Asianet Suvarna News Asianet Suvarna News

Avatar 2: 'ಅವತಾರ್​: ದಿ ವೇ ಆಫ್​ ವಾಟರ್​' ಇಂದು ಬಿಡುಗಡೆ: ಕರ್ನಾಟಕದಲ್ಲಿ 1000 ಪ್ರದರ್ಶನ

ಜೇಮ್ಸ್‌ ಕ್ಯಾಮರಾನ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಅವತಾರ್‌ 2’ ಶುಕ್ರವಾರ ರಾಜ್ಯದ 227 ಚಿತ್ರಮಂದಿರಗಳು ಸೇರಿದಂತೆ ಜಗತ್ತಿನಾದ್ಯಂತ 55 ಸಾವಿರ ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ.

Avatar 2 released today 1000 shows in Karnataka gvd
Author
First Published Dec 16, 2022, 9:38 AM IST

ಬೆಂಗಳೂರು (ಡಿ.16): ಜೇಮ್ಸ್‌ ಕ್ಯಾಮರಾನ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಅವತಾರ್‌ 2’ ಶುಕ್ರವಾರ ರಾಜ್ಯದ 227 ಚಿತ್ರಮಂದಿರಗಳು ಸೇರಿದಂತೆ ಜಗತ್ತಿನಾದ್ಯಂತ 55 ಸಾವಿರ ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. ರಾಜ್ಯದಲ್ಲಿ ಮೊದಲ ದಿನವೇ ಒಂದು ಸಾವಿರ ಪ್ರದರ್ಶನಗಳನ್ನು ಕಾಣುತ್ತಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. 

ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಶೋಗಳ ಟಿಕೆಟ್‌ಗಳು ಬಹುತೇಕ ಸೋಲ್ಡ್‌ ಔಟ್‌ ಆಗಿವೆ. ಕನ್ನಡ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ‘ಅವತಾರ್‌ 2’ ತೆರೆಗೆ ಬರುತ್ತಿದೆ.  ಈಗಾಗಲೇ ಟೀಸರ್‌ ಹಾಗೂ ಟ್ರೇಲರ್‌ ಕನ್ನಡದಲ್ಲೇ ಬಿಡುಗಡೆ ಆಗಿದೆ. ಆದರೆ, ಎಂದಿನಂತೆ ಮೂಲ ಭಾಷೆಯಲ್ಲೇ ಹೆಚ್ಚು ಟಿಕೆಟ್‌ ಬುಕಿಂಗ್‌ ಆಗಿದ್ದು, ಕನ್ನಡ ಅವತರಣಿಕೆ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿಲ್ಲ. 

ಜೇಮ್ಸ್ ಕ್ಯಾಮೆರಾನ್ 'ಅವತಾರ್-2'ಗು ಅಲ್ಲುಅರ್ಜುನ್ 'ಪುಷ್ಪ-2'ಗೂ ಇದೆ ಲಿಂಕ್; ಏನದು?

ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೊದಲ ದಿನದ ಪ್ರದರ್ಶನದ 10 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ. ಈ ಪೈಕಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದಲ್ಲೇ 7.50 ಲಕ್ಷ ಟಿಕೆಟ್‌ಗಳು ಮಾರಾಟಗೊಂಡಿವೆ. 4.5 ಲಕ್ಷ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳ ಟಿಕೆಟ್‌ಗಳ ಮುಂಗಡ ಮಾರಾಟ ಆಗಿವೆ ಎನ್ನಲಾಗಿದೆ.

ಕನ್ನಡದಲ್ಲಿ ‘ಅವತಾರ್‌ 2’ ಬರಲಿ: ಹಾಲಿವುಡ್‌ನ್‌ ‘ಅವತಾರ್‌ 2’ ಚಲನಚಿತ್ರದ ಕನ್ನಡ ಅವತರಣಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಟ್ವೀಟರ್‌ ಅಭಿಯಾನ ಶುಕ್ರವಾರ ದಿನವಿಡೀ ಟ್ರೆಂಡಿಂಗ್‌ನಲ್ಲಿತ್ತು. ವಿಶ್ವದಾದ್ಯಂತ ಡಿ.16ರಂದು 160 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಅವತಾರ್‌-2 ಚಲನಚಿತ್ರದ ಕನ್ನಡ ಅವತರಣಿಕೆಯನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಿ ಎಂದು ಕೋರುವ ಟ್ವೀಟರ್‌ ಅಭಿಯಾನವನ್ನು ಕನ್ನಡ ಗ್ರಾಹಕ ಕೂಟ ಹಮ್ಮಿಕೊಂಡಿತ್ತು. 

ಕೊನೆಗೂ ರಿಲೀಸ್ ಆಯ್ತು 'ಅವತಾರ್' ಸೀಕ್ವೆಲ್‌ನ ಟ್ರೈಲರ್; ದೃಶ್ಯ ವೈಭವಕ್ಕೆ ಫ್ಯಾನ್ಸ್ ಫಿದಾ

ಅವತಾರ್‌2 ಕನ್ನಡದಲ್ಲಿ #avatar2inkannada ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಸಾವಿರಾರು ಕನ್ನಡಿಗರು ಟ್ವೀಟ್‌ ಮೂಲಕ ಡಿಸ್ನಿ ನಿರ್ಮಾಣ ಸಂಸ್ಥೆಗೆ ಟ್ಯಾಗ್‌ ಮಾಡಿ ಬೇಡಿಕೆ ಇಟ್ಟಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಅವತಾರ್‌ 2 ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂದು ಕನ್ನಡಿಗರು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios