ಮಗನೊಬ್ಬ ದುಶ್ಚಟಗಳಿಂದ ದೂರವಿರು ಎಂದು ಬುದ್ಧಿವಾದ ಹೇಳಿದ ಅಮ್ಮನಿಗೇ ಪೊರಕೆಯಿಂದ ಥಳಿಸಿದ್ದ. ಇದಾದ ಬೆನ್ನಲ್ಲೇ ಪೊಲೀಸರು ಕೇಸ್ ದಾಖಲಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರೂ. ಹೀಗಿದ್ದರೂ ಮಗನಿಗಾಗಿ ಮಾತೃ ಹೃದಯ ಮಿಡಿದಿದ್ದು, ತನ್ನ ಮಗನಿಗೆ ಶಿಕ್ಷೆ ನೀಡಬೇಡಿ ಎಂದು ಆ ತಾಯಿ ಪೊಲೀಸರೆದುರು ಗೋಗರೆದಿದ್ದಾರೆ.
ಬೆಂಗಳೂರು[ಡು.09]: ಸಿಗರೇಟ್ ಸೇದುವುದು, ಪ್ರೀತಿ ಪ್ರೇಮ ಎಂದು ದುಶ್ಚಟಗಳನ್ನು ಮೈಗೂಡಿಸಿಕೊಂಡಿದ್ದ ಬಾಲಕನೊಬ್ಬ ತನ್ನ ತಾಯಿ ಬುದ್ಧಿಮಾತು ಹೇಳಿದರೆಂಬ ಕಾರಣಕ್ಕೆ ಆಕೆಗೆ ಪೊರಕೆಯಿಂದ ಹಿಗ್ಗಾಮುಗ್ಗ ಥಳಿಸಿದ್ದ ವಿಡಿಯೋ ಒಂದು ಶನಿವಾರ ವೈರಲ್ ಆಗಿತ್ತು. ಈ ದೃಶ್ಯಗಳನ್ನು ವೀಕ್ಷಿಸಿದವರೆಲ್ಲಾ ಯುವಕನ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು ಅಲ್ಲದೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಯಾರೂ ದೂರು ನಿಡದ ಹಿನ್ನೆಲೆಯಲ್ಲಿ ಪೊಲೀಸರೇ ಸ್ವಯಮಪ್ರೇರಿತ ದೂರನ್ನೂ ದಾಖಲಿಸಿಕೊಂಡಿದ್ದರು. ಆದರೀಗ ತಾಯಿ ಹೃದಯ ಮಗನಿಗಾಗಿ ಮಿಡಿದಿದ್ದು, ಮಗನ ವಿರಿದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಹೆತ್ತವ್ವ ಆಗ್ರಹಿಸಿದ್ದಾರೆ.
ಜನ್ಮಕೊಟ್ಟ ತಾಯಿಗೇ ಪೊರಕೆಯಿಂದ ಥಳಿಸಿದ ಮಗ!
ಶನಿವಾರದಂದು ಜೆಪಿ ನಗರದ ಜೀವನ್ ಎಂಬಾತ ತನ್ನ ತಾಯಿಗೆ ಪೊರಕೆಯಿಂದ ಹೊಡೆದಿದ್ದ ವಿಡಿಯೋ ವೈರಲ್ ಆಗಿತ್ತು. ಬಾಲಕನ ತಾಯಿ ದೂರು ನಿಡದ ಹಿನ್ನೆಲೆಯಲ್ಲಿ ಪೊಲೀಸರೇ ಆತನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದರು. ಅಲ್ಲದೇ ಆತನನ್ನು ಪೊಲೀಸ್ ಠಾಣೆಗೆ ಕರೆಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು.
"
ಅಮ್ಮನಿಗೇ ಪೊರಕೆಯಿಂದ ಥಳಿಸಿದ ಮಗ: ಡಿಸಿಪಿ ಅಣ್ಣಾಮಲೈ ಪ್ರತಿಕ್ರಿಯೆ
ಆದರೀಗ ತನ್ನ ಮಗನಿಗೆ ಶಿಕ್ಷೆ ಸಿಗುತ್ತದೆ ಎಂದು ತಿಳಿಯುತ್ತಿದ್ದಂತೆಯೇ ತಾಯಿ ಹೃದಯ ಮಗನಿಗಾಗಿ ಮಿಡಿದಿದೆ. ತನ್ನನ್ನು ಮನಬಂದಂತೆ ಥಳಿಸಿದ್ದಾನೆ ಎಂಬುವುದನ್ನೂ ಯೋಚಿಸದ ಹೆತ್ತವ್ವ ಮಗನ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆಂದು ಎಂದು ಹೇಳಲಾಗಿದೆ.
