ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆಗಿಂತ ಚರ್ಚೆಗೆ ಆದ್ಯತೆ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಶಾಸಕರಿಗೆ ಕರೆ ನೀಡಿದ್ದಾರೆ. ತಮ್ಮ ವಿರುದ್ಧದ ಅವಿಶ್ವಾಸ ಮಂಡನೆ ಪ್ರಸ್ತಾಪದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ಕಾರ್ಯವೈಖರಿ ಪ್ರಾಮಾಣಿಕವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ (ನ.26): ಬೆಳಗಾವಿ ಅಧಿವೇಶನದಲ್ಲಿ ಬರಿ ಪ್ರತಿಭಟನೆಗಳು ನಡೆಯುತ್ತಲೇ ದೂರದ ಮೈಸೂರು, ಬೆಂಗಳೂರು ನಿಂದ ಬರೋರು ಶುಕ್ರವಾರ ಹೋಗಿ ಬಿಡ್ತಾರೆ. ಕೇವಲ ಪ್ರತಿಭಟನೆ ಮಾಡೋದು, ಬಾವಿಗೆ ಇಳಿದು ಕೂರುವದು ಮಾಡಬೇಡಿ ಅಂತ ಎಲ್ಲರಿಗೆ ಹೇಳಿದ್ದೇನೆ. ಉತ್ತರ ಕರ್ನಾಟಕ ಸದಸ್ಯರ ಪ್ರಶ್ನೆಗೆ ಹೆಚ್ಚಿನ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಲ್ಲಾ ಶಾಸಕರು ಆಸಕ್ತಿ ವಹಿಸಿ ಸದನದಲ್ಲಿ ಭಾಗಿಯಾಗಬೇಕು. ಕೇವಲ ಪ್ರತಿಭಟನೆ ಮಾಡೋದು, ಬಾವಿಗೆ ಇಳಿದು ಕೂರುವದು ಮಾಡಬೇಡಿ ಅಂತ ಎಲ್ಲರಿಗೆ ಹೇಳಿದ್ದೇನೆ. ಶಾಸಕರು ತಂಗಲು ಶಾಸಕರ ಭವನ ಕಟ್ಟಿಸುವ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗುವದು ಎಂದರು. ಅನೇಕ ಶಾಸಕರು ಸಚಿವರು ಇಂತಹದೇ ಹೋಟೆಲ್‌ನಲ್ಲಿ ಕೋಣೆ ಬೇಕು ಅಂತ ಪತ್ರ ಬರೆದಿದ್ದಾರೆ. ಅದನ್ನು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಯ ಬಗ್ಗೆ ಬೇಸರ

ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ವಿಚಾರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಇಲ್ಲಿವರಗೆ ಸಭಾಪತಿ ಮೇಲೆ ಅವಿಶ್ವಾಸ ಮಂಡನೆ ಮಾಡಿಲ್ಲಾ. ಭ್ರಷ್ಟಾಚಾರ, ಏಕಪಕ್ಷೀಯವಾಗಿ ವರ್ತಿಸಿದ್ರೆ ಅವಿಶ್ವಾಸ ಮಂಡನೆ ಮಾಡಬೇಕು. ಆದ್ರೆ ನನ್ನ ಮೇಲೆ ಯಾವುದೇ ಆರೋಪಗಳಿಲ್ಲಾ. ಅವಿಶ್ವಾಸ ಮಂಡನೆ ಮಾಡಲು ಏನಾದ್ರು ಬೇಕಲ್ಲಾ..? ಎಂದು ಪ್ರಶ್ನಿಸಿದರು.

ನಾನು ಸಭಾಪತಿಯಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪ್ರಜಾಪ್ರಭುತ್ವ ದ ಅವರ ಅಧಿಕಾರ ಬಗ್ಗೆ ನಾನು ಏನು ಹೇಳಲ್ಲಾ. ಇಲ್ಲಿವರಗೆ 24 ಸಭಾಪತಿ ಗಳಾಗಿದ್ದಾರೆ. ಆದ್ರೆ ಇಲ್ಲಿವರಗೆ ಯಾರ ಮೇಲೆ ಅವಿಶ್ವಾಸ ಮಂಡನೆಯಾಗಿಲ್ಲಾ. ಪ್ರಮಾಣಿಕವಾಗಿ ಕೆಲಸ ಮಾಡೋರು ಸಭಾಪತಿಯಾಗಿರಬೇಕು. ಆದ್ರೆ ಅವರು ಮಾಡಲೇಬೇಕು ಅಂದ್ರೆ ಮಾಡಲಿ. ಆದ್ರೆ ಮಾಡಿದ್ರೆ ಯಾಕೆ ಮಾಡಿದ್ರೆ ಅಂತ ಕೇಳ್ತೇನೆ ಎಂದರು.