Karnataka Budget 2022 ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್

* ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
* ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್
* ಫೆಬ್ರವರಿ 14ರಿಂದ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ತೀರ್ಮಾನ

Basavaraj Bommai Govt First Karnataka Budget In March first Week rbj

ಬೆಂಗಳೂರು, (ಜ.27): ಇದೇ ಫೆಬ್ರವರಿ 14ರಿಂದ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು(ಶುಕ್ರವಾರ) ಸಚಿವ ಸಂಪುಟ ಸಭೆ(cabinet Meeting) ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಫೆಬ್ರವರಿ 14ರಿಂದ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ (Karnataka Budget) ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಆದ ತೀರ್ಮಾನಗಳ ಬಗ್ಗೆ ಸಚಿವ ಮಾಧುಸ್ವಾಮಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?

ಬಿಬಿಎಂಪಿ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಕೋವಿಡ್ ನಿರ್ವಹಣೆ ಕುರಿತಾಗಿಯೂ ಹಲವು ಸಲಹೆ ಸೂಚನೆಗಳು ಬಂದಿವೆ. ಸಂಪುಟ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ ಎಂದರು.

ಸಂಪುಟ ಸಭೆಯ ತೀರ್ಮಾನಗಳು
* ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳ ಪರಿಷ್ಕೃತ ಅಂದಾಜು ರೂ. 92.81 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ

* ಬೆಂಗಳೂರು ಜಿಲ್ಲೆಯ ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರ್ಕಾರಿ ಜಮೀನನ್ನು ರಾಜ್ಯ ಗುಪ್ತವಾರ್ತೆ ಘಟಕದ ತರಬೇತಿ ಅಕಾಡೆಮಿಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಒಳಾಡಳಿತ ಇಲಾಖೆಗೆ ಉಚಿತವಾಗಿ ಮಂಜೂರು 

* ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ/ ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋಣ್ ಸರ್ವೆ ಅಥವಾ ವೈಮಾನಿಕ ಸಮೀಕ್ಷೆಯನ್ನು ರೂ. 287 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

* ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ 32 ಗ್ರಾಮಗಳಿಗೆ ವಿಸ್ತರಿಸುವ ರೂ. 22.00 ಕೋಟಿಗಳ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ 

* ಚಿತ್ರದುರ್ಗ ಜಿಲ್ಲೆಯ, ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಬಾಕಿ ಇರುವ 300 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ .392.08 ಕೋಟಿಗಳ ಅಂದಾಜು ಆಡಳಿತಾತ್ಮಕ ಅನುಮೋದನೆ.

( ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಮಂಗಳೂರು ತಾಲ್ಲೂಕು, ಚೇಳ್ಯಾರು, ಪದವು ಮತ್ತು ಮಧ್ಯ ಗ್ರಾಮಗಳಲ್ಲಿ ಪ್ರಾಧಿಕಾರದ ವತಿಯಿಂದ 45.85 ಎಕರೆ/ ಸೆಂಟ್ಸ್ ಭೂಮಿಯಲ್ಲಿ ಉದ್ದೇಶಿಸಿರುವ ವಸತಿ ಬಡಾವಣೆ ಯೋಜನೆಯ ರೂ. 30.50 ಕೋಟಿಗಳ ವಿಸ್ತತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ

* ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಮರಗೋಳ ಗ್ರಾಮದ ಬ್ಲಾಕ್ ನಂ.89ರಲ್ಲಿ ಸ್ಥಾಪಿಸಲಾದ ಆರ್ಯಭಟ ಐಟಿ ಪಾರ್ಕಿನಲ್ಲಿ ಬಾಕಿ ಉಳಿದ 3 ಎಕರೆ ಜಮೀನನ್ನು 3 ಐಟಿ/ಬಿಟಿ ಕಂಪನಿಗಳಿಗೆ ಹಂಚಿಕೆ/

* ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಭೀಮಾ ಟಿಪ್ಪಣಿ ನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ ರೂ. 165 ಕೋಟಿ ಲಗತ್ತಿಸಿದ ಅಂದಾಜು ಮೊತ್ತದ ಯೋಜನೆಗೆ ಅನುಮೋದನೆ

* ಬೆಳಗಾವಿ ಜಿಲ್ಲೆಯ   ತಾಲ್ಲೂಕಿನ ಕಲ್ಲೋಳ ಯಡೂರು ಟಿಪ್ಪಣಿ ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬಿಡ್-ಕಂ-ಬ್ಯಾರೇಜ್ ಮರು ಲಗತ್ತಿಸಿದೆ ನಿರ್ಮಾಣ ಕಾಮಗಾರಿಯ ರೂ. 35,00 ಕೋಟಿಗಳ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
.

Latest Videos
Follow Us:
Download App:
  • android
  • ios