ಇತ್ತೀಚೆಗೆ ಬ್ಯಾಂಕ್‌ವೊಂದರ ಎಟಿಎಂ ಡೋರ್‌ ತೆರೆದು ₹24.17 ಲಕ್ಷ ಕಳವು ಮಾಡಿದ್ದ ಪ್ರಕರಣ ಸಂಬಂಧ ಎಟಿಎಂ ಯಂತ್ರಕ್ಕೆ ಹಣ ತುಂಬುವ ಕಸ್ಟೋಡಿಯನ್‌ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜು.17) :  ಇತ್ತೀಚೆಗೆ ಬ್ಯಾಂಕ್‌ವೊಂದರ ಎಟಿಎಂ ಡೋರ್‌ ತೆರೆದು ₹24.17 ಲಕ್ಷ ಕಳವು ಮಾಡಿದ್ದ ಪ್ರಕರಣ ಸಂಬಂಧ ಎಟಿಎಂ ಯಂತ್ರಕ್ಕೆ ಹಣ ತುಂಬುವ ಕಸ್ಟೋಡಿಯನ್‌ ಸೇರಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ ನಿವಾಸಿ ನದೀಮ್‌(30), ಹುಸ್ಕೂರಿನ ಶ್ರೀರಾಮ್‌(35), ದೊಡ್ಡನಾಗಮಂಗಲದ ಅರುಳ್‌ ಕುಮಾರ್‌(22) ಹಾಗೂ ಮಾರತ್‌ಹಳ್ಳಿಯ ಮಹೇಶ್‌(30) ಬಂಧಿತರು. ಆರೋಪಿಗಳು ಜು.5ರಂದು ಪರಪ್ಪನ ಅಗ್ರಹಾರ ರಸ್ತೆ ಕೆ.ಆರ್‌.ನಗರ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರದ ಡೋರ್‌ ತೆರೆದು .24.17 ಲಕ್ಷ ಕಳ್ಳತನ ಮಾಡಿ ಪರಾರಿಯಾಗಿದ್ದರು. ಎಟಿಎಂ ಯಂತ್ರಗಳಿಗೆ ಹಣ ತುಂಬುವ ಜವಾಬ್ದಾರಿ ಹೊತ್ತಿರುವ ಕೂಡ್ಲುಗೇಟ್‌ ಸಿಎಂಎಸ್‌ ಕಂಪನಿ ಶಾಖಾ ವ್ಯವಸ್ಥಾಪಕ ವೈ.ಎಸ್‌.ಸಿದ್ದರಾಜು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಹೆಚ್ಚಿದ ಕಳ್ಳರ ಹಾವಳಿ: ಎಟಿಎಂನಲ್ಲಿದ್ದ 24 ಲಕ್ಷ ಕದ್ದ ಖದೀಮರು

ಕಂಪನಿಯ ಸಿಬ್ಬಂದಿಯೇ ದರೋಡೆಗೆ ಸಾಥ್‌ ಕೊಟ್ಟ

ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಆರೋಪಿಗಳು ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ತೀರ್ಮಾನಿಸಿದ್ದರು. ಪ್ರಮುಖ ಆರೋಪಿ ನದೀಮ್‌, ಆರೋಪಿ ಶ್ರೀರಾಮ್‌ ಮೂಲಕ ಸಿಎಂಎಸ್‌ ಕಂಪನಿಯ ಕಸ್ಟೋಡಿಯನ್‌ ಅರುಳ್‌ಕುಮಾರ್‌ ಸಂಪರ್ಕ ಮಾಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಸಿಎಂಎಸ್‌ ಕಂಪನಿಯ ವಾಹನದ ಚಾಲಕ ಆರ್ಮುಗಂ, ಭದ್ರತಾ ಸಿಬ್ಬಂದಿ ಪರಮೇಶ್ವರಪ್ಪ, ಕಸ್ಟೋಡಿಯನ್‌ ಆರುಳ್‌ ಕುಮಾರ್‌, ಮಹದೇವ ತಂಡ ಜು.5ರಂದು .32 ಲಕ್ಷ ನಗದು ತೆಗೆದುಕೊಂಡು ಬಂದು ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರಕ್ಕೆ ತುಂಬಿದ್ದರು.

ರಾಯಚೂರಲ್ಲಿದ್ದಾರೆ ಖತರ್ನಾಕ್ ಕಳ್ಳರು, ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಇರಲಿ ಎಚ್ಚರ!

ಎಟಿಎಂ ಸೇಫ್ಟಿಡೋರ್‌ ಲಾಕ್‌ ಮಾಡದ ನೌಕರ

ಕಸ್ಟೋಡಿಯನ್‌ ಅರುಳ್‌ ಕುಮಾರ್‌ ಪೂರ್ವ ಸಂಚಿನಂತೆ ಎಟಿಎಂ ಯಂತ್ರದ ಸೇಫ್ಟಿಡೋರ್‌ ಸರಿಯಾಗಿ ಲಾಕ್‌ ಮಾಡದೆ ತೆರಳಿದ್ದ. ಎಟಿಎಂ ಯಂತ್ರಕ್ಕೆ ಹಣ ತುಂಬಿ ತೆರಳಿದ ಕೆಲವೇ ನಿಮಿಷಗಳಲ್ಲಿ ಆರೋಪಿಗಳಾದ ನದೀಮ್‌ ಮತ್ತು ಮಹೇಶ್‌ ಹೆಲ್ಮೆಟ್‌ ಧರಿಸಿ ಎಟಿಎಂ ಕೇಂದ್ರ ಪ್ರವೇಶಿ, ಸೇಫ್ಟಿಡೋರ್‌ ತೆರೆದು ಬ್ಯಾಗ್‌ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದರು. ಜು.6ರಂದು ಬೆಳಗ್ಗೆ ಎಟಿಎಂ ಯಂತ್ರಕ್ಕೆ ಹಣ ತುಂಬಲು ಬಂದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಎಟಿಎಂ ಕೇಂದ್ರದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಹಾಗೂ ಮೊಬೈಲ್‌ ಫೋನ್‌ ಕರೆಗಳ ಜಾಡು ಹಿಡಿದು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.