Asianet Suvarna News Asianet Suvarna News

Bengaluru: ಬಳ್ಳಾರಿ ರಸ್ತೆಗಾಗಿ 54 ಮರಕ್ಕೆ ಕೊಡಲಿ: ನಾಗರಿಕರು ಬೇಸರ

ನಗರದ ಬಳ್ಳಾರಿ ರಸ್ತೆಯ ಅಗಲೀಕರಣಕ್ಕೆ 54 ಮರಗಳನ್ನು ಸಂಪೂರ್ಣವಾಗಿ ಕತ್ತರಿಸಿ ತೆರವುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕೆಲವು ಕಡೆ ಕಿರಿದಾದ ರಸ್ತೆ ಇರುವುದರಿಂದ ವಾಹನಗಳ ದಟ್ಟಣೆ ಆಗಿ ಸಂಚಾರ ಸಮಸ್ಯೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ 54 ಮರಗಳನ್ನು ಬಿಬಿಎಂಪಿ ಅರಣ್ಯ ವಿಭಾಗ ಕತ್ತರಿಸಿದೆ.

bbmp 54 trees cut for Bellary Road at bengaluru rav
Author
First Published Jan 2, 2023, 8:55 AM IST

ಬೆಂಗಳೂರು (ಜ.2) : ನಗರದ ಬಳ್ಳಾರಿ ರಸ್ತೆಯ ಅಗಲೀಕರಣಕ್ಕೆ 54 ಮರಗಳನ್ನು ಸಂಪೂರ್ಣವಾಗಿ ಕತ್ತರಿಸಿ ತೆರವುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕೆಲವು ಕಡೆ ಕಿರಿದಾದ ರಸ್ತೆ ಇರುವುದರಿಂದ ವಾಹನಗಳ ದಟ್ಟಣೆ ಆಗಿ ಸಂಚಾರ ಸಮಸ್ಯೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ 54 ಮರಗಳನ್ನು ಬಿಬಿಎಂಪಿ ಅರಣ್ಯ ವಿಭಾಗ ಕತ್ತರಿಸಿದೆ.

ಬಳ್ಳಾರಿ ರಸ್ತೆ(Bellari road)ಯ ಮೇಖ್ರಿ ವೃತ್ತದಿಂದ ಗಾಯತ್ರಿ ವಿಹಾರ್‌(gayatri vihar) ಪ್ರದೇಶ ದ್ವಾರದವರೆಗೆ ಬಲಭಾಗದಲ್ಲಿ 11.50 ಮೀಟರ್‌ ಮತ್ತು ಎಡ ಭಾಗದಲ್ಲಿ 11.20 ಮೀಟರ್‌ ವಿಸ್ತೀರ್ಣದ ರಸ್ತೆ ಇದೆ. ಗಾಯತ್ರಿ ವಿಹಾರ್‌ ಪ್ರವೇಶ ದ್ವಾರದಿಂದ ಕಾವೇರಿ ಜಂಕ್ಷನ್‌ವರೆಗಿನ ರಸ್ತೆಯು ಕಿರಿದಾಗಿದೆ. ಇಲ್ಲಿ ಬಲಗಡೆ 7.0 ಮೀಟರ್‌ ಮತ್ತು ಎಡಗಡೆ 7.50 ಮೀಟರ್‌ ರಸ್ತೆ ಮಾತ್ರ ಇದೆ. 630 ಮೀಟರ್‌ ಇರುವ ಕಿರಿದಾದ ರಸ್ತೆಯಲ್ಲಿ ವಾಹನಗಳು ಬಂದು ಜಮಾವಣೆ ಆಗಿ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

Bengaluru News: 2 ಸಮಾರಂಭಗಳಿಂದಾಗಿ ನಲುಗಿದ ಬಳ್ಳಾರಿ ರಸ್ತೆ!

ಕಿರಿದಾಗಿರುವ 630 ಮೀಟರ್‌ ರಸ್ತೆ ಸಂಚಾರಕ್ಕೆ ಸುಮಾರು 30 ನಿಮಿಷ ಬೇಕಾಗಲಿದೆ. ಹೀಗಾಗಿ, ಎಡ ಭಾಗದ ರಸ್ತೆಯನ್ನು 7 ಮೀಟರ್‌ನಿಂದ 9.50 ಮೀಟರ್‌ಗೆ ಮತ್ತು ಬಲ ಭಾಗದ 7.50 ಮೀಟರ್‌ ನಿಂದ 9.5 ಮೀಟರ್‌ವರೆಗೆ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ(BBMP)ಯ ಎಂಜಿನಿಯರ್‌ ವಿಭಾಗ ನಿರ್ಧರಿಸಿತ್ತು. ಆದರೆ, ರಸ್ತೆ ಅಗಲೀಕರಣಕ್ಕೆ 58 ಮರಗಳನ್ನು ತೆರವು ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗವು ಮನವಿ ಸಲ್ಲಿಸಿತ್ತು.

ಮನವಿ ಪರಿಶೀಲಿಸಿದ ಅರಣ್ಯ ವಿಭಾಗ, ತಜ್ಞರ ಸಮಿತಿಯಲ್ಲಿ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಿ 58 ಮರಗಳ ಪೈಕಿ 54 ಮರಗಳನ್ನು ಸಂಪೂರ್ಣವಾಗಿ ಕತ್ತರಿಸುವುದಕ್ಕೆ ಅನುಮತಿ ನೀಡಿತ್ತು. ಉಳಿದ ಎರಡು ಮರಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ಇನ್ನೆರಡು ಮರಗಳನ್ನು ಅಲ್ಲಿಯೇ ಉಳಿಸುವಂತೆ ಸೂಚನೆ ನೀಡಿತ್ತು. 

ಏರ್‌ಪೋರ್ಟ್ ರಸ್ತೆ ವಿಸ್ತರಿಸಲು ಏನು ಮಾಡಿದ್ದೀರಿ, ವರದಿ ನೀಡಿ: ಹೈಕೋರ್ಟ್

Follow Us:
Download App:
  • android
  • ios