Asianet Suvarna News Asianet Suvarna News

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಚ್. ಡಿ. ದೇವೇಗೌಡರಿಗೆ ಆಹ್ವಾನ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ.  2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. 

Ayodhya Ram Mandir Inauguration Program Invitation to HD Devegowda at bengaluru rav
Author
First Published Dec 18, 2023, 6:37 AM IST

ಬೆಂಗಳೂರು (ಡಿ.18): ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ.  2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್ . ಡಿ. ದೇವೇಗೌಡ, ರಾಮ ಮಂದಿರ ಕಟ್ಟಡ  ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಹಿರಿಯ ಆರ್‌ಎಸ್‌ಎಸ್ ನಾಯಕ  ರಾಮ್ ಲಾಲ್ ಮತ್ತು ಹಿರಿಯ ವಿಎಚ್‌ಪಿ ನಾಯಕ  ಅಲೋಕ್ ಕುಮಾರ್ ಅವರಿಂದು ನನ್ನನ್ನು ನವದೆಹಲಿಯ ನನ್ನ ನಿವಾಸದಲ್ಲಿ ಭೇಟಿಯಾದರು ಎಂದು ತಿಳಿಸಿದ್ದಾರೆ. 

ಜನವರಿ 22ಕ್ಕೆ ಅಯೋಧ್ಯೆಗೆ ಬರಬೇಡಿ: ಮಂದಿರ ಟ್ರಸ್ಟ್‌ ಮನವಿ; ದೇಗುಲಕ್ಕೆ ಮೊಬೈಲ್‌ ಸೇರಿ ಈ ವಸ್ತುಗಳು ನಿಷೇಧ!

ಮುಂದಿನ ವರ್ಷದ ಜನವರಿ 22 ರಂದು ಪ್ರಧಾನ ಮಂತ್ರಿ ನಂರೇಂದ್ರ ಮೋದಿ ಅವರು ಇತರ ಗಣ್ಯರ ಸಮ್ಮುಖದಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ  ಸೇರಿದಂತೆ ರಾಜ್ಯದ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. 

ಆಗಸ್ಟ್ 5, 2020 ರಂದು, ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ರಾಮ ಮಂದಿರದ ಸಮೀಪವಿರುವ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ಗಣೇಶ ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ.

ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು! ಮಂದಿರ ಉದ್ಘಾಟನೆ ಬಳಿಕ 100 ದಿನ ಸಂಚಾರ

I was delighted to receive an invitation for the inauguration the Lord Ram Temple in Ayodhya.The Chairman of the Ram Temple Complex Development Committee Mr. Nripendra Misra, Senior RSS leader Mr. Ram Lal and Senior VHP leader Mr.Alok Kumar met me at my New Delhi residence,today. pic.twitter.com/AfUWkqUlwp

— H D Deve Gowda (@H_D_Devegowda) December 17, 2023

Follow Us:
Download App:
  • android
  • ios