MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • News
  • State
  • ಶಿವಾನಂದ ನೀಲಣ್ಣವರ್ ಅರೆಸ್ಟ್: ಬಂಧಿಸಿ ಜಡ್ಜ್ ಮನೆಗೆ ಕರೆದೊಯ್ಯುವಾಗಲೂ 'ಓಂ ನಮಃ ಶಿವಾಯ' ಎಂದ ಆಸಾಮಿ!

ಶಿವಾನಂದ ನೀಲಣ್ಣವರ್ ಅರೆಸ್ಟ್: ಬಂಧಿಸಿ ಜಡ್ಜ್ ಮನೆಗೆ ಕರೆದೊಯ್ಯುವಾಗಲೂ 'ಓಂ ನಮಃ ಶಿವಾಯ' ಎಂದ ಆಸಾಮಿ!

ಬೆಳಗಾವಿಯಲ್ಲಿ ಸದ್ದಿಲ್ಲದೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಉದ್ಯಮಿ ಶಿವಾನಂದ ನೀಲಣ್ಣವರ ಬಂಧನ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೆಡೆ ಕಾನೂನು ಉಲ್ಲಂಘನೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹವಾ! ಈ ಇಡೀ ಹೈಡ್ರಾಮಾದ ರೋಚಕ ಫೋಟೋ ಸ್ಟೋರಿ ಇಲ್ಲಿದೆ.

2 Min read
Author : Ravi Janekal
| Updated : May 16 2026, 07:19 AM IST
Share this Photo Gallery
  • FB
  • TW
  • Linkdin
  • Whatsapp
16
ಶಿವಾನಂದ ನೀಲಣ್ಣನವರ: ಒಂದೇ ಒಂದು ವಿಡಿಯೋದಿಂದ ಕೆಟ್ಟಿತು ಗ್ರಹಚಾರ!
Image Credit : Asianet News

ಶಿವಾನಂದ ನೀಲಣ್ಣನವರ: ಒಂದೇ ಒಂದು ವಿಡಿಯೋದಿಂದ ಕೆಟ್ಟಿತು ಗ್ರಹಚಾರ!

ದಶಕಗಳಿಂದ ಬೆಳಗಾವಿಯಲ್ಲಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಇತ್ತೀಚಿನವರೆಗೂ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ, ಕಡೂರಿನ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತುಗಳು ಅವರ ಇಡೀ ಸಾಮ್ರಾಜ್ಯವೇ ಅಲುಗಾಡಿಸಿದೆ. ‘ನನ್ನ ಬಳಿ 15 ಸಾವಿರ ಬಂದೂಕುಗಳಿವೆ, ನಾವೂ ಯಾರಿಗೂ ಹೆದರಲ್ಲ’ ಎಂದಿದ್ದ ಇವರ ಭಾಷಣದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಮಾತುಗಳೇ ಈಗ ಕಂಟಕವಾಗಿ ಪರಿಣಮಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬೃಹತ್ ಕಟೌಟ್‌ಗಳು ರಾರಾಜಿಸಿದ ಬೆನ್ನಲ್ಲೇ ಶುರುವಾಯ್ತು ಕಂಟಕ!
Image Credit : Asianet News

ಬೃಹತ್ ಕಟೌಟ್‌ಗಳು ರಾರಾಜಿಸಿದ ಬೆನ್ನಲ್ಲೇ ಶುರುವಾಯ್ತು ಕಂಟಕ!

ವೈರಲ್ ವಿಡಿಯೋದಿಂದ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದ ಬೆನ್ನಲ್ಲೇ, ಮೇ 17ರಂದು ಸುಮಾರು 20 ಸಾವಿರ ಜನರನ್ನು ಸೇರಿಸಿ ಬೆಳಗಾವಿ ನಗರ ಸ್ವಚ್ಛತೆ ಮಾಡಲು ನೀಲಣ್ಣವರ ಮುಂದಾಗಿದ್ದರು. ಇದಕ್ಕಾಗಿ ನಗರದಾದ್ಯಂತ ಅವರ ದೊಡ್ಡ ದೊಡ್ಡ ಕಟೌಟ್‌ಗಳು ರಾರಾಜಿಸಲು ಆರಂಭಿಸಿದವು. ಆದರೆ, ಈ ಅತಿಯಾದ ಪ್ರಚಾರವೇ ಅವರಿಗೆ ಒಂದೊಂದಾಗಿ ಕಂಟಕ ತರಲು ವೇದಿಕೆ ಸಿದ್ಧ ಮಾಡಿತು.

Related Articles

Related image1
ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!
Related image2
ಶಿವಾನಂದ ನೀಲಣ್ಣವರ: ಅಂದು ಐಸ್‌ಕ್ರೀಮ್‌ ಮಾರುತ್ತಿದ್ದವ ಸಾಮ್ರಾಜ್ಯ ಕಟ್ಟಿದ!
36
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ದಾಳಿ
Image Credit : Asianet News

ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ದಾಳಿ

ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಪಡೆದ ಆರೋಪ ಕೇಳಿಬರುತ್ತಿದ್ದಂತೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದ ತಂಡ ಶಿವಾನಂದ ಅವರ ಕಚೇರಿ ಮತ್ತು ನಿವಾಸದ ಮೇಲೆ ಹಠಾತ್ ದಾಳಿ ನಡೆಸಿತು. ಬರೋಬ್ಬರಿ 20 ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ತಪಾಸಣೆಯಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಜಾಲಾಡಲಾಯಿತು.

46
ಶಿವಂ ಅಸೋಸಿಯೇಟ್ಸ್‌ನಲ್ಲಿ ರಿಸರ್ವ್ ಬ್ಯಾಂಕ್ (RBI) ಗೈಡ್‌ಲೈನ್ಸ್ ಸಂಪೂರ್ಣ ಉಲ್ಲಂಘನೆ
Image Credit : Asianet News

ಶಿವಂ ಅಸೋಸಿಯೇಟ್ಸ್‌ನಲ್ಲಿ ರಿಸರ್ವ್ ಬ್ಯಾಂಕ್ (RBI) ಗೈಡ್‌ಲೈನ್ಸ್ ಸಂಪೂರ್ಣ ಉಲ್ಲಂಘನೆ

ಜಿಲ್ಲಾಧಿಕಾರಿಗಳ (DC) ಆಜ್ಞೆಯಂತೆ ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಶಿವಂ ಅಸೋಸಿಯೇಟ್ಸ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೈಡ್‌ಲೈನ್ಸ್ ಸಂಪೂರ್ಣ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಸದ್ಯಕ್ಕೆ ಠೇವಣಿದಾರರಿಂದ ಯಾವುದೇ ಲಿಖಿತ ದೂರು ಬಂದಿಲ್ಲವಾದರೂ, ಮೌಖಿಕವಾಗಿ ಹೇಳಿಕೊಂಡಿದ್ದಾರೆ. 

ಸಾರ್ವಜನಿಕರಿಂದ 'ಲೋನ್' ರೂಪದಲ್ಲಿ ಹಣ ಪಡೆದು ಆ್ಯಪ್ ಮೂಲಕ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದ್ದು, ಮುಂದೆ ಆಗುವ ದೊಡ್ಡ ಅನಾಹುತ ತಡೆಯಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

56
ಜಡ್ಜ್ ಮನೆಗೆ ಕರೆದೊಯ್ಯುವಾಗಲೂ ಶಿವಾನಂದ 'ಶಿವನಾಮ' ಜಪ!
Image Credit : Asianet News

ಜಡ್ಜ್ ಮನೆಗೆ ಕರೆದೊಯ್ಯುವಾಗಲೂ ಶಿವಾನಂದ 'ಶಿವನಾಮ' ಜಪ!

ಎಫ್‌ಐಆರ್ ದಾಖಲಾಗುತ್ತಿದ್ದಂತೆ ಆಕ್ಷನ್ ಮೂಡ್‌ಗೆ ಇಳಿದ ಮಾಳಮಾರುತಿ ಠಾಣೆ ಪೊಲೀಸರು ಅಕ್ರಮ ಹೂಡಿಕೆ ಆರೋಪದಡಿ ಶಿವಾನಂದ ನೀಲಣ್ಣವರನ್ನು ಶಿವಬಸವ ನಗರದ ನಿವಾಸದಲ್ಲಿ ಬಂಧಿಸಿದರು. ವಿಶೇಷ ಎಂದರೆ, ಪೊಲೀಸರು ತನ್ನನ್ನು ಬಂಧಿಸಿ ಜಡ್ಜ್ ನಿವಾಸಕ್ಕೆ ಕರೆದೊಯ್ಯುವ ಸನ್ನಿವೇಶದಲ್ಲೂ ಶಿವಾನಂದ ಧೃತಿಗೆಡದೆ ‘ಓಂ ನಮಃ ಶಿವಾಯ’ ಹೇಳಿ ನಮಸ್ಕರಿಸಿದರು. ಈ ವಿಡೀಯೋ ತುಣುಕು ಕೂಡ ವೈರಲ್ ಆಗಿದೆ. 

66
ಇದು ಸತ್ಯನೋ ಸುಳ್ಳೋ ಗೊತ್ತಿಲ್ಲ; ಎಲ್ಲರಿಗೂ ಒಳ್ಳೆಯದಾಗಲಿ
Image Credit : Asianet News

ಇದು ಸತ್ಯನೋ ಸುಳ್ಳೋ ಗೊತ್ತಿಲ್ಲ; ಎಲ್ಲರಿಗೂ ಒಳ್ಳೆಯದಾಗಲಿ

‘ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬರುತ್ತಿದೆಯಲ್ಲ? ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಶಿವಾನಂದ ನೀಲಣ್ಣವರ್, ಯಾವುದೇ ಆತಂಕವಿಲ್ಲದೆ, ಅತ್ಯಂತ ಕೂಲ್ ಆಗಿಯೇ ’ಅದು ಸತ್ಯನೋ, ಸುಳ್ಳೋ ನನಗೆ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಖುಷಿ ಸಿಗಲಿ' ಭಾರತದ ಜನತೆಗೆ ಒಳ್ಳೆಯದಾಗಲಿ' ಎಂದು ಕೈಮುಗಿದು, ಮತ್ತೊಮ್ಮೆ 'ಓಂ ನಮಃ ಶಿವಾಯ' ಎನ್ನುತ್ತಾ ಸಾಗಿದರು. ಅಧಿಕಾರಿಗಳು ಸದ್ಯ ಇಡೀ ಪ್ರಕರಣವನ್ನ ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬೆಳಗಾವಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಮನೆ ಮುಂದೆ ಚಿರತೆ ಪ್ರತ್ಯಕ್ಷ, ನಗರದಲ್ಲಿ ಹೆಚ್ಚಿದ ಆತಂಕ
Recommended image2
ಮಳೆಗಾಲದಲ್ಲೂ ಬಿಸಿಲ ಬೇಗೆ, ಆಗಸ್ಟ್ ಜಾಗತಿಕವಾಗಿ ಅತ್ಯಂತ ಬಿಸಿಯಾದ ತಿಂಗಳು, ಕರ್ನಾಟಕದಾದ್ಯಂತ ತಾಪಮಾನ ದಿಢೀರ್ ಜಿಗಿತ!
Recommended image3
ಮೊದಲ ಪತ್ನಿ ಇರುವಾಗಲೇ 2ನೇ ಪತ್ನಿಗೆ ಜೀವನಾಂಶ ಪಡೆಯುವ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
Related Stories
Recommended image1
ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!
Recommended image2
ಶಿವಾನಂದ ನೀಲಣ್ಣವರ: ಅಂದು ಐಸ್‌ಕ್ರೀಮ್‌ ಮಾರುತ್ತಿದ್ದವ ಸಾಮ್ರಾಜ್ಯ ಕಟ್ಟಿದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved