ಅಂಬೇಡ್ಕರ್ ಕುರಿತ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಗದ್ದಲ ಆರಂಭಿಸಿದ್ದು, ಬಿಜೆಪಿ ಪ್ರತಿಭಟನೆ ನಡೆಸಿದ ಪರಿಣಾಮ ಕಲಾಪ ಮುಂದೂಡಲಾಯಿತು ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ವಿವರಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ 'ಪ್ರಾಸ್ಟಿಟ್ಯೂಟ್' ಎಂದು ನಿಂದಿಸಿದ್ದಾರೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಯಾವುದೇ ಗೊಂದಲವಿಲ್ಲದೆ ಸ್ಪಷ್ಟ ರೂಲಿಂಗ್ ನೀಡಿದ್ದಾಗಿ ಹೇಳಿದ್ದಾರೆ.
ಹುಬ್ಬಳ್ಳಿ (ಡಿ.20): ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಗದ್ದಲ ಆರಂಭಿಸಿತ್ತು. ಈ ವೇಳೆ ಬಿಜೆಪಿ ಸಹ ಪ್ರತಿಭಟನೆಗಳಿಯಿತು. ಇದರ ಪರಿಣಾಮ ಕಲಾಪ ಮುಂದೂಡಬೇಕಾಯಿತು ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ನಿನ್ನೆ ನಡೆದ ಘಟನೆ ಯಾರಿಂದ ಶುರುವಾಯಿತು ಎಂದು ವಿವರಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಗಲಾಟೆ ಜೋರಾದ ನಂತರವೇ ಕಲಾಪ ಮುಂದೂಡಲಾಯಿತು. ಬಳಿಕ ಸದನದ ಮೈಕ್, ಆಡಿಯೋ ವಿಡಿಯೋ ಎಲ್ಲವೂ ಬಂದ್ ಮಾಡಿದ್ದರು. ಆದ್ರೆ ಇದಾದ ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಬಂದು ನನಗೆ 'ಪ್ರಾಸ್ಟಿಟ್ಯೂಟ್' ಅಂತಾ ಕರೆದಿದ್ದಾರೆ ಎಂದರು. ಪದೇಪದೆ ಆ ಪದ ಬಳಕೆ ಮಾಡಿದ್ದಾರೆ ಎಂದು ದೂರಿದರು. ನಾನು ಆಡಿಯೋ ವಿಡಿಯೋ ಎಲ್ಲವನ್ನೂ ಚೆಕ್ ಮಾಡಿದೆ. ಹಾಗೆ ಬೈದ ಬಗ್ಗೆ ಆಗ ಯಾವುದೇ ದಾಖಲೆ ಸಿಕ್ಕಿಲ್ಲ.
ಹೆಬ್ಬಾಳ್ಕರ್ ಸುದ್ದಿಗೋಷ್ಠಿ: ಸಿಟಿ ರವಿ ಆ ಪದ ಬಳಕೆಯಿಂದ ನನಗೆ ನೋವಾಗಿದೆ, ಮಾಧ್ಯಮಗಳ ಮುಂದೆ ಸಚಿವೆ ಕಣ್ಣೀರು!
ಸಿ.ಟಿ. ರವಿ ಬೈದಿರುವ ಯಾವುದೇ ವಿಡಿಯೋ, ಆಡಿಯೋ ಪೂಟೇಜ್ ಸಿಕ್ಕಿಲ್ಲ. ಸದನದ ಕಲಾಪ ಮುಂದೂಡಿದ ನಂತರವೇ ಘಟನೆ ನಡೆದಿದೆ. ಉಮಾಶ್ರೀ, ನಾಗರಾಜ್, ಬಂದು ಬೈದಿರುವುದನ್ನು ನಾವು ಕೇಳಿದ್ದೇವೆ ಎಂದರು. ಆದರೆ ಅದನ್ನು ನಾವು ಸಾಕ್ಷಿ ಎಂದು ಪರಿಗಣಿಸಲು ಬರುವುದಿಲ್ಲ. ಆಗ ಸಿಟಿ ರವಿಯವರನ್ನು ಕರೆದು ಕೇಳಿದೆ ಅವರು ಅವರು ಫ್ರಸ್ಟರೇಟ್(Frustrated) ಎಂದು ಮಾತನಾಡಿದೆ ಎಂದಿದ್ದಾರೆ.
ನಾನು ಸ್ಪಷ್ಟವಾದ ರೂಲಿಂಗ್ ಕೊಟ್ಟಿದ್ದೇನೆ. ಯಾವುದೇ ಗೊಂದಲ ರೂಲಿಂಗ್ ಕೊಟ್ಟಿಲ್ಲ, ಸದನ ಹೇಗೆ ನಡೆಸಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಬಸವರಾಜ ಹೊರಟ್ಟಿ ಮತ್ತೊಮ್ಮೆ ರೂಲಿಂಗ್ ಓದಿ ಹೇಳಿದರು.
