Asianet Suvarna News Asianet Suvarna News

ಕರ್ನಾಟಕ, ತೆಲಂಗಾಣದಲ್ಲಿ ಗ್ಯಾರಂಟಿ ಕೊಡದಿದ್ದರೂ ಕಾಂಗ್ರೆಸ್ ಗೆಲ್ಲುತ್ತಿತ್ತು: ಸಚಿವ ರಾಮಲಿಂಗಾರೆಡ್ಡಿ

ತೆಲಂಗಾಣ ಮತ್ತು ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ನಾವು ಗ್ಯಾರಂಟಿ ಘೋಷಣೆ ಮಾಡದಿದ್ದರೂ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತಿತ್ತು ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Ramalingareddy Said Even if guarantee was not given also congress win in Telangana election sat
Author
First Published Dec 3, 2023, 3:25 PM IST

ಬೆಂಗಳೂರು (ಡಿ.03): ದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಬಹಳ ಸಂಪನ್ಮೂಲ ಹೊಂದಿದ್ದಾರೆ. ಬಿಜೆಪಿಯವರು ಬಹಳ ಚನ್ನಾಗಿ ಸುಳ್ಳು ಹೇಳುತ್ತಾರೆ  ಅದನ್ನು ಜನ ನಂಬಿದ್ದಾರೆ. ಜನಕ್ಕೆ ತಲೆಗೆ ಹತ್ತೋ ರೀತಿ ಸುಳ್ಳು ಹೇಳಿ ಹೇಳಿ 9 ವರ್ಷದಿಂದ ಚುನಾವಣೆ ಗೆಲುತ್ತಾ ಇದ್ದಾರೆ. ಜನಕ್ಕೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆದೆ. ಆದ್ದರಿಂದ ಜನ ಅದೇ ರೀತಿ ಯಾಮಾರುತ್ತಾ ಇದ್ದಾರೆ. ಇನ್ನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಈ ಎರಡು ರಾಜ್ಯಗಳಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡದಿದ್ದರೂ ಗೆಲುವು ಸಾಧಿಸುತ್ತಿದ್ದೆವು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ನಮಗೆ ಹಿನ್ನೆಡೆ ಎಂದು ಹೇಳೋದಿಲ್ಲ ನಾವು ಜಾರ್ಖಂಡ್ ಸಹ ಗೆಲ್ಲತ್ತೇವೆ ಎಂದು ಕೊಡಿದ್ದೆವು. ಅದು ಅನಿರೀಕ್ಷಿತ ನಮಗೆ ರಾಜಸ್ಥಾನದಲ್ಲಿ‌ ನಮ್ಮಲ್ಲೆ ಆಂತರಿಕ ಕಿತ್ತಟಾ ಬಹಳಷ್ಟು ಇತ್ತು. ಹಾಗಾಗಿ ನಮ್ಗೆ ಗೆಲ್ಲವಂತಹ ವಿಶ್ವಾಸ ಇರಲಿಲ್ಲ. ದೇಶದಲ್ಲಿ ಆಡಳಿತ ಪಕ್ಷ ಇರುವಂತಹ ಬಿಜೆಪಿ ಬಹಳ ಸಂಪನ್ಮೂಲ ಹೊಂದಿದ್ದಾರೆ. ಸುಳ್ಳು ಸಹ ಬಹಳ ಚನ್ನಾಗಿ ಹೇಳುತ್ತಾರೆ ಬಿಜೆಪಿ ಅವ್ರು ಅದನ್ನು ಜನ ನಂಬಿದ್ದಾರೆ. ಜನಕ್ಕೆ ತಲೆಗೆ ಹತ್ತೋ ರೀತಿ ಸುಳ್ಳು ಹೇಳಿ ಹೇಳಿ 9 ವರ್ಷದಿಂದ ಚುನಾವಣೆ ಗೆಲುತ್ತಾ ಇದ್ದಾರೆ. ಜನಕ್ಕೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆ ಜನ ಅದೇ ರೀತಿ ಯಾಮಾರುತ್ತಾ ಇದ್ದಾರೆ ಎಂದು ಹೇಳಿದರು.

ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಯೋಗಿ ಮುಖ್ಯಮಂತ್ರಿ: ಯುಪಿಗೆ ಆದಿತ್ಯನಾಥ- ರಾಜಸ್ಥಾನಕ್ಕೆ ಬಾಲಕನಾಥ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡದಿದ್ದರೂ ಗೆಲ್ಲುತ್ತಿದ್ದೆವು. ಆದರೆ, ನಾವು ಗ್ಯಾರಂಟಿ ಕೊಟ್ಟಿದ್ದು ಚುನಾವಣೆ ಗೆಲ್ಲ ಬೇಕು ಅಂತ ಅಲ್ಲ. ಜನ ಬೆಲೆ ಏರಿಕೆಯಿಂದ ಸಮಸ್ಯೆಯಲ್ಲಿ ಇದ್ದಾರೆ ಅವರಿಗೆ ಸಹಾಯ ಆಗ್ಲಿ ಅಂತ ಕೊಟ್ಟಿದ್ದೇವೆ. ಪೆಟ್ರೋಲ್, ಡೀಸಲ್, ದಿನ ನಿತ್ಯದ ಏರಿಕೆಗಳು ಹೆಚ್ಚಾಗಿದೆ ಅದಕ್ಕಾಗಿ ಜನರ ಅನುಕೂಲಕ್ಕಾಗಿ ಗ್ಯಾರಂಟಿ ನೀಡಿದ್ದೇವೆ. ನಮಗಿಂತ ಹೆಚ್ಚು ಗ್ಯಾರಂಟಿ ಅನ್ನು ತೆಲಂಗಾಣದಲ್ಲಿ ಟಿಆರ್ಎಸ್ ಘೋಷಣೆ ಮಾಡಿತ್ತು. ಆದರೆ ಅವರಿಗ್ಯಾಕೆ ಜನ ಓಟ್ ಹಾಕಲಿಲ್ಲ. ಮಧ್ಯಪ್ರದೇಶ ಫಲಿತಾಂಶದ ಬಗ್ಗೆ ನಾವು ಆತ್ಮಾವಲೋಕನ ಮಾಡಬೇಕು ಎಂದರು.

'ಸೌತ್‌-ನಾರ್ತ್' ಕಾರ್ಡ್‌ ಪ್ಲೇ ಮಾಡಿದ ಕಾಂಗ್ರೆಸ್‌; ಭಾರತ್‌ ಜೋಡೋ ಅಂದ್ರೆ ಇದೇನಾ ಎಂದ ಬಿಜೆಪಿ!

ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆ ಇತ್ತು ಹಾಗಾಗಿ ಗೆಲುವು ನಮ್ಮದಾಗಿದೆ. ದೇಶದಲ್ಲಿ ಯಾವುದೇ ಮೋದಿ ಅಲೆ ಇಲ್ಲ, ಇದೆಲ್ಲ  ಬಿಜೆಪಿ ಸುಳ್ಳು ಕಥೆಯಾಗಿದೆ. ಜನರು ಕೂಡ ಅದನ್ನೆ ನಂಬುತ್ತಾರೆ. ಲೋಕಸಭಾ ಚುನಾವಣೆ ಇನ್ನು 6  ತಿಂಗಳು ಇದೆ. ಈ ಎಲೆಕ್ಷನ್ ನಲ್ಲಿ ಆಗಿದ್ದು ಲೋಕಸಭೆ ಎಲೆಕ್ಷನ್ ನಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಬಿಜೆಪಿ ಪಕ್ಷ ಮುಂದಕ್ಕೆ ಅಧಿಕಾರಕ್ಕೆ ಬರೋದಿಲ್ಲ. ನಾವು ಯಾವಾಗಲೂ ಸಹ ಸೋತ ಸಂದರ್ಭದಲ್ಲಿ ಯಾವ ಕಾರಣಕ್ಕೆ ಸೋತಿದ್ದೇವೆ. ಮುಂದಕ್ಕೆ ಯಾವ ರೀತಿ ಚುನಾವಣೆಗೆ ಸಿದ್ಧವಾಗ ಬೇಕು ಅನ್ನೋ ವಿಚಾರವಾಗಿ ನಮ್ಗೆ ಸೋಲು ದಾರಿ ತೋರಿಸುತ್ತೆ ಆ ದಿಕ್ಕಿಗೆ ನಾವು ನಡೆಯುತ್ತೆವೆ ಎಂದು ಹೇಳಿದರು.

Follow Us:
Download App:
  • android
  • ios