Asianet Suvarna News Asianet Suvarna News

ಬಾಂಬರ್‌ ಕೋರ್ಟ್‌ಗೆ: ಮಂಗಳೂರು ಪೊಲೀಸರಿಗೆ ಜಡ್ಜ್ ಮಹತ್ವದ ಸೂಚನೆ

ಮಂಗಳೂರು ಬಾಂಬರ್ ಆದಿತ್ಯ ರಾವ್ ನನ್ನು  ಕೋರ್ಟ್, ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರಿಗೆ ಒಪ್ಪಿಸಿದೆ. ಆದ್ರೆ, ಮಂಗಳೂರು ಪೊಲೀಸರಿಗೆ 1ನೇ ಎಸಿಎಂಎಂ ಕೋರ್ಟ್ ಒಂದು ಮಹತ್ವದ ಸೂಚನೆ ನೀಡಿದೆ. 

Bengaluru 8 ACMM Court Orders  Take Bomb accused To Mangaluru
Author
Bengaluru, First Published Jan 22, 2020, 4:40 PM IST
  • Facebook
  • Twitter
  • Whatsapp

ಬೆಂಗಳೂರು/ಮಂಗಳೂರು. (ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್‌ನನ್ನು ಇಂದು (ಬುಧವಾರ) ಕೋರ್ಟ್‌ಗೆ ಹಾಜರುಪಡಿಸಲಾಯ್ತು.

ಆರೋಪಿ ಆದಿತ್ಯ ರಾವ್‌ನನ್ನು ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್‌ಗೆ ಹಲಸೂರು ಗೇಟ್ ಪೊಲೀಸರು ಹಾಜರುಪಡಿಸಿದರು. ಈ ವೇಳೆ ಟ್ರಾನ್ಸಿಟ್ ವಾರಂಟ್ ಮೂಲಕ ಮಂಗಳೂರಿಗೆ ಕರೆದೊಯ್ಯಲು ಕೋರ್ಟ್ ಒಪ್ಪಿಗೆ ನೀಡಿದೆ.

"

ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ

ಬೆಂಗಳೂರು ಪೊಲೀಸರಿಂದ ಮಂಗಳೂರು ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರಿಸಲು ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲದೇ ನಾಳೆ ಅಂದ್ರೆ ಗುರುವಾರ  ಸಂಜೆ 5.30ರೊಳಗೆ 6ನೇ ಎಸಿಎಂಎಂ ಕೋರ್ಟ್ ಹಾಜರುಪಡಿಸಬೇಕು ಎಂದು  ಮಂಗಳೂರು ಪೊಲೀಸರಿಗೆ 8ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶ  ಜಗದೀಶ್ ಸೂಚಿಸಿ ಆದೇಶ ಹೊರಡಿಸಿದರು. 

ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಮಂಗಳೂರು ಪೊಲೀಸರು ಬುಧವಾರ ಸಂಜೆ 5 ಗಂಟೆಯೊಳಗೆ 6ನೇ ಎಸಿಎಂಎಂ ನ್ಯಾಯಾಲಕ್ಕೆ ಹಾಜರುಪಡಿಸಬೇಕಿದೆ.

ಕೋರ್ಟ್‌ ಅನುಮತಿಯಂತೆ ಮಂಗಳೂರು ಪೊಲೀಸರು ಆರೋಪಿ ಆದಿತ್ಯ ರಾವ್‌ನನ್ನು ವಶಕ್ಕೆ ಪಡೆದುಕೊಂಡಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಕರೆದೊಯ್ಯಲಿದ್ದಾರೆ.

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ

Follow Us:
Download App:
  • android
  • ios