ಮೊಬೈಲ್‌ ಕಳ್ಳನನ್ನು ಬೆನ್ನಟ್ಟಿ ಹಿಡಿದ ಟ್ರಾಫಿಕ್‌ ಪೊಲೀಸ್‌; ಸಾರ್ವಜನಿಕರಿಂದ ಮೆಚ್ಚುಗೆ

ಬನಶಂಕರಿ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಂದ ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದ ಕಿಡಿಗೇಡಿಯನ್ನು ಸಂಚಾರ ವಿಭಾಗದ ಪೊಲೀಸರು ಬೆನ್ನು ಹತ್ತಿ ಸೆರೆ ಹಿಡಿದಿದ್ದಾರೆ.

The traffic police chased the mobile thief and caught him bengaluru rav

ಬೆಂಗಳೂರು (ಜು.12) :  ಬನಶಂಕರಿ ಬಸ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಂದ ಮೊಬೈಲ್‌ ದೋಚಿ ಪರಾರಿಯಾಗುತ್ತಿದ್ದ ಕಿಡಿಗೇಡಿಯನ್ನು ಸಂಚಾರ ವಿಭಾಗದ ಪೊಲೀಸರು ಬೆನ್ನು ಹತ್ತಿ ಸೆರೆ ಹಿಡಿದಿದ್ದಾರೆ.

ಜೇಬುಗಳ್ಳನನ್ನು ಬನಶಂಕರಿ ಸಂಚಾರ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್‌ ಕಾಶಿರಾಮ್‌ ಬಂಧಿಸಿದ್ದು, ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬನಶಂಕರಿ ಬಸ್‌ ನಿಲ್ದಾಣ ಬಳಿ ಬೆಳಗ್ಗೆ 10ರ ವೇಳೆ ಎಎಸ್‌ಐ ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್‌ ಕಾಶಿರಾಮ್‌ ಕರ್ತವ್ಯ ನಿರತರಾಗಿದ್ದರು. ಅದೇ ವೇಳೆ ಮಹಿಳಾ ಪ್ರಯಾಣಿಕರೊಬ್ಬರಿಂದ ಮೊಬೈಲ್‌ ಕದ್ದು ಜೇಬುಗಳ್ಳ ಪರಾರಿಯಾಗುತ್ತಿದ್ದ. ತಕ್ಷಣವೇ ತಮ್ಮ ಮೊಬೈಲ್‌ ಕಳ್ಳತನವಾಗಿದ್ದನ್ನು ಗಮನಿಸಿದ ಸಂತ್ರಸ್ತೆ, ಕಳ್ಳ ಕಳ್ಳ ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಈ ಚೀರಾಟ ಕೇಳಿ ಬಸ್‌ ನಿಲ್ದಾಣಕ್ಕೆ ಧಾವಿಸಿದ ಎಎಸ್‌ಐ ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್‌ ಕಾಶಿರಾಮ್‌ ಅವರು ಕೂಡಲೇ ಕಾರ್ಯವೃತ್ತರಾಗಿದ್ದಾರೆ. ಆಗ ಮೊಬೈಲ್‌ ದೋಚಿ ಓಡಿ ಹೋಗುತ್ತಿದ್ದವನ್ನು ಬೆನ್ನಹತ್ತಿ ಹೋಗಿ ಪೊಲೀಸರು ಹಿಡಿದಿದ್ದಾರೆ. ನಂತರ ಬನಶಂಕರಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಜೇಬುಗಳ್ಳನನ್ನು ಸಂಚಾರ ಪೊಲೀಸರು ಒಪ್ಪಿಸಿದ್ದಾರೆ.

ವೃದ್ಧನ ಸುಲಿದ ಮೂವರು ಮಂಗಳಮುಖಿಯರ ಸೆರೆ; ₹6000 ಕಸಿದು ಪರಾರಿಯಾಗಿದ್ದ ಗ್ಯಾಂಗ್!

ಮನೆಗಳ್ಳತನ

ರಾಮನಗರ: ಮನೆ ಬಾಗಿಲು ಒಡೆದು 50 ಸಾವಿರ ನಗದು ಹಾಗೂ 60 ಸಾವಿರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬಿಡದಿ ಹೋಬಳಿಯ ಹನುಮಂತನಗರದಲ್ಲಿ ನಡೆದಿದೆ. ಬಡಾವಣೆ ನಿವಾಸಿ ಶ್ರೀನಿವಾಸ್‌ ಎಂಬುವರು ಕುಟುಂಬ ಸಮೇತರಾಗಿ ಶನಿವಾರ ಮಂತ್ರಾಲಯಕ್ಕೆ ಹೋಗಿದ್ದರು. ಸೋಮವಾರ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವೀಲಿಂಗ್‌ ಮಾಡುತ್ತಿದ್ದ ಪುಂಡನ ಬಂಧನ

ರಾಮನಗರ: ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ಯುವಕನ ವಿರುದ್ಧ ಪ್ರಕರಣ ದಾಖಲು ಮಾಡಿ ಪೊಲೀಸರು ಆತನನ್ನು ವಶಕ್ಕೆ ಪಡೆದಿರುವ ಘಟನೆ ಬಿಡದಿಯಲ್ಲಿ ನಡೆದಿದೆ. ಬಿಡದಿ ಸಮೀಪದ ತಿಮ್ಮೇಗೌಡನದೊಡ್ಡಿ ಗ್ರಾಮದ ವಾಸಿ ರವಿ(21) ವೀಲಿಂಗ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಯುವಕ. ಈತ ಕೆಲ ದಿನಗಳ ಹಿಂದೆ ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ವೀಲಿಂಗ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದನು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ನೋಡಿದ ಪೊಲೀಸರು ಇದೀಗ ವೀಲಿಂಗ್‌ ಮಾಡಿದ ಯುವಕನ ವಿರುದ್ಧ ಕ್ರಮ ಜರುಗಿಸಿದ್ದಾರೆ. ಇನ್ನೂ ಈತನಿಗೆ ಚಾಲನಾ ಪರವಾನಗಿ ಇರಲಿಲ್ಲ ಎಂಬ ಸಂಗತಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಇತ್ತೀಚಿಗೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೆ ನಲ್ಲಿ ವೀಲಿಂಗ್‌ ಮಾಡಿದ್ದ ನಾಲ್ಕು ಮಂದಿಯ ವಿರುದ್ಧ ಕುಂಬಳಗೂಡು ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಬಿಡದಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

Bengaluru crime: ತ್ರಿಕೋನ ಪ್ರೇಮ, ಯುವಕನ ಅಪಹರಿಸಿ ಇರಿದು ಹತ್ಯೆ!

ಹಾರ್ಡ್‌ವೇರ್‌ ಅಂಗಡಿಯಲ್ಲಿ ಕಳವು

ಚನ್ನಪಟ್ಟಣ: ಹಾರ್ಡ್‌ರ್ವೇ ಅಂಗಡಿಯ ಮೇಲ್ಭಾಗದ ಶೀಚ್‌ ಕೊರೆದು ಒಳಗೆ ನುಗ್ಗಿರುವ ಕಳ್ಳರು 1.37 ಲಕ್ಷ ರು. ಮೌಲ್ಯದ ಹಾರ್ಡ್‌ರ್ವೇ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ನಡೆದಿದೆ. ಹಳೇ ಬೆಂ-ಮೈ ಹೆದ್ದಾರಿ ಬದಿಯಲ್ಲಿರುವ ಮಹಾಲಕ್ಷ್ಮಿ ಹಾರ್ಡ್‌ವೇರ್ಸ್‌ನಲ್ಲಿ ಕಳವು ನಡೆದಿದ್ದು, ರಾತ್ರಿ ವೇಳೆ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಅಂಗಡಿ ಮಾಲೀಕರು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios