Bengaluru: ಪ್ರಾಣಿಗಳನ್ನು ಬಿಟ್ರೂ ಪ್ರೀತಿಯ ಮೀನನ್ನು ಬಿಡದ ಏರ್‌ಇಂಡಿಯಾ ವಿರುದ್ಧ ಪ್ರಯಾಣಿಕ ಕಿಡಿ!
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮುದ್ದಿನ ಮೀನುಗಳನ್ನು ಕೊಂಡೊಯ್ಯಲು ವಿಮಾನಯಾನ ಸಂಸ್ಥೆ ನಿರಾಕರಿಸಿದಕ್ಕೆ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.
ಬೆಂಗಳೂರು (ಮಾ.28): ಇತ್ತೀಚೆಗೆ ಶ್ರೀನಗರದಲ್ಲಿ ತನ್ನ ತಾಯಿಯನ್ನು ಭೇಟಿಯಾಗಲು ತುರ್ತು ಪ್ರಯಾಣ ಮಾಡಿದ್ದ ಪ್ರಯಾಣಿಕರೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ತನ್ನ ಮುದ್ದಿನ ಮೀನುಗಳನ್ನು ಕೊಂಡೊಯ್ಯಲು ವಿಮಾನಯಾನ ಸಂಸ್ಥೆ ನಿರಾಕರಿಸಿದ ನಂತರ ಗಲಿಬಿಲಿಗೊಂಡ ಘಟನೆ ನಡೆದಿದೆ. ವ್ಯಕ್ತಿ ತನ್ನ ಎರಡು ವರ್ಷದ ಸಿಯಾಮೀಸ್ ಫೈಟರ್ ಮೀನನ್ನು ಹಾಕಿರುವ ಬೌಲ್‌ನಲ್ಲಿ ಪ್ರಯಾಣಿಸಲು ಅನುಮತಿಸುವ 100ml ನೀರಿನ ಮಟ್ಟಕ್ಕಿಂತ ಜಾಸ್ತಿ ನೀರು ಇದ್ದಿದ್ದೇ ಪ್ರಯಾಣಕ್ಕೆ ನಿರಾಕರಿಸಿದ್ದಕ್ಕೆ ಮುಖ್ಯ ಕಾರಣವಾಗಿದೆ.
ಕೋರಮಂಗಲದ ನಿವಾಸಿ ಅಕಿಬ್ ಹುಸೇನ್ ಅವರು ದೆಹಲಿಯ ಮೂಲಕ ಶ್ರೀನಗರಕ್ಕೆ ತೆರಳಬೇಕಾಗಿತ್ತು, ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಅವರ ಸಾಕುಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಬಿಟ್ಟರು. ಏರ್ ಇಂಡಿಯಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಹುಸೇನ್, ಮೀನುಗಳನ್ನು ನೇರವಾಗಿ ಸಾಗಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ದರಗಳು ಹೆಚ್ಚಿದ್ದರೂ ಕೂಡ ನಾನು ವಿಮಾನಯಾನವನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ.
31 ವರ್ಷದ ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಹುಸೇನ್ ಮಾರ್ಚ್ 19 ರ ರಾತ್ರಿ ತನ್ನ ತಾಯಿಯ ಅನಾರೋಗ್ಯದ ಬಗ್ಗೆ ತಿಳಿದ ನಂತರ ಮಾರ್ಚ್ 20 ರ ಮುಂಜಾನೆ ವಿಮಾನ ಟಿಕೆಟ್ ಅನ್ನು ಬುಕ್ ಮಾಡಿದ್ದಾರೆ. ಹುಸೇನ್ ತನ್ನ ಮುದ್ದಿನ ಮೀನು ಜಾಯ್ ಅನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಲು ಬಯಸಲಿಲ್ಲ. ಅವರು ಸಾಮಾನ್ಯವಾಗಿ ಪ್ರಯಾಣದ ಮೊದಲು ಮಾಡುವಂತೆ ರಾತ್ರಿಯಲ್ಲಿ ತನ್ನ ಮೀನನ್ನು ಸ್ನೇಹಿತನ ಮೆನೆಯಲ್ಲಿ ಬಿಟ್ಟು ಬರುವಷ್ಟು ಸಮಯ ಸಿಗಲಿಲ್ಲ.
ನಿಲ್ದಾಣದ ಸಿಬ್ಬಂದಿ ಆರಂಭದಲ್ಲಿ 20 ಗ್ರಾಂ ತೂಕದ ಕಿತ್ತಳೆ ಬಣ್ಣದ ಮೀನುಗಳನ್ನು ತೆರವುಗೊಳಿಸಿದ ನಂತರ ಅವರು AI 0804 (ಬೆಂಗಳೂರಿನಿಂದ ದೆಹಲಿ) ಮೂಲಕ ಹಾರಲು ಪರಿಶೀಲನೆ ನಡೆಸಿದರು. ನಿಯಮಗಳ ಪ್ರಕಾರ, ಫ್ಲೈಟ್ ಕ್ಯಾಪ್ಟನ್‌ನಿಂದ ಅಂತಿಮ ಅನುಮತಿ ದೊರೆತ ಬಳಿಕವಷ್ಟೇ ಮೀನುಗಳನ್ನು ತೆಗೆದುಕೊಂಡು ಹೋಗಲು ಒಪ್ಪಿಗೆ ಸೂಚಿಸಲಾಗುತ್ತದೆ.
ನಾನು ನಿರ್ಗಮನದ ಪೂರ್ವ ಭದ್ರತಾ ತಪಾಸಣೆಗೆ ಹೋಗುತ್ತಿದ್ದಾಗ ಏರ್ ಇಂಡಿಯಾ ಸಿಬ್ಬಂದಿಯಿಂದ ನನ್ನ ಮೊಬೈಲ್‌ಗೆ ಕರೆ ಮಾಡಿ ಮೀನು ಪರೀಕ್ಷಿಸಲು ಬಯಸಿದ್ದರಿಂದ ಹಿಂತಿರುಗುವಂತೆ ಹೇಳಿದರು. ಅವರು ಮೀನು ಇರುವ ಗ್ಲಾಸ್ ಬೌಲ್ ಅನ್ನು ತೂಗಿದರು ಮತ್ತು ಮೀನನ್ನು ಅಳತೆ ಮಾಡಿದರು ಆದರೆ ನನ್ನನ್ನು ಹಿಡಿದಿಟ್ಟುಕೊಂಡರು ಬೆಳಗಿನ ಜಾವ 4.45ಕ್ಕೆ ಬೋರ್ಡಿಂಗ್ ಸಮಯ ಸಮೀಪಿಸುತ್ತಿತ್ತು ಎಂದು ಹುಸೇನ್ ಆರೋಪಿಸಿದ್ದಾರೆ.
ತನ್ನ ಪುಟ್ಟ ಸಾಕು ಪ್ರಾಣಿಯನ್ನು ವಿಮಾನದಲ್ಲಿ ಸಾಗಿಸಲು ಶುಲ್ಕವನ್ನು ಪಾವತಿಸಲು ತಾನು ಇಚ್ಛೆ ವ್ಯಕ್ತಪಡಿಸಿದ್ದೆ, ಆದರೆ ಬೋರ್ಡಿಂಗ್ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲು ಒತ್ತಾಯಿಸಿದಾಗ ಸಿಬ್ಬಂದಿಗಳು ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ನಾನು ಹೆಚ್ಚು ಮಾತನಾಡುತ್ತಿದ್ದರಿಂದ ನನಗೆ ಅನುಮತಿ ನೀಡಬಾರದು ಎಂದು ಕಾರ್ಯನಿರ್ವಾಹಕರೊಬ್ಬರು ಕೂಗಿ ಹೇಳಿದರು ಎಂದು ಆರೋಪಿಸಿದ್ದಾರೆ.
ನನ್ನ ಕೈಯಲ್ಲಿ ಮುದ್ದಿನ ಮೀನು ಜಾಯ್ ಇತ್ತು. ಆದರೆ ನಾನು ಅಸಹಾಯಕನಾಗಿ ಕಾಯುತ್ತಿದ್ದೆ, ಸಿಬ್ಬಂದಿಗಳು ಅದನ್ನು ಕ್ಯಾಪ್ಟನ್‌ನಿಂದ ತೆರವುಗೊಳಿಸಬೇಕು ಮತ್ತು ದೆಹಲಿಯಲ್ಲಿ ನನ್ನ ವಿಮಾನ ಬದಲಾವಣೆಯ ಮೊದಲು ನನ್ನ ಮೀನು ಮತ್ತೊಂದು ಸುತ್ತಿನ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮಗಳನ್ನು ಉಚ್ಚರಿಸಲು ಪ್ರಾರಂಭಿಸಿದರು. ಸಹಾಯ ಮಾಡುವ ಬದಲು, ಅವರು ಜಾಯ್ ಅನ್ನು ಬಿಟ್ಟು ಹೋಗುವಂತೆ ಒತ್ತಾಯಿಸುವ ಮೂಲಕ ನನ್ನ ಪ್ರಯಾಣವನ್ನು ನರಕವಾಗಿಸಿದರು. ಈ ಘಟನೆಯಿಂದ ನನ್ನ ಹೃದಯ ಒಡೆದಂತಾಯಿತು ಎಂದು ವಿಮಾನ ನಿಲ್ದಾಣದಲ್ಲಿ ತನ್ನ ಸಾಕುಪ್ರಾಣಿ ಸತ್ತಿದೆ ಎಂಬ ಭಾವನೆಯಲ್ಲಿ ಹುಸೇನ್ ಶುಕ್ರವಾರ ಅಳಲು ತೋಡಿಕೊಂಡರು.
ಪ್ರಯಾಣಿಕ ಹುಸೇನ್ ನೀರಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರಿ ಭದ್ರತಾ ಲೋಪ: ಮಾನವ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು
ಕ್ಯಾಪ್ಟನ್‌ನ ಕ್ಲಿಯರೆನ್ಸ್ ಅಂತಿಮವಾಗಿದೆ ಮತ್ತು ಬಾಕ್ಸ್‌ನಲ್ಲಿನ ನೀರಿನ ಮಟ್ಟವನ್ನು ಹಾರಾಟಕ್ಕೆ ತೆರವುಗೊಳಿಸಲಾಗುವುದಿಲ್ಲ ಎಂದು ನಾವು ಅವರಿಗೆ ವಿವರಿಸಲು ಪ್ರಯತ್ನಿಸಿದೆವು. ಅದು ತೆರವುಗೊಂಡರೂ, ಅವರು ದೆಹಲಿಯಲ್ಲಿ ಮತ್ತೊಂದು ಸುತ್ತಿನ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಆದರೆ ಅವರು ನಮ್ಮ ಮಾತನ್ನು ಕೇಳಲು ಸಿದ್ಧರಿಲ್ಲ ಮತ್ತು ಕೋಪಗೊಂಡರು ಎಂದು ಅಧಿಕಾರಿಯೊಬ್ಬರು ಹೇಳಿದರು.
ಕನ್ನಡದಲ್ಲೇ ಮಾತಾಡುವಂತೆ ಕಿರುಕುಳ; ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿ ವಿರುದ್ಧ ಕರ್ನಾಟಕ ಮೂಲದ ನಟನ ಆಕ್ರೋಶ
ಈ ಬಗ್ಗೆ ಏರ್ ಇಂಡಿಯಾವನ್ನು ಕೇಳಿದಾಗ ಸಾಕುಪ್ರಾಣಿಗಳನ್ನು ಪತ್ತೆ ವಿಮಾನ ನಿಲ್ದಾಣದ ಅಧಿಕಾರಿಗಳು ಭಾನುವಾರ ಸಂಜೆ ಬೆಂಗಳೂರಿನಲ್ಲಿ ಪ್ರಯಾಣಿಕನ ಸಂಬಂಧಿಯೊಬ್ಬರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ಮೀನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿ ಉಳಿದಿದೆ. ಮತ್ತು ಹುಸೇನ್ ಅವರು ಶ್ರೀನಗರದಿಂದ ಹಿಂದಿರುಗಿದ ಬಳಿಕ ಮುಂದಿನ ವಾರ ಮತ್ತೆ ಪ್ರಾಣಿಗಳು ಮತ್ತು ಮೀನು ಜಾಯ್ ಕೈ ಸೇರುವ ನಿರೀಕ್ಷೆಯಿದೆ.