ಬೆ.ಗಳೂರು[ಡಿ.08]: ಮುದ್ದಿನಿಂದ ಸಾಕಿದ ಮಗ ಕೆಟ್ಟ ಚಟ ಮೈಗೂಡಿಸಿಕೊಂಡಾಗ ತಾಯಿಯಾದವಳು ಬುದ್ಧಿವಾದ ಹೇಳಿದ್ದಾಳೆ. ಆದರೆ ಇದನ್ನು ಸಹಿಸದ ಮಗ ತನ್ನ ತಾಯಿಗೇ ಪೊರಕೆ ಹಿಡಿದು ಹಿಗ್ಗಾಮುಹಗ್ಗಾ ಥಳಿಸಿದ್ದಾನೆ. 

19 ವರ್ಷದ ಜೀವನ್ ಎಂಬಾತ ಹೆತ್ತಮ್ಮನಿಗೆ ಪೊರಕೆಯಲ್ಲಿ  ಹೊಡೆದ ಪಾಪಿ ಪುತ್ರ. ಬುದ್ದಿವಾದ ಹೇಳಿದ್ದೇ ಅಮ್ಮ ಮಾಡಿದ ದೊಡ್ಡ ತಪ್ಪು ಎಂಬಂತೆ 'ನನ್ ವಿಚಾರ ಮಾತಾಡಿದ್ರೆ ಇದೇ ತರಾ ಟ್ರೀಟ್ಮೆಂಟ್' ಕೊಡ್ತೀನಿ ಎಂದು ಅಂತ ಅಮ್ಮನಿಗೇ ಧಮಕಿ ಹಾಕಿದ್ದಾನೆ.  ಜೀವನ್ ತನ್ನ ತಾಯಿ ಎದುರೇ ಸಿಗರೇಟ್ ಸೇದುವುದಲ್ಲದೇ, ಅಪ್ರಾಪ್ತೆಯೊಂದಿಗೆ ಪ್ರೇಮ ಸಂಬಂಧವನ್ನೂ ಹೊಂದಿದ್ದಾನೆ. ಇದೇ ವಿಚಾರವಾಗಿ ತಾಯಿ ಬುದ್ಧಿವಾದ ಹೇಳಿದ್ದು, ಇದನ್ನು ಸಹಿಸದೆ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.

"

ಜೀವನ್ ಹುಚ್ಚಾಟಕ್ಕೆ ನೊಂದಿರುವ ತಾಯಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಮಗನಿಗೆ ಬುದ್ದಿವಾದ ಹೇಳುವಂತೆಯೂ ಕೇಳಿಕೊಂಡಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.