಯಾರದ್ದು ತಪ್ಪು? ಜೋರಾಗಿದೆ ಚರ್ಚೆ

ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಬಾವುಟ ಹಾರಾಟವನ್ನು ತೆರವುಗೊಳಿಸಲು ಮುಂದಾದ ಪೊಲೀಸ್ ಇಲಾಕೆ ಬಿಬಿಎಂಪಿ ಬೀದಿ ದೀಪ ನಿರ್ವಹಣೆ ಸಿಬ್ಬಂದಿಯ ನೆರವಿನೊಂದಿಗೆ ಚಾಂದಿನ ಚೌಕ್‌ನಲ್ಲಿದ್ದ ಮುಸ್ಲಿಂ ಧ್ವಜ ತೆರವುಗೊಳಿಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಮಸೀದಿ ಸಿಬ್ಬಂದಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರನ್ನು ಕರೆಸಿ ಪೊಲೀಸರು ತಿಳುವಳಿಕೆ ಹೇಳಿದ್ದಾರೆ. ಆದರೆ, ಪೊಲೀಸರ ನಡೆಯನ್ನು ವಿರೋಧಿಸಿದ ಸೈಯದ್ ಅಕ್ಮಲ್ ಪಾಷಾ ಅವರು ಇಲ್ಲಿ ಕಳೆದ 30 ವರ್ಷದಿಂದ ಬಾವುಟ ಅಳವಡಿಕೆ ಮಾಡಲಾಗುತ್ತಿದೆ. ಆದರೆ, ಈಗ ಪೊಲೀಸರು ಬಂದು ಹೇಳಿದ್ರು ತೆಗೆದಿದ್ದೇವೆ. ಯಾವುದೇ ಸಮಸ್ಯೆ ಆಗಬಾರದೆಂದರೆ ತೆರವು ಮಾಡುವಂತೆ ಪೊಲೀಸರು ತಿಳಿಸಿದ್ದರಿಂದ ಅದನ್ನು ತೆರವುಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios