ಕೊರೋನಾಗೆ ನಂಜನಗೂಡು ಇಂಜೆಕ್ಷನ್ ಬಿಡುಗಡೆ!

ಕೊರೋನಾಗೆ ‘ಜುಬಿ-ಆರ್‌’ ರೆಮ್‌ಡೆಸಿವಿರ್‌ ಇಂಜೆಕ್ಷನ್‌| ಜುಬಿಲಂಟ್‌ ಕಂಪನಿಯಿಂದ ಚುಚ್ಚುಮದ್ದು ಬಿಡುಗಡೆ| 100 ಎಂಜಿ ಇಂಜಕ್ಷನ್‌ನ ಒಂದು ಸೀಸೆಗೆ 4700 ರು.

Jubilant Generics launches remdesivir under JUBI R brand

ನವದೆಹಲಿ(ಆ.04): ಕೊರೋನಾ ವೈರಸ್‌ ಸೋಂಕಿತರಿಗೆಂದು ಜುಬಿಲಂಟ್‌ ಜನರಿಕ್ಸ್‌ ಕಂಪನಿಯು ‘ಜುಬಿ-ಆರ್‌’ ಬ್ರಾಂಡ್‌ನ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 100 ಎಂಜಿಯ 1 ಇಂಜೆಕ್ಷನ್‌ ಸೀಸೆಗೆ 4,700 ರು. ಬೆಲೆ ನಿಗದಿ ಮಾಡಲಾಗಿದೆ ಎಂದು ಜುಬಿಲಂಟ್‌ ಜನರಿಕ್ಸ್‌ ಕಂಪನಿಯ ಮಾತೃ ಸಂಸ್ಥೆಯಾದ ಜುಬಿಲಂಟ್‌ ಲೈಫ್‌ ಸೈನ್ಸ್‌ ಸೋಮವಾರ ಹೇಳಿದೆ.

ತನ್ನ ಮಾರಾಟ ಜಾಲದ ಮೂಲಕ ಜುಬಿಲಂಟ್‌ ಜನರಿಕ್ಸ್‌ 1000 ಆಸ್ಪತ್ರೆಗಳಲ್ಲಿ ‘ಜುಬಿ-ಆರ್‌’ ರೆಮ್‌ಡೆಸಿವಿರ್‌ ಔಷಧ ಲಭ್ಯವಿರುವಂತೆ ಮಾಡಲಿದೆ.

ಕೊರೋನಾಗಾಗಿ ರೆಮ್‌ಡೆಸಿವಿರ್‌ ಔಷಧವನ್ನು ಗಿಲೀಡ್‌ ಸೈನ್ಸಸ್‌ ಎಂಬ ಕಂಪನಿಯು 127 ದೇಶಗಳಲ್ಲಿ ಉತ್ಪಾದಿಸುವ ಹಕ್ಕು ಪಡೆದುಕೊಂಡಿತ್ತು. ಈ ಕಂಪನಿಯ ಜತೆ ಜುಬಿಲಂಟ್‌ ಕಳೆದ ಮೇನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಜುಲೈ 20ರಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ತುರ್ತು ಸಂದರ್ಭಗಳಲ್ಲಿ ಬಳಸಬಹುದು ಎಂಬ ಷರತ್ತು ವಿಧಿಸಿ ರೆಮ್‌ಡೆಸಿವಿರ್‌ ಔಷಧ ಉತ್ಪಾದನೆ ಹಾಗೂ ಮಾರಾಟಕ್ಕೆ ಜುಬಿಲಂಟ್‌ ಕಂಪನಿಗೆ ಅನುಮತಿ ನೀಡಿತ್ತು. ಈಗಿನ ಮಟ್ಟಿಗೆ, ಕೊರೋನಾ ಸೋಂಕಿತರಿಗೆ ವೈರಾಣು ನಿರೋಧಕವಾಗಿ ಬಳಸಲು ಅಮೆರಿಕ ಆಹಾರ ಹಾಗೂ ಔಷಧ ಇಲಾಖೆಯಿಂದ ಅನುಮತಿ ಪಡೆದ ಏಕೈಕ ಔಷಧ ರೆಮ್‌ಡೆಸಿವಿರ್‌ ಆಗಿದೆ.

ಕೊರೋನಾ ಹರಡುವಿಕೆ ತಡೆಯುವ ಯಂತ್ರ ಕಂಡುಹಿಡಿದ ಬೆಂಗಳೂರು ವಿಜ್ಞಾನಿಗಳು!

"

Latest Videos
Follow Us:
Download App:
  • android
  • ios