ಬೆಂಗಳೂರು [ಡಿ.08]: 'ಸಿಗರೇಟ್ ಸೇದಬೇಡ, ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಅಂತ ತಿರುಗಡಬೇಡ,' ಎಂದು ಬುದ್ಧಿ ಹೇಳಿದ ತಾಯಿಗೇ ಮಗನೊಬ್ಬ ಪೊರಕೆಯಲ್ಲಿ ಹೊಡೆಯುವ  ವೀಡಿಯೋವೊಂದು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿವೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಾಲಕನ ವಿರುದ್ಧ ಕೇಸ್ ದಾಖಲಿಸುವಂತೆ ಹಲವರು ಒತ್ತಾಯಿಸಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಪ್ರತಿಕ್ರಿಯಿಸಿದ್ದಾರೆ.

ಜನ್ಮ‌ಕೊಟ್ಟ ತಾಯಿಗೇ ಪೊರಕೆಯಿಂದ ಥಳಿಸಿದ ಮಗ!

ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಮಾಧ್ಯಮಗಳಲ್ಲೂ ವಿಡಿಯೋ ನೋಡಿದ್ದೇವೆ. ಆ ಹುಡುಗನ ಮನೆ ಜೆ. ಪಿ ನಗರ ವ್ಯಾಪ್ತಿಯಲ್ಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಜೆ. ಪಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬಾಲಕನ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದೂ ಹೆಳಿದ್ದೇನೆ. ಯಾರೂ ಕೇಸ್ ದಾಖಲಿಸಿಲ್ಲ, ಹೀಗಾಗಿ ಸುಮೋಟೋ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ'

-ಅಣ್ಣಾಮಲೈ, ಡಿಸಿಪಿ, ಬೆಂಗಳೂರು ದಕ್ಷಿಣ

"

ಹೆತ್ತಮ್ಮನಿಗೆ ಹೊಡೆದಿದ್ದು ಮಾತ್ರವಲ್ಲ, ದೈರ್ಯವಿದ್ದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡು ಎಂದು 19 ವರ್ಷದ ಜೀವನ್ ಅಮ್ಮನಿಗೆ ಧಮಕಿ ಹಾಕಿದ್ದ. ಈ ಮಗನ ದುಂಡಾವರ್ತನೆ ವಿರುದ್ಧ ಎಲ್ಲೆಡೆಯಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.