Asianet Suvarna News Asianet Suvarna News

ಜನವರಿ 22ಕ್ಕೆ ಅಯೋಧ್ಯೆಗೆ ಬರಬೇಡಿ: ಮಂದಿರ ಟ್ರಸ್ಟ್‌ ಮನವಿ; ದೇಗುಲಕ್ಕೆ ಮೊಬೈಲ್‌ ಸೇರಿ ಈ ವಸ್ತುಗಳು ನಿಷೇಧ!

ದರ್ಶನದ ಸಮಯದಲ್ಲಿ ಭಕ್ತರು ಕೆಲ ವಸ್ತುಗಳನ್ನು ದೇಗುಲದ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಅಂದರೆ ದೇವಸ್ಥಾನದ ಆವರಣದೊಳಗೆ ಮೊಬೈಲ್‌ ಫೋನ್‌, ವಾಚ್, ಎಲೆಕ್ಟ್ರಾನಿಕ್‌ ವಸ್ತುಗಳು, ರಿಮೋಟ್‌ ಕೀಗಳು ಮತ್ತು ಇಯರ್ ಫೋನ್ ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ.

dont come to ayodhya on january 22nd ram mandir official s request ash
Author
First Published Dec 17, 2023, 12:17 PM IST

ಅಯೋಧ್ಯೆ (ಡಿಸೆಂಬರ್ 17, 2023): ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ವಿಗ್ರಹ, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಅಯೋಧ್ಯೆಗೆ ಬರಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್‌ ಕಾರ್ಯದರ್ಶಿ ಜಂಪತ್‌ ರಾಯ್‌ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಮಾರಂಭಕ್ಕೆ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇದರಿಂದ ಏಕಾಏಕಿ ಜನದಟ್ಟಣೆ ಉಂಟಾಗಿ ಸಮಸ್ಯೆಗಳಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಅವರು ‘ಅಂದು ಅಯೋಧ್ಯೆಗೆ ಬರಬೇಡಿ. ಬದಲಾಗಿ ಚಿಕ್ಕ ದೇವಸ್ಥಾನವಾಗಿರಲಿ, ದೊಡ್ಡದಾಗಿರಲಿ ನಿಮಗೆ ಹತ್ತಿರವಿರುವ ಯಾವುದೇ ದೇವರ ದೇವಸ್ಥಾನದಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸಿರಿ’ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಅಯೋಧ್ಯೆಗೆ ದೇಶದ ವಿವಿಧ ಕಡೆಯಿಂದ 1,000 ರೈಲು! ಮಂದಿರ ಉದ್ಘಾಟನೆ ಬಳಿಕ 100 ದಿನ ಸಂಚಾರ

ಮೊಬೈಲ್‌ಗೆ ನಿಷೇಧ
ದರ್ಶನದ ಸಮಯದಲ್ಲಿ ಭಕ್ತರು ಕೆಲ ವಸ್ತುಗಳನ್ನು ದೇಗುಲದ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ಅಂದರೆ ದೇವಸ್ಥಾನದ ಆವರಣದೊಳಗೆ ಮೊಬೈಲ್‌ ಫೋನ್‌, ವಾಚ್, ಎಲೆಕ್ಟ್ರಾನಿಕ್‌ ವಸ್ತುಗಳು, ರಿಮೋಟ್‌ ಕೀಗಳು ಮತ್ತು ಇಯರ್ ಫೋನ್ ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ. ಹೀಗಾಗಿ ಭಕ್ತರಿಗೆ ಉಚಿತ ಲಾಕರ್‌ ಸೌಲಭ್ಯಗಳನ್ನು ಟ್ರಸ್ಟ್‌ ಒದಗಿಸಲಿದೆ. 

ಅಲ್ಲಿ ತಮ್ಮ ವಸ್ತು ಇಟ್ಟು, ದರ್ಶನ ಮುಗಿಸಿದ ಬಳಿಕ ಪುನ: ತೆಗೆದುಕೊಂಡು ಹೋಗಬಹುದು. ದೇವಸ್ಥಾನಕ್ಕೆ ಹೋಗುವ ರಸ್ತೆಗಳ ವಿವಿಧ ಸ್ಥಳಗಳಲ್ಲಿ ನಿಯಮಿತ ತಪಾಸಣೆ ನಡೆಯುತ್ತದೆ. ಅಲ್ಲಿ ಡಿಜಿಟಲ್‌ ಉಪಕರಣಗಳನ್ನು ಇಡಬೇಕಾಗುತ್ತದೆ.

ಇದನ್ನು ಓದಿ: ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ..!

Latest Videos
Follow Us:
Download App:
  • android
  • ios