ಬೆಂಗಳೂರು (ಜ. 22): ಈ ಹಿಂದೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ 1 ವರ್ಷ ಜೈಲು ಶಿಕ್ಷ ಅನುಭವಿಸಿದ್ದ ಆದಿತ್ಯ ರಾವ್, ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾನೆ.

ಉಡುಪಿ ಮೂಲದ ಆದಿತ್ಯ ರಾವ್,​ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ಒಪ್ಪಿಕೊಂಡಿದ್ದಾನೆ. ಮಂಗಳೂರಿನಿಂದ ಮಾರುವೇಷದಲ್ಲಿ ಲಾರಿಯಲ್ಲಿ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. 

ಮಂಗಳೂರು ವಿಮಾನ ನಿಲ್ದಾಣ ಬಾಂಬರ್ ಆರೋಪಿ ಪೊಲೀಸರಿಗೆ ಶರಣು

ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ 1ನೇ ACMM ಕೋರ್ಟ್‌ಗೆ ಹಾಜರಿಪಡಿಸಿ ವಶಕ್ಕೆ ಪಡೆಯಲಿದ್ದಾರೆ.

ಆದಿತ್ಯ ರಾವ್​ ಚಿತ್ರ-ವಿಚಿತ್ರ ಮನುಷ್ಯ. ಈತನ ಹಿನ್ನೆಲೆ ಕೆದುಕುತ್ತಾ ಹೋದಂತೆ ರೋಚಕ ಮಾಹಿತಿಗಳು ಸಿಗುತ್ತಿವೆ. ಯಾವಾಗಲೂ ಸಪ್ಪೆ ಮುಖ ಮಾಡಿಕೊಂಡೆ ಇರುವ ಈತ ಯಾರೊಂದಿಗೆ ಮಾತನಾಡುವುದಿಲ್ಲ ಎನ್ನುವುದು ತಿಳಿದುಬಂದಿದೆ. 

ಈ ಹಿನ್ನೆಲೆಯಲ್ಲಿ ಈತ ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಂತರ ಸತ್ಯಾಸತ್ಯತೆ ಹೊರಬರಲಿದೆ.

ಇನ್ನು ಆದಿತ್ಯ ರಾವ್ ವಿದ್ಯಾಭ್ಯಾಸವನ್ನ ನೋಡುವುದಾದ್ರೆ, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು MBA ಪೂರ್ಣಗೊಳಿಸಿರುವ ಈತ 15 ವರ್ಷದಲ್ಲಿ 18 ಕೆಲಸ ಬದಲಾಯಿಸಿದ್ದಾನೆ. ಅದರಲ್ಲಿ 12 ಕೆಲಸಗಳ ಬಗ್ಗೆ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

ಮಂಗಳೂರು ಬಾಂಬರ್‌ನ 15 ವರ್ಷದಲ್ಲಿ 18 ಕೆಲಸ
1.ICICI LIFE ಪ್ರುಡೆನ್ಷಿಯಲ್  ಕಂಪನಿ, ಬೆಂಗಳೂರು( ಸೇಲ್ಸ್ ಮ್ಯಾನೇಜರ್, 1 ವರ್ಷ ಉದ್ಯೋಗ)
2. HSBC ಬ್ಯಾಂಕ್, ಬೆಂಗಳೂರು (8 ತಿಂಗಳು ಕೆಲಸ)
3. ಮತ್ತೆ ICICI ಪ್ರುಡೆನ್ಷಿಯಲ್ ಕಂಪನಿ, ಬೆಂಗಳೂರು (ಸೇಲ್ಸ್ ಮ್ಯಾನೇಜರ್, 1 ವರ್ಷ ಕೆಲಸ)
4.HDFC ಇನ್ಷೂರೆನ್ಸ್ ಕಂಪನಿ , ಬೆಂಗಳೂರು (ಸೇಲ್ಸ್ ಎಕ್ಸಿಕ್ಯುಟಿವ್) 
5. ಪಂಪ್ಸೆಟ್ ಮಾರಾಟ ಕಂಪನಿ, ಬೆಂಗಳೂರು (ಸೇಲ್ಸ್ ಎಕ್ಸಿಕ್ಯುಟಿವ್)
6. ಪಂಚಮಿ ಜನಾರ್ದನ ಗೆಸ್ಟ್ಹೌಸ್, ಎಸ್ಡಿಎಂ ಉಜಿರೆ (ಸೆಕ್ಯುರಿಟಿ ಗಾರ್ಡ್ - 1 ವರ್ಷ ಕೆಲಸ)
7. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು, ಮೂಡಬಿದ್ರೆ (ಸೆಕ್ಯುರಿಟಿ ಗಾರ್ಡ್- 1 ವರ್ಷ ಕೆಲಸ)
8. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ (ಸೆಕ್ಯುರಿಟಿ ಗಾರ್ಡ್- 1 ವರ್ಷ ಕೆಲಸ)
9. ಉಡುಪಿ ಪುತ್ತಿಗೆ ಮಠ, ಹಿರಿಯಡ್ಕ ಅಡುಗೆ ಸಹಾಯಕ, ವೇದಾಧ್ಯಯನ (1 ವರ್ಷ ಕೆಲಸ)
10.  ಬಾರ್ ಅಂಡ್ ರೆಸ್ಟೋರೆಂಟ್, ಮಂಗಳೂರು  ಹಂಪನಕಟ್ಟೆ ಸರ್ವರ್ - ( 1 ವರ್ಷ ಕೆಲಸ)
11. ಆದಿತ್ಯ ಬಿರ್ಲಾ ಇನ್ಸೂರೆನ್ಸ್ ಕಂಪನಿ, ಬೆಂಗಳೂರು (ಸೇಲ್ಸ್ ಎಕ್ಸ್ಕ್ಯುಟಿವ್- 15 ದಿನ ಕೆಲಸ)
12. ಮೈಕ್ರಾನ್ ಗ್ರೈಂಡಿಂಗ್ ಟೆಕ್ನಾಲಜಿ, ಪೀಣ್ಯ, ಬೆಂಗಳೂರು ಅಸಿಸ್ಟೆಂಟ್- 1 ವರ್ಷ ಕೆಲಸ
 

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ