Asianet Suvarna News Asianet Suvarna News

ಜಯಂತಿ ಮಾಡಿದ್ರೆ ಸಾಲದು, ಬಸವಣ್ಣನವರ ತತ್ವ ಸಿದ್ಧಾಂತ ಅಳವಡಿಸಿಕೊಳ್ಳಬೇಕು: ಯತೀಂದ್ರ ಸಿದ್ದರಾಮಯ್ಯ

ಬಸವಣ್ಣನವರ ಜಯಂತಿ ಆಚರಣೆ ಮಾಡಿದ್ರೆ ಸಾಲಲ್ಲ, ಅವರ ತತ್ವ ಸಿದ್ಧಾಂತಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನೂತನ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ನುಡಿದರು.

Basava jayanti 2024 New MLC Dr Yatindra Siddaramaiah's speech at mysuru rav
Author
First Published Jun 9, 2024, 4:01 PM IST

ಮೈಸೂರು (ಜೂ.9): ಬಸವಣ್ಣನವರ ಜಯಂತಿ ಆಚರಣೆ ಮಾಡಿದ್ರೆ ಸಾಲಲ್ಲ, ಅವರ ತತ್ವ ಸಿದ್ಧಾಂತಗಳನ್ನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನೂತನ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ನುಡಿದರು.

ಇಂದು ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಕಾರಿ ಚಳವಳಿ ಮರೆಯಲು ಸಾಧ್ಯವಿಲ್ಲ. ಆ ಕಾಲದಲ್ಲಿ ಸಮಾಜದಲ್ಲಿ ಜಡ್ಡುಗಟ್ಟಿದ ವಾತಾವರಣವಿತ್ತು. ಅಸಮಾನತೆಯಂತೂ ತಾಂಡವವಾಡುತ್ತಿತ್ತು. ಜಾತಿ, ಮೇಲು-ಕೀಳು, ಸ್ತ್ರೀ ಅಸಮಾನತೆ ಎಲ್ಲೆ ಮೀರಿತ್ತು. ಅಂದು ಕೆಲವೇ ಕೆಲವರಿಗೆ ಸಮಾನತೆ ಸಿಗುತ್ತಿತ್ತು. ಇಂತಹ ಅಸಮಾನತೆಗಳ ವಿರುದ್ಧ ಹೋರಾಡಿ ಸ್ತ್ರೀ ಸಮಾನತೆ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಬಸವಣ್ಣನವರು. 12ನೇ ಶತಮಾನದಲ್ಲಿ ಬಸವಣ್ಣನವರು ಚೆಲ್ಲಿದ ಬೆಳಕಲ್ಲಿ ನಾವೆಲ್ಲರೂ ಇಂದು ಬದುಕುತ್ತಿದ್ದೇವೆ ಎಂದರು.

 

ಯತೀಂದ್ರ, ಸಿ.ಟಿ.ರವಿ ಸೇರಿ 11 ಜನ ವಿಧಾನಪರಿಷತ್​ಗೆ ಅವಿರೋಧ ಆಯ್ಕೆ!

ವಿಧಾನಪರಿಷತ್ ಸದಸ್ಯರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಾ ಯತೀಂದ್ರ ಸಿದ್ದರಾಮಯ್ಯರನ್ನ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸಮೀಪದ ಮಣಿಪಾಲ್ ಆಸ್ಪತ್ರೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.

Latest Videos
Follow Us:
Download App:
  • android
  • ios