ಬೆಂಗಳೂರು: ಫ್ಲಾಟ್‌ ಮಾರಲು ಅಪಾರ್ಚ್‌ಮೆಂಟಲ್ಲೇ ಬಿಡಿಎ ಶಿಬಿರ!

ಗ್ರಾಹಕರಿಗೆ ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ಬಿಡಿಎ ಫ್ಲಾಟ್‌ ಮಾರಲು ಅಪಾರ್ಚ್‌ಮೆಂಟ್‌ನಲ್ಲೇ ಶಿಬಿರ ಏರ್ಪಡಿಸಲು ಸಿದ್ಧತೆ ನಡೆಸಿದೆ.

BDA camp in apartment to sell flat tomorrow first at bengaluru rav

ಬೆಂಗಳೂರು (ಜೂ.30) :  ಗ್ರಾಹಕರಿಗೆ ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ಬಿಡಿಎ ಫ್ಲಾಟ್‌ ಮಾರಲು ಅಪಾರ್ಚ್‌ಮೆಂಟ್‌ನಲ್ಲೇ ಶಿಬಿರ ಏರ್ಪಡಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ, ಕೋನದಾಸಪುರ ಗ್ರಾಮದಲ್ಲಿ 5 ಎಕರೆ ಪ್ರವೇಶದಲ್ಲಿ 14 ಅಂತಸ್ತುಗಳ ಅಪಾರ್ಚ್‌ಮೆಂಟ್‌ನಲ್ಲಿ 630 ಎರಡು ಬಿಎಚ್‌ಕೆ ಫ್ಲಾಟ್‌ಗಳನ್ನು ಬಿಡಿಎ ನಿರ್ಮಿಸಿದೆ. ಜುಲೈ 1ರಂದು ಅಪಾರ್ಚ್‌ಮೆಂಟ್‌ನಲ್ಲೇ ಒಂದು ದಿನದ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಅಲ್ಲದೇ ಫ್ಲಾಟ್‌ಗಳ ವೀಕ್ಷಣೆಗೆ ಅವಕಾಶ ಒದಗಿಸಿ ಸ್ಥಳದಲ್ಲೇ ಹಂಚಿಕೆ ಪತ್ರ ಕೊಡಲಿದ್ದಾರೆ. ಅಲ್ಲದೇ ಹಂಚಿಕೆದಾರರಿಗೆ ಸಾಲದ ಅಗತ್ಯತೆ ಇದ್ದರೆ, ಅನುಕೂಲವಾಗುವಂತೆ ಬ್ಯಾಂಕ್‌ ಸಿಬ್ಬಂದಿ ಕೂಡ ಲಭ್ಯ ಇರಲಿದ್ದಾರೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

630 ಫ್ಲಾಟ್‌ಗಳ ಪೈಕಿ ಪ್ರತಿ ಫ್ಲಾಟ್‌ 1370 ಚದರ ಅಡಿಗಳಲ್ಲಿ ನಿರ್ಮಾಣಗೊಂಡಿದ್ದು, 806 ಚದರ ಅಡಿ ಕಾರ್ಪೆಟ್‌ ಏರಿಯಾ ಒಳಗೊಂಡಿದೆ. ಪ್ರತಿ ಫ್ಲಾಟ್‌ನ ಬೆಲೆಯನ್ನು ಪ್ರತ್ಯೇಕವಾಗಿ ನಮೂದಿಸಲಾಗಿದ್ದು, ಅದರಂತೆ ಮೌಲ್ಯವನ್ನು ಗ್ರಾಹಕರು ಪಾವತಿಸಬೇಕಿದೆ. ನೀರು ಹಾಗೂ ವಿದ್ಯುತ್‌ ವ್ಯವಸ್ಥೆಗಾಗಿ ಪಾವತಿಸಬೇಕಾದ ಮೊತ್ತವು ಫ್ಲಾಟ್‌ ಬೆಲೆಯಲ್ಲಿ ಸೇರಿಲ್ಲ. ನಿರ್ಮಾಣ ಆಗುತ್ತಿರುವ ಫ್ಲಾಟ್‌ಗಳ ವಲಯಕ್ಕೆ ಅನುಗುಣವಾಗಿ ಪಾವತಿಸಬೇಕಾದ ಮೊತ್ತವನ್ನು ಪ್ರತ್ಯೇಕವಾಗಿ ನೋಂದಣಿಗೆ ಪ್ರತ್ಯೇಕವಾಗಿ ಮೊದಲು ಪಾವತಿಸಬೇಕು. ಆಯಾ ಕಾಲಕ್ಕೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆಯನ್ನು ಪ್ರತ್ಯೇಕವಾಗಿ ಹಂಚಿಕೆದಾರರು ಪಾವತಿಸಬೇಕು. ಲಭ್ಯವಿರುವ ಕವರ್ಡ್‌ ಕಾರ್‌ ಪಾರ್ಕಿಂಗ್‌ ಸ್ಥಳವನ್ನು ಪ್ರತಿ ಮನೆಗೆ ಒಂದರಂತೆ ಪ್ರತ್ಯೇಕವಾಗಿ ಹಂಚಿಕೆದಾರರು .2.50 ಲಕ್ಷಗಳನ್ನು ಹೆಚ್ಚುವರಿಯಾಗಿ ಕಟ್ಟಬೇಕಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

 

ಶಿವರಾಮ ಕಾರಂತ ಲೇಔಟ್‌ಗೆ ಜಾಗ ಕೊಟ್ಟವರು, ಬಿಡಿಎಗೂ ಲಾಭ ಆಗುವಂತೆ ಕ್ರಮ: ಡಿಕೆಶಿ

ಹಂಚಿಕೆದಾರರು ಪ್ರತ್ಯೇಕವಾಗಿ 24 ತಿಂಗಳ ನಿರ್ವಹಣೆ ವೆಚ್ಚವನ್ನು ಫ್ಲಾಟ್‌ ನೋಂದಣಿ ಮಾಡುವ ಮೊದಲು ಮುಂಗಡವಾಗಿ ಪಾವತಿಸಬೇಕು. ಆ ನಂತರವೇ ನೋಂದಣಿಯನ್ನು ಬಿಡಿಎ ಮಾಡಿಕೊಡಲಿದೆ. ಮೊದಲ ಮಹಡಿಯಿಂದ 5ನೇ ಮಹಡಿವರೆಗೆ 2 ಬಿಎಚ್‌ಕೆ ಮನೆಗಳಿಗೆ ಮೂಲ ಬೆಲೆ .48 ಲಕ್ಷಗಳಾಗಿವೆ. 6ನೇ ಮಹಡಿ .48.24 ಲಕ್ಷ, 7ನೇ ಮಹಡಿ .48.72 ಲಕ್ಷ, 8ನೇ ಮಹಡಿ .48.96 ಲಕ್ಷ ದರ ನಿಗದಿ ಮಾಡಲಾಗಿದೆ. 9ನೇ ಮಹಡಿಯಿಂದ 12ನೇ ಮಹಡಿವರೆಗೆ .49.20 ಲಕ್ಷದಿಂದ .49.92 ಲಕ್ಷದವರೆಗೂ ದರ ಇರಲಿದೆ. 13ನೇ ಮಹಡಿಯ ಫ್ಲಾಟ್‌ವೊಂದಕ್ಕೆ .50.16 ಲಕ್ಷ ಹಾಗೂ 14ನೇ ಮಹಡಿಯ ಫ್ಲಾಟ್‌ಗೆ ತಲಾ .50.40 ಲಕ್ಷ ನಿದಗಿಪಡಿಸಲಾಗಿದೆ.

ಪ್ರೀಮಿಯಂ ಫ್ಲಾಟ್‌ಗಳಿಗೆ 1ನೇ ಮಹಡಿಯಿಂದ 5ನೇ ಮಹಡಿವರೆಗೆ .50.40 ಲಕ್ಷಗಳನ್ನು ನಿಗದಿ ಮಾಡಲಾಗಿದೆ. ಉಳಿದಂತೆ 6ನೇ ಮಹಡಿಯಿಂದ 14ನೇ ಮಹಡಿವರೆಗಿನ ಪ್ರತಿ ಫ್ಲಾಟ್‌ಗೆ .50.65 ಲಕ್ಷಗಳಿಂದ .52.65 ಲಕ್ಷ ನಿಗದಿಪಡಿಸಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಬಿಡಿಎ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಶಾಸಕರಿಗೆ ಸರ್ಕಾರ ಶಾಕ್!

 

Latest Videos
Follow Us:
Download App:
  • android
  • ios