* ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ* ಬನ್ನೇರುಘಟ್ಟ ಉದ್ಯಾನದ ಶುಲ್ಕ ಏರಿಕೆ* ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ
ಬೆಂಗಳೂರು, (ಡಿ.30): ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (Bannerghatta National Park) ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಝೂ, ಸಫಾರಿ, ಬಟರ್ ಫ್ಲೈ ಪಾರ್ಕ್ ದರಗಳಲ್ಲಿ ಬದಲಾವಣೆಯಾಗಿದೆ.
ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ(Bannerghatta Zoo) ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹೊಸ ದರ ಜನವರಿ 1 ರಿಂದ ಜಾರಿಗೆ ಬರಲಿದೆ. ಸೋಮವಾರದಿಂದ ಶುಕ್ರವಾರ, ವಾರಾತ್ಯ (Weekend) ಮತ್ತು ಸರ್ಕಾರಿ ರಜೆ ದಿನಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಯಾವುದಕ್ಕೆ ಎಷ್ಟು ಎನ್ನುವ ಪರಿಷ್ಕೃತ ದರ ಪಟ್ಟಿ ಈ ಕೆಳಗಿನಂತಿದೆ ನೋಡಿ.
Bengaluru| ಬನ್ನೇರುಘಟ್ಟದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ
ಪರಿಷ್ಕೃತ ದರಗಳ ಪಟ್ಟಿ ಹೀಗಿದೆ
* ನಾನ್ ಎಸಿ ಬಸ್ ಸಫಾರಿ(Nan AC Bus Safari)- ಸೋಮವಾರದಿಂದ ಶುಕ್ರವಾರ ವಯಸ್ಕರಿಗೆ 330 ರೂ. (300 ರೂ. ಹಳೆ ದರ), ಮಕ್ಕಳಿಗೆ 180 ರೂ. (150 ರೂ. ಹಳೆ ದರ) ಮತ್ತು ಹಿರಿಯ ನಾಗರಿಕರಿಗೆ 230 ರೂ.ಗಳು (200 ಹಳೆ ದರ).
* ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 380 ರೂ. (350 ಹಳೆ ದರ), ಮಕ್ಕಳು 230 ರೂ. (200 ರೂ. ಹಳೆ ದರ), ಹಿರಿಯ ನಾಗರಿಕರು 280 ರೂ. ಗಳು (250 ರೂ. ಹಳೆ ದರ).
ಇನ್ಮುಂದೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಮಾಡಿ..!
* ವಿದೇಶಿ ಪ್ರವಾಸಿಗರು ಸೋಮವಾರದಿಂದ ಶುಕ್ರವಾರದ ತನಕ ವಿದೇಶಿ ಪ್ರವಾಸಿಗರಿಗೆ ವಯಸ್ಕರಿಗೆ 500 ರೂ. ಇದ್ದ ದರ 530 ರೂ.ಗೆ ಕ್ಕೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಸಲಾಗಿದೆ. ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 500 ರೂ. ಇದ್ದ ದರವನ್ನು 530 ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಕೆಯಾಗಿದೆ.
* ಜೀಪ್ ಸಫಾರಿ (ಝೂ+ ಸಫಾರಿ + ಚಿಟ್ಟೆ ಪಾರ್ಕ + ಕ್ಯಾಮರಾ) 6 ಸೀಟರ್ ನಾನ್ ಎಸಿ ಜೀಪ್- ಸೋಮವಾರದಿಂದ ಶುಕ್ರವಾರ 3500 ರೂ. (ಪ್ರಸ್ತುತ ದರ 3500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 3800 ರೂ. (3500 ರೂ. ಪ್ರಸ್ತುತ ದರ).
* 6 ಸೀಟರ್ ಎಸಿ ಜೀಪ್(Zeep): ಸೋಮವಾರದಿಂದ ಶುಕ್ರವಾರ 4000 ರೂ. (ಪ್ರಸ್ತುತ ದರ 4000 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 4300 ರೂ. (4000 ರೂ. ಪ್ರಸ್ತುತ ದರ).
* 6 ಸೀಟರ್ Xylo- ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).
* 8 ಸೀಟರ್ ನಾನ್ ಎಸಿ ಜೀಪ್ ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).
* 7 ಸೀಟರ್ ಇನ್ನೋವಾ ಸೋಮವಾರದಿಂದ ಶುಕ್ರವಾರ 5500 ರೂ. (ಪ್ರಸ್ತುತ ದರ 5,500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 6000 ರೂ. (5,500 ರೂ. ಪ್ರಸ್ತುತ ದರ).
