ಬೆಂಗಳೂರು ಏರ್‌ಪೋರ್ಟ್ ಟ್ಯಾಕ್ಸಿ: ಊಬರ್ ಆ್ಯಪ್ ಹೆಸರಲ್ಲಿ ವಂಚನೆ
ಮೊದಲಿಗೆ ಎಲ್ಲವೂ ಸರಿಯಾಗಿದೆ ಅಂತ ಅನಿಸಿತ್ತು. ಯಾವ ತೊಂದರವೂ ಕಾಣಿಸಲಿಲ್ಲ. ಆದರೆ, ಪ್ರಯಾಣ ಮುಗಿದ ಮೇಲೆ ಸಮಸ್ಯೆ ಶುರುವಾಯ್ತು.
ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ವಂಚನೆಗಳು ನಡೆಯುತ್ತಿವೆ. ಹೇಗೆ ನೋಡಿದರೂ ಮೋಸ ಹೋಗುವ ಪರಿಸ್ಥಿತಿ ಇದೆ. ಅಂತಹದ್ದೇ ಒಂದು ಅನುಭವವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಟ್ಯಾಕ್ಸಿ ಚಾಲಕನೊಬ್ಬ ತನ್ನನ್ನು ಹೇಗೆ ವಂಚಿಸಲು ಪ್ರಯತ್ನಿಸಿದನು ಎಂದು ಅವರು ಹೇಳಿದ್ದಾರೆ. ಕ್ಯಾಬ್ ಚಾಲಕ ಊಬರ್ ತರಹದ ಆ್ಯಪ್ ಬಳಸಿ ಹೆಚ್ಚಿನ ಹಣ ತೋರಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ವ್ಯಕ್ತಿ ತನ್ನ ಅನುಭವವನ್ನು ಎಕ್ಸ್‌ನಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ. ಮಹೇಶ್ (@mister_whistler) ಎಂಬುವವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಟ್ಯಾಕ್ಸಿಗಳಲ್ಲಿ ಹೊಸ ವಂಚನೆ ಎಂದು ಅವರು ಬರೆದಿದ್ದಾರೆ. Blumeter ಎಂಬ ಆ್ಯಪ್ ಅನ್ನು ಚಾಲಕ ಬಳಸಿದ್ದಾನೆ ಎಂಬುದು ತಿಳಿದುಬಂದಿದೆ.
ನನಗೆ ಚಾಲಕ ವಿಶ್ವಾಸ ಮೂಡಿಸಲು ಮೊದಲು ಸ್ಟಾರ್ಟ್ ಬಟನ್ ಕ್ಲಿಕ್ ಮಾಡಿದ ಎಂದು ಮಹೇಶ್ ಬರೆದಿದ್ದಾರೆ. ಮೊದಲಿಗೆ ಎಲ್ಲವೂ ಸರಿಯಾಗಿದೆ ಅಂತ ಅನಿಸಿತ್ತು. ಯಾವ ತೊಂದರೆವೂ ಕಾಣಿಸಲಿಲ್ಲ. ಆದರೆ, ಪ್ರಯಾಣ ಮುಗಿದ ಮೇಲೆ ಸಮಸ್ಯೆ ಶುರುವಾಯ್ತು. ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಆ್ಯಪ್ ತೋರಿಸಿತು. 1,000 ರೂಪಾಯಿಗಳನ್ನು ಟ್ಯಾಕ್ಸಿ ದರವಾಗಿ ತೋರಿಸಲಾಗಿತ್ತು. ಯಾಕೆ ಹೀಗೆ ಎಂದು ಕೇಳಿದಾಗ ಜಿಎಸ್‌ಟಿ ಸೇರಿಸಿ ಎಂದು ಚಾಲಕ ಹೇಳಿದ್ದಾನೆ.
ಆದರೆ, ಸರಿಯಾದ ಬಿಲ್ ಕೊಡಬೇಕೆಂದು ಮಹೇಶ್ ಒತ್ತಾಯಿಸಿದರು. ಅದನ್ನು ನಂತರ ಕೊಡುವುದಾಗಿ ಚಾಲಕ ಹೇಳಿದ್ದಾನೆ. ಬಿಲ್ಲಿಂಗ್ ವ್ಯವಸ್ಥೆಯಲ್ಲಿ ದೋಷವಿದೆ ಎಂದೂ, ನಂತರ ಮೇಲ್ ಮೂಲಕ ಕಳುಹಿಸುವುದಾಗಿ ಚಾಲಕ ಹೇಳಿದ್ದಾನೆ. ಆದರೆ, ಫೋನ್ ನಂಬರ್ ಅಥವಾ ಮೇಲ್ ಐಡಿಯನ್ನು ಅವರು ಕೇಳಿರಲಿಲ್ಲ. ಚಾಲಕ ಸುಳ್ಳು ಹೇಳುತ್ತಿದ್ದಾನೆ ಎಂದು ಮಹೇಶ್‌ಗೆ ಅರ್ಥವಾಯಿತು.
ಇದನ್ನೂ ಓದಿ: ಬೆಂಗಳೂರು 1700 ರೂ.ಗೆ ಏರ್‌ಪೋರ್ಟ್ ಫ್ಲೈಯಿಂಗ್ ಟ್ಯಾಕ್ಸಿ : ಇಂದಿರಾನಗರ ಟು ವಿಮಾನ ನಿಲ್ದಾಣಕ್ಕೆ 5 ನಿಮಿಷ ಪ್ರಯಾಣ!
ಇದೀಗ ಮಹೇಶ್ ಅವರ ಪೋಸ್ಟ್ ಬಹಳ ಬೇಗ ವೈರಲ್ ಆಗಿದೆ. ಅನೇಕ ಜನರು ಪೋಸ್ಟ್ ಅನ್ನು ಮರು ಹಂಚಿಕೆ ಮಾಡಿ ಕಾಮೆಂಟ್‌ಗಳನ್ನು ನೀಡಿದ್ದಾರೆ. ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾಕೂ ಇಲ್ಲ, ಫ್ರಂಟೂ ಇಲ್ಲ.. ಆಪರೇಷನ್ ಮಾಡಿಸದೇ ಮಗನೊಂದಿಗೆ ಜಾಲಿಯಾಗಿ ಹೊರಬಂದ ಆರೋಪಿ ದರ್ಶನ್!