Asianet Suvarna News Asianet Suvarna News

ರಾಯಚೂರಲ್ಲಿದ್ದಾರೆ ಖತರ್ನಾಕ್ ಕಳ್ಳರು, ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಇರಲಿ ಎಚ್ಚರ!

ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಡ್ರಾ ಮಾಡುತ್ತೀರಾ? ಸುತ್ತಮುತ್ತ ಖದೀಮರಿದ್ದಾರೆ ಎಚ್ಚರ. ಲಕ್ಷಾಂತರ ರೂಪಾಯಿಗಳನ್ನು ಡ್ರಾ ಮಾಡುವಾಗ ಮೈಮರೆಯಬೇಡಿ. ಮುಂಜಾಗ್ರತೆವಹಿಸಿ ಇಲ್ಲಂದ್ರೆ ಕ್ಷಣಾರ್ಧದಲ್ಲಿ ಲಕ್ಷಾಂತರ ಹಣ ಖದೀಮರ ಕೈ ಸೇರುತ್ತೆ ಹುಷಾರ್.

Khatarnak thieves are in Raichur, be careful before withdrawing money from ATM rav
Author
First Published Jul 2, 2023, 9:16 AM IST

ರಾಯಚೂರು (ಜು.2) : ಬ್ಯಾಂಕ್‌ ಎಟಿಎಂಗಳಲ್ಲಿ ಹಣ ಡ್ರಾ ಮಾಡುತ್ತೀರಾ? ಸುತ್ತಮುತ್ತ ಖದೀಮರಿದ್ದಾರೆ ಎಚ್ಚರ.  ಡ್ರಾ ಮಾಡುವಾಗ ಮೈಮರೆಯಬೇಡಿ. ಮುಂಜಾಗ್ರತೆವಹಿಸಿ ಇಲ್ಲಂದ್ರೆ ಕ್ಷಣಾರ್ಧದಲ್ಲಿ ಲಕ್ಷಾಂತರ ಹಣ ಖದೀಮರ ಕೈ ಸೇರುತ್ತೆ ಹುಷಾರ್.

ಇಂಥವರೇ ಕಳ್ಳರು ಅಂತಾ ಗುರುತಿಸೋದು ಕಷ್ಟ. ಬ್ಯಾಂಕ್, ಎಟಿಎಂ ಸುತ್ತಮುತ್ತಲೇ ಕಾದು ಕುಳಿತಿರುತ್ತಾರೆ ಖದೀಮರು. ಎಟಿಎಂ ಪಕ್ಕದಲ್ಲೇ ಬೈಕ್ ನಿಲ್ಲಿಸಿ ಸಾಮಾನ್ಯರಂತೆ ತಿರುಗಾಡುತ್ತರುತ್ತಾರೆ. ಕಳ್ಳರ ಚಲನವಲನ ಗಮನಿಸದೇ ನೀವು ಹಣ ಡ್ರಾ ಹೊರಬಂದಿರೋ ಮುಗೀತು ಕತೆ ತಕ್ಷಣ ಅಟ್ಯಾಕ್ ಮಾಡಿ ದೋಚಿಕೊಂಡು ಹೋಗುತ್ತಾರೆ ಲಕ್ಷಾಂತರ ಹಣ.

ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ನಡೆಯುತ್ತಿದ್ದ ಇಂಥ ಪ್ರಕರಣಗಳು ಇದೀಗ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಆದರೂ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಅಸುರಕ್ಷತೆ, ಅನಕ್ಷರತೆ ಬಂಡವಾಳ ಮಾಡಿಕೊಂಡಿರುವ ಖದೀಮರು ಇಂಥ ಗ್ರಾಹಕರ ಹಣ ದೋಚಲು ಹೊಂಚು ಹಾಕಿ ಕುಳಿತಿದ್ದಾರೆ. 

ಆನ್‌ಲೈನ್‌ ಗೇಮ್ ಚಟಕ್ಕೆ 65 ಲಕ್ಷ ರೂ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿರಸಿ ಯುವಕ!

ಜಿಲ್ಲೆಯಲ್ಲಿದ್ದಾರೆ ಖತರ್ನಾಕ್ ಕಳ್ಳರು:

ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾರೆ ಖತರ್ನಾಕ್ ಕಳ್ಳರು. ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿ ವಾಪಸ್ ಮಹಿಳೆಯೋರ್ವಳ ಲಕ್ಷಾಂತರ ರೂ ಹಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸದರ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರು ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಲು ಬಂದಿದ್ದ ಮಹಿಳೆ. ಸುಮಾರು  40ವರ್ಷದ ಅಸುಪಾಸಿನ ಮಹಿಳೆ. ಒಂದು ಲಕ್ಷರೂಪಾಯಿ ಹಣ ಡ್ರಾ ಮಾಡಿಕೊಂಡು ಹಿಂದಿರುಗುವ ವೇಳೆ ಅಟ್ಯಾಕ್. ಶೈನ್‌ ಬೈಕ್‌ನಲ್ಲಿ ಬಂದಿದ್ದ ಖದೀಮರು. ಮಹಿಳೆ ಡ್ರಾ ಮಾಡುತ್ತಲೇ ದೋಚಿಕೊಂಡು ಪರಾರಿಯಾಗಿರುವ ಕಳ್ಳರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್ಲ ಆಗಿದೆ.  ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ರೈತ ವಿಷ ಕುಡಿದು ಆತ್ಮಹತ್ಯೆ

ಶಾಲೆಯಲ್ಲಿ ಶಿಕ್ಷಕ, ಹೊರಗಡೆ ಶಿಕ್ಷಕರ ಪುತ್ರನಿಂದ ಕಿರುಕುಳ: 16ರ ಹರೆಯದ ಸಾರಾ ಆತ್ಮಹತ್ಯೆಗೆ ಶರಣು

ದಾವಣಗೆರೆ: ಸಾಲಬಾಧೆ ತಾಳಲಾರದೇ ರೈತನೊಬ್ಬ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ನೆಲ್ಲಿಹಂಕಲು ಗ್ರಾಮದಲ್ಲಿ ವರದಿಯಾಗಿದೆ. 

ಗ್ರಾಮದ ಛತ್ರಾನಾಯ್ಕ(53 ವರ್ಷ) ಮೃತ ರೈತ. ಇವರಿಗೆ ನೆಲ್ಲಿಹಂಕಲು ಗ್ರಾಮದಲ್ಲಿ 2.35 ಎಕರೆ ಜಮೀನಿದ್ದು, ಬೇರೆಯವರ 6 ಎಕರೆ ಜಮೀನನ್ನು ಸಹ ಗುತ್ತಿಗೆ ಆಧಾರದಲ್ಲಿ ವ್ಯವಸಾಯ ಮಾಡುತ್ತಿದ್ದರು. ಇದಕ್ಕಾಗಿ ಖಾಸಗಿಯವರಿಂದ 5 ಲಕ್ಷ ರು. ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತಾವರೆಕೆರೆ ಶಾಖೆಯಲ್ಲಿ 1 ಲಕ್ಷ ರು. ಸೇರಿ ಒಟ್ಟು 6 ಲಕ್ಷ ರು. ಸಾಲ ಪಡೆದಿದ್ದರು. ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಜಮೀನಿನಲ್ಲಿ ಬೆಳೆ ಕೈ ಕೊಟ್ಟಿದ್ದರಿಂದ ಮನನೊಂದು, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 
ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios