ಬೆಳಗಾವಿ, (ಆ.04): ಮಹಾಮಾರಿ ಕೊರೋನಾ ವೈರಸ್‌ಗೆ ಔಷಧಿ ಕಂಡುಹಿಡಿಯಲು ವಿಶ್ವದ ಅನೇಕ ರಾಷ್ಟ್ರಗಳ ಸಂಶೋಧಕರು ಪೈಪೋಟಿ ನಡೆಸುತ್ತಿದ್ದಾರೆ.
 
ಇದರ ನಡುವೆ ಬೆಳಗಾವಿ ನಗರದ ಜೀವನ ರೇಖಾ ಆಸ್ಪತ್ರೆಯಲ್ಲಿ ನಾಲ್ವರ ಮೇಲೆ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ.

ಕೊರೋನಾಗೆ ನಂಜನಗೂಡು ಇಂಜೆಕ್ಷನ್ ಬಿಡುಗಡೆ!

ಹೌದು.. ಈ ಬಗ್ಗೆ ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ ಪ್ರತಿಕ್ರಿಯಿಸಿದ್ದು, ನಾಲ್ವರ ಮೇಲೆ ಕೊರೋನಾ ಲಸಿಕೆ ಟ್ರಯಲ್ ಮಾಡಲಾಗಿದೆ. ಇಬ್ಬರು ಮಹಿಳೆಯರು, ಇಬ್ಬರು ಪುರುಷರ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗಿದೆ. 

ಆದ್ರೆ, ಅವರ ಮೇಲೆ ಯಾವುದೇ ಅಡ್ಡಪರಿಣಾಮಗಳಾಗಿಲ್ಲ. ಅವರೆಲ್ಲರೂ ಮನೆಯಲ್ಲೇ ಇದ್ದಾರೆ. ಈಗಾಗಲೇ ಮೊದಲ ಡೋಸ್‌ನ್ನು ನೀಡಲಾಗಿದೆ. 14 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ ಎಂದು ತಿಳಿಸಿದರು.