ಕಂಪ್ಲಿಯ ಮಂಗಳಮುಖಿ ರಾಜಮ್ಮ ಭಿಕ್ಷೆಯಿಂದ ಉಳಿಸಿದ ಹಣದಿಂದ ಎರಡು ಸರ್ಕಾರಿ ಶಾಲೆಗಳ 150 ಮಕ್ಕಳಿಗೆ ಬಟ್ಟೆ ದಾನ ಮಾಡಿದ್ದಾರೆ. ₹60,000 ಮೌಲ್ಯದ ಬಟ್ಟೆಗಳನ್ನು ವಿತರಿಸಿ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. .

ಬಳ್ಳಾರಿ (ಜೂ.30): ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಜಮ್ಮ ಎಂಬ ಮಂಗಳಮುಖಿಯೊಬ್ಬರು ತಮ್ಮ ಭಿ ಕ್ಷೆಯಿಂದ ಉಳಿಸಿದ ಹಣದಿಂದ ಎರಡು ಸರ್ಕಾರಿ ಶಾಲೆಗಳ 150 ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Add Asianetnews Kannada as a Preferred SourcegooglePreferred

ರಾಜಮ್ಮ ಅವರು ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾರದಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ₹60,000 ಮೌಲ್ಯದ ಟೀ ಶರ್ಟ್, ಪ್ಯಾಂಟ್ ಮತ್ತು ಇತರ ವಸ್ತ್ರಗಳನ್ನು ವಿತರಿಸಿದ್ದಾರೆ. ಈ ಉದಾರ ಕಾರ್ಯದಿಂದ ಬಡ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ.

ಈ ಕುರಿತು ಮಾತನಾಡಿದ ರಾಜಮ್ಮ, "ಭಿಕ್ಷೆ ಬೇಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿದೆ. ಬಡ ಮಕ್ಕಳಿಗೆ ಸಹಾಯ ಮಾಡುವ ಇಚ್ಛೆಯಿಂದ ಈ ಕೆಲಸ ಮಾಡಿದೆ. ಮಕ್ಕಳ ಸಂತೋಷವೇ ನನಗೆ ದೊಡ್ಡ ಆನಂದ" ಎಂದು ತಮ್ಮ ಭಾವನೆ ಹಂಚಿಕೊಂಡರು.

ಈ ಕಾರ್ಯಕ್ಕೆ ಶಾಲಾ ಶಿಕ್ಷಕರು, ಸ್ಥಳೀಯರು ಮತ್ತು ಮಕ್ಕಳು ರಾಜಮ್ಮ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜಮ್ಮ ಅವರ ಈ ಮಾನವೀಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.