ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ ಆನ್ಲೈನ್ ವೆಬ್ ಸೈಟ್ ವಿರುದ್ಧ ಗುಡುಗಿದ್ದಾರೆ. ವೆಬ್ಸೈಟ್ ಗಳು ನಕಲಿ ಪ್ರತಿ ಮಾರಾಟ ಮಾಡ್ತಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಲು ಭಾವನಾ ಮುಂದಾಗಿದ್ದಾರೆ.
ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆ (Ravi Belagere) ಅವರ ಪ್ರಸಿದ್ಧ ಕಾದಂಬರಿ ʻಹೇಳಿ ಹೋಗು ಕಾರಣʼ ನಕಲಾಗ್ತಿದೆ. ಆನ್ಲೈನ್ ನಲ್ಲಿ ನಕಲಿ ಪ್ರತಿಗಳನ್ನು ಮಾರಾಟ ಮಾಡಲಾಗ್ತಿದೆ. ಈ ಬಗ್ಗೆ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ (Bhavana Belagere) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರ್ಜಿನಲ್ ಹಾಗೂ ಡುಪ್ಲಿಕೇಟ್ ಪ್ರತಿಗಳಿಗೆ ಇರುವ ವ್ಯತ್ಯಾಸವನ್ನು ತೋರಿಸಿದ್ದಲ್ಲದೆ, ಕೋರ್ಟ್ ಮೆಟ್ಟಿಲೇರುವ ನಿರ್ಧಾರಕ್ಕೆ ಬಂದಿದ್ದಾರೆ.
ಅಮೆಜಾನ್, ಫ್ಲಿಪ್ ಕಾರ್ಟ್, ಮಿಶೋ ವಿರುದ್ಧ ಆಕ್ರೋಶ
ಸಾಹಿತಿ ಹಾಗೂ ಪತ್ರಕರ್ತ ರವಿ ಬೆಳಗೆರೆ ಬರೆದಿರುವ ಹೇಳಿ ಹೋಗು ಕಾರಣ ಕಾದಂಬರಿಗೆ ಬೇಡಿಕೆ ಹೆಚ್ಚಿದೆ. ಪ್ರತಿಯೊಬ್ಬರೂ ಈ ಕಾದಂಬರಿ ಜೊತೆ ಆಳವಾದ ನಂಟನ್ನು ಹೊಂದಿದ್ದಾರೆ. ಈಗಿನ ಯುವಜನತೆ ಕೂಡ ರವಿ ಬೆಳಗೆರೆ ಬರೆದಿರುವ ಈ ಕಾದಂಬರಿ ಓದಲು ಇಷ್ಟಪಡ್ತಾರೆ. ಈ ಕಾದಂಬರಿ ಆನ್ಲೈನ್ ನಲ್ಲಿ ಲಭ್ಯವಿದೆ. ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಮಿಶೋದಂತ ಆನ್ಲೈನ್ ವೆಬ್ ಸೈಟ್ ಮೂಲಕ ಓದುಗರು ಈ ಪುಸ್ತಕವನ್ನು ಖರೀದಿ ಮಾಡಬಹುದು. ಆದ್ರೆ ಈ ಮೂರೂ ಆನ್ಲೈನ್ ಪ್ಲಾಟ್ಫಾರ್ಮ್, ಓದುಗರಿಗೆ ಮೋಸ ಮಾಡ್ತಿದೆ ಎಂದು ಭಾವನಾ ಬೆಳಗೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಲಿ ಪ್ರತಿಗಳನ್ನು ಈ ಮೂರು ವೆಬ್ಸೈಟ್ ಗಳು ಮಾರಾಟ ಮಾಡ್ತಿವೆ ಎಂದು ಭಾವನಾ ಬೆಳಗೆರೆ ಹೇಳಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಸಂಚಾರ ಸ್ತಬ್ಧ? ಶುಕ್ರವಾರದಿಂದ ಸಾರಿಗೆ ನೌಕರರ ಮುಷ್ಕರ, ನಾಳೆ ಬೆಂಗಳೂರು ಚಲೋ
ಭಾವನಾ ಪ್ರಕಾಶನದಿಂದ ಹೇಳಿ ಹೋಗು ಕಾರಣ ಪುಸ್ತಕ ಪ್ರಿಂಟ್ ಆಗುತ್ತೆ. ಆದ್ರೆ ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಮಿಶೋದಲ್ಲಿ ಭಾವನಾ ಪ್ರಕಾಶನದಿಂದ ಪ್ರಿಂಟ್ ಆದ ಪ್ರತಿ ಬದಲು ಬೇರೆ ಪುಸ್ತಕ ಮಾರಾಟ ಮಾಡಲಾಗ್ತಿದೆ. ಅಮೆಜಾನ್ ಸ್ಕ್ಯಾನ್ ಕಾಪಿ ನೀಡ್ತಿದೆ. ಇದು ಅಪರಾಧ. ಅತ್ಯಂತ ಕಡಿಮೆ ಕ್ವಾಲಿಟಿಯಲ್ಲಿ ಪುಸ್ತಕ ಮುದ್ರಿಸಿ 147 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಅಮೆಜಾನ್ ಮೇಲೆ ನಾನು ಒಂದು ಕೋಟಿ ಕೃತಿ ಚೌರ್ಯ ಮೊಕದ್ದಮೆ ಹಾಕೋದಾಗಿ ಭಾವನಾ ಬೆಳಗೆರೆ ಹೇಳಿದ್ದಾರೆ.
ಭಾವನಾ ಬೆಳಗೆರೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಮೂರು ವೆಬ್ ಸೈಟ್ ನಲ್ಲಿ ಮಾರಾಟ ಆಗ್ತಿರುವ ಪುಸ್ತಕಗಳ ಕ್ವಾಲಿಟಿ ತೋರಿಸಿದ್ದಲ್ಲದೆ, ಇದನ್ನು ನೋಡಿ ನನ್ನ ರಕ್ತ ಕುದಿಯುತ್ತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಮೂರೂ ವೆಬ್ ಸೈಟ್ ಮೇಲೆ ಕೇಸ್ ಹಾಕ್ತಿದ್ದೇನೆ. ಒಂದೊಂದು ಕೋಟಿ ಕೇಸ್ ಹಾಕುತ್ತಿದ್ದೇನೆ ಎಂದಿದ್ದಾರೆ.
ಕೆಲಸಕ್ಕೆಂದು ಮಂಗಳೂರಿಗೆ ಕರೆತಂದು ನಾಪತ್ತೆಯಾದ ಗೆಳೆಯ: ಭಯದಿಂದ ಮರವೇರಿ ಕುಳಿತ ಬಾಗಲಕೋಟೆಯ ಭೀಮಾ
ತಂದೆ ತೀರಿ ಹೋದ್ಮೇಲೆ ಕೆಟ್ಟದಾಗಿ ಪ್ರಿಂಟ್ ಹಾಕ್ಸಿ, ಕಡಿಮೆ ಬೆಲೆಗೆ ಅವರ ಪುಸ್ತಕ ಮಾರಾಟ ಮಾಡ್ತಿದ್ದೇವೆ ಅಂತ ಜನರು ಭಾವಿಸ್ತಾರೆ. ತಂದೆ ಹೆಸರು ಹಾಳು ಮಾಡೋಕೆ ನಾನಿಲ್ಲಿ ಕುಳಿತುಕೊಂಡಿಲ್ಲ. ಇದನ್ನು ನಾನು ಕೋರ್ಟ್ ಗೆ ತೆಗೆದುಕೊಂಡು ಹೋಗ್ತಿದ್ದೇನೆ. ನನಗೆ ಉತ್ತರ ಬೇಕು, ನ್ಯಾಯ ಬೇಕು. ಭಾವನಾ ಹಾಗೂ ಭಾವನಾ ಪ್ರಕಾಶ್ ಮೇಲೆ ಜನರು ಆರೋಪ ಮಾಡ್ತಾರೆ, ಇಂಥ ಕೆಟ್ಟ ಪ್ರತಿ ನೀಡಿದ್ದಾರೆ ಅಂತ ನಮ್ಮನ್ನು ಜನ ದೂರ್ತಾರೆ. ಅಮಾಯಕ ಜನರಿಗೆ ಮೋಸ ಆಗ್ತಿದೆ. ಇದನ್ನು ನಾನು ಒಪ್ಪೋದಿಲ್ಲ ಅಂತ ಭಾವನಾ ಬೆಳಗೆರೆ ಕೋಪ ವ್ಯಕ್ತಪಡಿಸಿದ್ದಾರೆ.
ಭಾವನಾ ಬೆಳಗೆರೆ ಪೋಸ್ಟ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಈ ಆನ್ಲೈನ್ ವೆಬ್ ಸೈಟ್ ಕ್ರಮವನ್ನು ಖಂಡಿಸಿದ್ದಾರೆ. ಮತ್ತೆ ಕೆಲವರು ಆನ್ಲೈನ್ ವೆಬ್ ಸೈಟ್ ನಲ್ಲಿ ಪುಸ್ತಕಗಳ ಬೆಲೆ ಕಡಿಮೆ. ಭಾವನಾ ಪ್ರಕಾಶನ 300 ರೂಪಾಯಿಗೆ ಪುಸ್ತಕ ಮಾರಾಟ ಮಾಡುತ್ತದೆ. ಆನ್ಲೈನ್ ನಲ್ಲಿ 147 ರೂಪಾಯಿಗೆ ಸಿಗ್ತಿದೆ. ಜನರಿಗೆ ಪುಸ್ತಕದ ಕ್ವಾಲಿಟಿ ಮುಖ್ಯವಲ್ಲ, ಸ್ಟೋರಿ ಮುಖ್ಯ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ.


