Asianet Suvarna News Asianet Suvarna News

ವಿಧಾನಸಭಾ ಚುನಾವಣೆಗೆ ಸಿದ್ಧತೆ: ರಾಜ್ಯದ 221 ಕ್ಷೇತ್ರದಲ್ಲಿ 5 ಕೋಟಿ ಮತದಾರರು

ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಮತದಾರರ ಅಂತಿಮ ಪಟ್ಟಿಪ್ರಕಟಿಸಿದ್ದು, ರಾಜ್ಯದ 221 ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕೋಟಿಗೂ ಅಧಿಕ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 

assembly elections 2023 karnataka election commission released voter list gvd
Author
First Published Jan 6, 2023, 7:23 AM IST

ಬೆಂಗಳೂರು (ಜ.06): ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಮತದಾರರ ಅಂತಿಮ ಪಟ್ಟಿ ಪ್ರಕಟಿಸಿದ್ದು, ರಾಜ್ಯದ 221 ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕೋಟಿಗೂ ಅಧಿಕ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇನ್ನುಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯು ಇದೇ ತಿಂಗಳ 15ಕ್ಕೆ ಪ್ರಕಟವಾಗಲಿದೆ. ಮತದಾರರ ವೈಯಕ್ತಿಕ ವಿವರ ಕಳವು ಪ್ರಕರಣ ಹಿನ್ನೆಲೆಯಲ್ಲಿ ಜ.15ಕ್ಕೆ ಪ್ರಕಟಿಸಲಾಗುತ್ತದೆ.

ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್‌ ಮೀನಾ, ಅವರು ಮತದಾರರ ಅಂತಿಮ ಪಟ್ಟಿಪ್ರಕಟಿಸಿ ಮಾಹಿತಿ 221 ವಿಧಾನಸಭಾ ಕ್ಷೇತ್ರದಲ್ಲಿ 5, 05,48,553 ಮತದಾರರಿದ್ದಾರೆ. ಈ ಪೈಕಿ 2,54,49,725 ಪುರುಷರು, 2,50,94,326 ಮಹಿಳೆಯರು, 4,502 ಇತರ ಮತದಾರರಿದ್ದಾರೆ. ಸಾಮಾನ್ಯ ಮತದಾರರು 5,05,00,739 ಮಂದಿ ಇದ್ದು, 2,54,03,511 ಪುರುಷರು, 2,50,92,726 ಮತ್ತು ಇತರರು 4,346 ಮತದಾರರಿದ್ದಾರೆ. ಇನ್ನು ಸೇವಾ ಮತದಾರರು ಒಟ್ಟು 47,814 ಮಂದಿ ಇದ್ದು, 46,214 ಪುರುಷರು, 1600 ಮಹಿಳೆಯರು ಇದ್ದಾರೆ ಎಂದು ವಿವರಿಸಿದರು.

ಕುಕ್ಕರ್‌ ಬಾಂಬ್‌ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್‌ ಉಗ್ರರ ಬಂಧನ

ನವೆಂಬರ್‌ ತಿಂಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ 18,32,169 ಮತದಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಕರಡು ಮತದಾರರ ಪಟ್ಟಿಪ್ರಕಟಿಸಿದ ಬಳಿಕ ಶೇ.5ರಷ್ಟುನೋಂದಣಿಯಾಗಿದೆ. 7,01,243 ಮತದಾರರು 18-19 ವರ್ಷದ ಯುವಜನಾಂಗದವರಾಗಿದ್ದಾರೆ. 3,88,064 ಪುರುಷರು, 3,13,040 ಮಹಿಳೆಯರು ಮತ್ತು 139 ಇತರೆ ಮತದಾರರಿದ್ದಾರೆ. ಇನ್ನು, ಲೈಂಗಿಕ ಕಾರ್ಯಕರ್ತರು 1,00,834, ಬುಡಕಟ್ಟು ಜನಾಂಗದವರು 30,517, ಅಂಗವಿಕಲರು 5,09,553 ಮತ್ತು ತೃತೀಯ ಲಿಂಗಿಗಳು 41,312 ಮಂದಿ ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆಯಲ್ಲಿ 12,31,540 ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದ್ದು, 6,18,965 ಹೆಸರುಗಳನ್ನು ತೆಗೆದು ಹಾಕಲಾಗಿದೆ. 7,88,485 ಮಂದಿಯ ಮಾಹಿತಿಯನ್ನು ಮಾರ್ಪಾಡಿಸಲಾಗಿದೆ. 221 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಹೊಂದಿದೆ. 6,50,532 ಮತದಾರರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು ಅತಿ ಕಡಿಮೆ ಮತದಾರರು ಇದ್ದು, 1,66,521 ಮಂದಿ ಇದ್ದಾರೆ. ಒಟ್ಟು 57,388 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು. ಮತದಾರರ ವೈಯಕ್ತಿಕ ವಿವರ ಕಳವು ಪ್ರಕರಣ ಹಿನ್ನೆಲೆಯಲ್ಲಿ ಶಿವಾಜಿನಗರ, ಚಿಕ್ಕಪೇಟೆ, ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯವನ್ನು ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳ ಅಂತಿಮಪಟ್ಟಿಯನ್ನು ಜ.15ಕ್ಕೆ ಪ್ರಕಟಿಸಲಾಗುತ್ತದೆ ಎಂದರು.

ಬೆಂಗಳೂರು-ಮೈಸೂರು ಹೈವೇ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ನಾಲ್ಕು ಬಾರಿ ನೋಂದಣಿಗೆ ಅವಕಾಶ: ಮತದಾರರ ಪಟ್ಟಿಪರಿಷ್ಕರಣೆ ವೇಳೆ ಈ ಮೊದಲು ಜ.1ರೊಳಗೆ 18 ವರ್ಷಗಳನ್ನು ಪೂರ್ಣಗೊಳಿಸಿದವರು ಮಾತ್ರ ನೋಂದಾಯಿಸಿಕೊಳ್ಳಬಹುದಿತ್ತು. ಆದರೆ, ಈಗ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜ.1, ಏ.1, ಜು.1 ಮತ್ತು ಅ.1ರೊಳಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. 17 ವರ್ಷ ಮೇಲ್ಪಟ್ಟವರು ಮೊದಲೇ ಅರ್ಜಿ ಹಾಕಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈವರೆಗೆ 25,299 ಮಂದಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. 18 ವರ್ಷ ಪೂರ್ಣಗೊಳಿಸುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನೋಜ್‌ಕುಮಾರ್‌ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್‌ ಕುಮಾರ್‌, ರಾಜೇಂದ್ರ ಚೋಳನ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios