ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಆಯ್ತು, ಈಗ ನೆಹರು ಫೋಟೋ ಅಳವಡಿಕೆ: ಯುಟಿ ಖಾದರ್ ಮಾಹಿತಿ

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಫೋಟೋ ಅಳವಡಿಕೆ ಮಾಡಲಾಗುತ್ತದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

Belagavi Suvarna Soudha now Nehru Photo Insertion UT Khader Information sat

ಬೆಳಗಾವಿ (ಡಿ.03): ಬೆಳಗಾವಿಯಲ್ಲಿ ದೇಶದ ಮೊದಲ ಪ್ರಧಾನಿ ಭಾವಚಿತ್ರ ಹಾಕುವ ಬಗ್ಗೆ ಪರಿಶೀಲನೆ ಮಾಡ್ತೀವಿ. ಇನ್ನು ಸದನಕ್ಕೆ ಕೋರಂ ಗಣತಿಗೂ ಮುನ್ನವೇ ಬರುವ ಶಾಸಕರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು. 

ಚಳಿಗಾಲ ಅಧಿವೇಶನದ ಸಿದ್ಧತೆ ಕುರಿತು ಭಾನುವಾರ ಸುವರ್ಣ ಸೌಧದಲ್ಲಿ ವಿಧಾನಸಭೆ ಸ್ವೀಕರ್ ಯುಟಿ ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಜಂಟಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದರು. ಅಧಿವೇಶನಕ್ಕೆ ಬರುವ ಎಲ್ಲಾ ಶಾಸಕರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ  ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ಸಮಯದಲ್ಲಿ ಶಾಸಕರು ಈ ಆವರಣ ಬಿಟ್ಟು ನಗರಕ್ಕೆ ಹೋಗಬಾರದು ಎಂದು ಎಲ್ಲಾ ರೀತಿ ಊಟ ಕಾಫಿಯ ವ್ಯವಸ್ಥೆಯನ್ನ ಮಾಡಲಾಗಿದೆ. ಸುವರ್ಣಸೌಧದಲ್ಲಿ ಸೌಂದರ್ಯ ಹೆಚ್ಚಿಸಲು ವಿದ್ಯುತ್ ಅಲಂಕಾರ ಮಾಡಲಾಗಿದೆ. ಇನ್ಮುಂದೆ‌‌ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಶನಿವಾರ ಮತ್ತು ಭಾನುವಾರ ಮುಂದುವರೆಯಲಿದೆ ಎಂದು ಹೇಳಿದರು.

ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿ ಕೊಡದಿದ್ದರೂ ಕಾಂಗ್ರೆಸ್ ಗೆಲ್ಲುತ್ತಿತ್ತು: ಸಚಿವ ರಾಮಲಿಂಗಾರೆಡ್ಡಿ

ಸದನದಲ್ಲಿ ಕೋರಂ ಗಣತಿಗೂ ಮೊದಲೇ ಬರುವ ಶಾಸಕರನ್ನು ಗುರುತಿಸಿ ಅಂಥವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯಾಗಿ ರಾಷ್ಟ್ರ ಮತ್ತು ರಾಜ್ಯದ ಲಾಂಛನ ಇರುವ ಕಾಫಿ ಕಪ್‌ಗಳನ್ನು ಶಾಸಕರಿಗೆ ನೀಡಲಾಗುತ್ತದೆ. ಒಂದು ಸಾರಿ ಬೇಗ ಬಂದ್ರೆ ಒಂದು ಕಪ್ ಪ್ರಶಸ್ತಿಯನ್ನಾಗಿ ನೀಡಲಾಗುತ್ತದೆ. ಶಾಸಕರು ಎಷ್ಟು ಬಾರಿ ಬೇಗ ಸದನಕ್ಕೆ ಬರುತ್ತಾರೋ... ಅಷ್ಟು ಕಾಫಿ ಕಪ್ ಗಳನ್ನ ಪ್ರಶಸ್ತಿಯಾಗಿ ಶಾಸಕರು ಪಡೆಯಬಹುದು. ಇನ್ನು ಅಧಿವೇಶನದಲ್ಲಿ ಈ ಬಾರಿ ಒಟ್ಟು 3 ಅಧಿಸೂಚನೆಯಾಗಿದ್ದು,  7 ರಿಂದ 8 ಬಿಲ್ ಬರಬಹುದು ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸದನದ ಗ್ಯಾಲರಿಯಲ್ಲಿ 20 ರಿಂದ 30 ನಿಮಿಷಗಳ ಕೂರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಕಾಯುವ ಬದಲು ಸುವರ್ಣ ಸೌಧದ ಆಡಿಟೋರಿಯಂನಲ್ಲಿ ಅವರಿಗೆ ಕಲಾಪದ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಸೆಷನ್ ಆರಂಭಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. ಅಳ್ವಾಸ್ ಕಲಾ ತಂಡದಿಂದ  ಸುವರ್ಣ ಸಂಭ್ರಮ ನುಡಿಸಿರಿ ಮಾಡಲಾಗುತ್ತದೆ ಎಂದು ವಿಧಾನಸಭಾ ಅಧ್ಯಕ್ಷ ಖಾದರ್ ಮಾಹಿತಿ ನೀಡಿದರು.

ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಯೋಗಿ ಮುಖ್ಯಮಂತ್ರಿ: ಯುಪಿಗೆ ಆದಿತ್ಯನಾಥ- ರಾಜಸ್ಥಾನಕ್ಕೆ ಬಾಲಕನಾಥ?

ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸುತ್ತೇವೆ. ಬರಗಾಲ, ಮಹದಾಯಿ ಮತ್ತು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತೀವಿ. 5 ಮತ್ತು 6 ನೇ ತಾರೀಖು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಯಾವುದೇ ಶಾಸಕರು ಪ್ರಶ್ನೆ ಮಾಡಿದ್ರು ಅದಕ್ಕೆ ಆದ್ಯತೆ ಕೊಡ್ತೀವಿ. ಬೆಳಗಾವಿ ಎರಡನೇ ರಾಜಧಾನಿ ವಿಚಾರವಾಗಿ ಕಚೇರಿಗಳು ಬೆಳಗಾವಿಗೆ ಶಿಫ್ಟ್ ಆಗಬೇಕಿತ್ತು ಆದ್ರೆ ಆದು ಆಗಿಲ್ಲ. ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ IAS ಅಧಿಕಾರಿಗಳು ಇಲ್ಲಿಗೆ ಬರ್ತಿಲ್ಲ. ಬರೋಕೆ ಮನಸ್ಸು ಮಾಡ್ತಿಲ್ಲ. ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸುವರ್ಣ ಸೌಧದಲ್ಲಿ ನೆಹರು ಭಾವಚಿತ್ರ ಅಳವಡಿಕೆ: ವಿಧಾನ ಸಭೆಗೆ  2512 ಪ್ರಶ್ನೆಗಳು ಬಂದಿವೆ. ವಿಧಾನ ಪರಿಷತ್‌ಗೆ 1207 ಪ್ರಶ್ನೆಗಳು ಬಂದಿವೆ. ಇದರಲ್ಲಿ 1,057 ಚಿಕ್ಕೆ ಗುರುತಿನ ಪ್ರಶ್ನೆಗಳು ಬಂದಿವೆ.ಇನ್ನು ಬೆಳಗಾವಿಯಲ್ಲಿ ದೇಶದ ಮೊದಲ ಪ್ರಧಾನಿ ಭಾವಚಿತ್ರ ಹಾಕುವ ಬಗ್ಗೆ ಪರಿಶೀಲನೆ ಮಾಡ್ತೀವಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

Latest Videos
Follow Us:
Download App:
  • android
  • ios