Asianet Suvarna News Asianet Suvarna News

ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಬಾಗಲಕೋಟೆಯಿಂದ ಸೈಕಲ್ ಯಾತ್ರೆ ಹೊರಟ ಯುವಕರು!

ಬಾಗಲಕೋಟೆ ಜಿಲ್ಲೆಯ ಯುವಕರು ಅಯೋಧ್ಯೆಗೆ ಸೈಕಲ್ ಯಾತ್ರೆ ಮಾಡಲು ಮುಂದಾಗಿದ್ದಾರೆ. ಶ್ರೀ ಮಾತೃಭೂಮಿ ಯುವಕ ಸಂಘ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಕರ್ತರಾಗಿರುವ ಪೃಥ್ವಿರಾಜ್ ಅಂಬಿಗೇರ್ & ಅಭಿಷೇಕ್ ಘಟ್ನೂರ ಎಂಬುವವರು ಸೈಕಲ್ ಯಾತ್ರೆ ಮೂಲಕ ಅಯೋಧ್ಯೆ ಪ್ರಯಾಣ ಬೆಳೆಸಿದ್ದಾರೆ. 

Ayodhya RamMandir Darshan Youngsters started a cycle trip from Bagalkot to Ayodhya rav
Author
First Published Feb 1, 2024, 2:00 PM IST

ಬಾಗಲಕೋಟೆ (ಫೆ.1): ಜ.22ರಂದು ಅಯೋಧ್ಯಾ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯಾದ ಬಳಿಕ ದೇಶಾದ್ಯಂತ ರಾಮಭಕ್ತರು ಅಯೋಧ್ಯೆಯತ್ತ ಹರಿದು ಬರುತ್ತಿದ್ದಾರೆ. ಶ್ರೀರಾಮನ ದರ್ಶನಕ್ಕೆ ಬರುತ್ತಿರುವ ಲಕ್ಷಾಂತರ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿ ಮೆರೆಯುತ್ತಿದ್ದಾರೆ. ಹಲವು ಭಕ್ತರು ಕಾಲ್ನಡಿಗೆ ಮೂಲಕವೇ ಅಯೋಧ್ಯೆಗೆ ತಲುಪಿದರೆ, ಇನ್ನೂ ಕೆಲ ಭಕ್ತರು ಸೈಕಲ್ ಮೂಲಕ ಸಾವಿರಾರು ಕಿಮೀ ಕ್ರಮಿಸಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಯುವಕರು ಅಯೋಧ್ಯೆಗೆ ಸೈಕಲ್ ಯಾತ್ರೆ ಮಾಡಲು ಮುಂದಾಗಿದ್ದಾರೆ. ಶ್ರೀ ಮಾತೃಭೂಮಿ ಯುವಕ ಸಂಘ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಕಾರ್ಯಕರ್ತರಾಗಿರುವ ಪೃಥ್ವಿರಾಜ್ ಅಂಬಿಗೇರ್ & ಅಭಿಷೇಕ್ ಘಟ್ನೂರ ಎಂಬುವವರು ಸೈಕಲ್ ಯಾತ್ರೆ ಮೂಲಕ ಅಯೋಧ್ಯೆ ಪ್ರಯಾಣ ಬೆಳೆಸಿದ್ದಾರೆ. 

ಅಯೋಧ್ಯೆಗೆ ಬಂದ ಇಮಾಮ್‌ಗೆ ಜೀವ ಬೆದರಿಕೆ ಕರೆಗಳು! ರಾಮಮಂದಿರ ಲೋಕಾರ್ಪಣೆಗೆ ಬಂದದ್ದೇ ತಪ್ಪಾ..?

ಬಾಗಲಕೋಟೆ ನಗರದ ನಗರದಲ್ಲಿರುವ ಲಕ್ಷ್ಮಿ ದೇವಾಲಯದಿಂದ ಆರಂಭವಾದ ಸೈಕಲ್ ಯಾತ್ರೆ. ಹೊರಡುವ ಮುನ್ನ ದೇವಾಲಯದ ಆವರಣದಲ್ಲಿ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸಿದ ಯುವಕರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅಯೋಧ್ಯೆ ಸೈಕಲ್ ಯಾತ್ರೆಗೆ ಚಾಲನೆ ನೀಡಿದ್ದಾರೆ. ಯುವಕರು ಮುಂದಿನ  30 ದಿನಗಳಲ್ಲಿ 1800 ಕಿಮೀ ಪ್ರಯಾಣ ಪ್ರಯಾಣಿಸಿ ಅಯೋಧ್ಯೆ ತಲುಪಲಿದ್ದಾರೆ.

ತಲೆಗೂದಲಿಗೆ ಹಗ್ಗ ಕಟ್ಟಿ ರಾಮರಥ ಎಳೆದ ಸ್ವಾಮೀಜಿ; ಮಧ್ಯಪ್ರದೇಶದಿಂದ ಅಯೋಧ್ಯೆಗೆ ಬರೋಬ್ಬರಿ 566 ಕಿಮೀ ಪ್ರಯಾಣ!

Follow Us:
Download App:
  • android
  • ios