Viral video: ತನ್ನ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕ ಮೇಲೆ ಹಲ್ಲೆ!
ಪ್ರಯಾಣಿಕರ ಹತ್ತಿಸಿಕೊಳ್ಳುವ ವಿಚಾರವಾಗಿ ಆಟೋ ಚಾಲಕರ ನಡುವೆ ಗಲಾಟೆ ನಡೆದು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.

ಬೆಂಗಳೂರು (ಆ.20): ಪ್ರಯಾಣಿಕರ ಹತ್ತಿಸಿಕೊಳ್ಳುವ ವಿಚಾರವಾಗಿ ಆಟೋ ಚಾಲಕರ ನಡುವೆ ಗಲಾಟೆ ನಡೆದು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
ತನ್ನ ಏರಿಯಾದಲ್ಲಿ ಪ್ಯಾಸೆಂಜರ್ ಪಿಕ್ ಮಾಡಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪ.ನಾಲ್ವರು ಆಟೋ ಡ್ರೈವರ್‌ಗಳು ಆಟೋವನ್ನು ಫಾಲೋ ಮಾಡಿಕೊಂಡು ಬಂದು ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ಆಟೋ ತಡೆದು ಚಾಲಕನ ಮೇಲೆ ಹಲ್ಲೆ. ನಿಮ್ಮ ಏರಿಯಾ ಯಾವುದು? ಈ ಏರಿಯಾದಲ್ಲಿ ಯಾಕೆ ಪಿಕ್ ಮಾಡ್ತಿಯಾ ಎಂದು ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕಮಿಷನರ್ ವಾರ್ನ್ ಮಾಡಿದ್ರೂ ಗೂಂಡಾಗಿರಿ ಮುಂದುವರಿಸಿರೋ ಕೆಲವು ಆಟೋ ಡ್ರೈವರ್ಸ್!
ನಗರದಲ್ಲಿ ಆಟೋ ಡ್ರೈವರ್‌ಗಳ ಗೂಂಡಾಗಿರಿ ಹೆಚ್ಚಳವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಘಟನೆ ದೃಶ್ಯ ಹಿಂದೆ ಬರುತ್ತಿದ್ದ ಕಾರಿನ ಕ್ಯಾಮರಾದಲ್ಲಿ ದಾಖಲಾಗಿದೆ.
ಆಟೋ ಡ್ರೈವರ್ ಗಳು ಪ್ರಯಾಣಿಕರನ್ನ ಬೇರೆ ಏರಿಯಾದಲ್ಲಿ ಪಿಕ್ ಮಾಡಬಾರದ? ಅ ರೀತಿಯ ರೂಲ್ಸ್ ಏನಾದ್ರೂ ಇದೀಯಾ? ಎಂದು ಶುಭಮ್ ಗುಪ್ತ ಎಂಬಾತ ಜಗಳದ ವಿಡಿಯೋ ಸಮೇತ ಬೆಂಗಳೂರು ನಗರ ಪೊಲೀಸ್ ಪೇಜ್ ಗೆ ಟ್ಯಾಕ್ ಮಾಡಿ ಟ್ವಿಟ್ ಮಾಡಿದ್ದಾನೆ.ಸದ್ಯ ವಿಡಿಯೋ ಆಧರಿಸಿ ಘಟನೆ ಬಗ್ಗೆ ಮಾಹಿತಿ ಮಾಹಿತಿ ಕಲೆಹಾಕುತ್ತಿರುವ ನಗರ ಪೊಲೀಸರು.
Bengaluru crime: ಬೈಕ್‌ಗೆ ಸೈಡ್ ಬಿಡಲಿಲ್ಲ ಎಂದು ಟೆಕ್ಕಿ ಮೇಲೆ ಗೂಂಡಾಗಿರಿ, ಆರೋಪಿಗಳು ಅರೆಸ್ಟ್
ಬೆಂಗಳೂರಿನ ಆಟೋ ಚಾಲಕರ ದುರ್ವರ್ತನೆ ಪೊಲೀಸ್ ಕಮಿಷನರ್ ವಾರ್ನ್ ಮಾಡಿದ್ದರೂ ನಿಲ್ಲದ ಗೂಂಡಗಿರಿ ಪ್ರವೃತ್ತಿ. ಕಳೆದ ವಾರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು ಗೂಂಡಾಗಿರಿ ಮಾಡಿದ್ದ ಆಟೋ ಚಾಲಕ. ದಿನನಿತ್ಯ ಆಟೋ ಚಾಲಕರಿಂದ ಒಂದಿಲ್ಲೊಂದು ದರ್ವರ್ತನೆ ಬಗ್ಗೆ ದೂರುಗಳು ಬರುತ್ತಿವೆ. ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ.