ತಮ್ಮ ಬೈಕ್‌ಗೆ ರಸ್ತೆಯಲ್ಲಿ ಜಾಗ ನೀಡಲಿಲ್ಲ ಎಂದು ಕೋಪಗೊಂಡು ಸಾಫ್‌್ಟವೇರ್‌ ಉದ್ಯೋಗಿಯೊಬ್ಬರ ಮೇಲೆ ಗೂಂಡಾಗಿರಿ ನಡೆಸಿದ ಆರೋಪದ ಮೇರೆಗೆ ಖಾಸಗಿ ಕ್ರೀಡಾ ತರಬೇತಿ ಕೇಂದ್ರದ ಟೆನ್ನಿಸ್‌ ತರಬೇತುದಾರ ಹಾಗೂ ಆತನ ಸ್ನೇಹಿತನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.8) :  ತಮ್ಮ ಬೈಕ್‌ಗೆ ರಸ್ತೆಯಲ್ಲಿ ಜಾಗ ನೀಡಲಿಲ್ಲ ಎಂದು ಕೋಪಗೊಂಡು ಸಾಫ್‌್ಟವೇರ್‌ ಉದ್ಯೋಗಿಯೊಬ್ಬರ ಮೇಲೆ ಗೂಂಡಾಗಿರಿ ನಡೆಸಿದ ಆರೋಪದ ಮೇರೆಗೆ ಖಾಸಗಿ ಕ್ರೀಡಾ ತರಬೇತಿ ಕೇಂದ್ರದ ಟೆನ್ನಿಸ್‌ ತರಬೇತುದಾರ ಹಾಗೂ ಆತನ ಸ್ನೇಹಿತನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಲ್ಲೂರಹಳ್ಳಿ ನಿವಾಸಿ ಮುರಳಿ ಹಾಗೂ ರಘು ಬಂಧಿತರಾಗಿದ್ದು, ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆ ಕಡೆಯಿಂದ ಶನಿವಾರ ವರ್ತೂರು ಸಮೀಪದ ತಮ್ಮ ಮನೆಗೆ ಶನಿವಾರ ರಾಮಗೊಂಡನಹಳ್ಳಿಯ ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಸಾಫ್‌್ಟವೇರ್‌ ಉದ್ಯೋಗಿ ಪ್ರಿಯಂದತ್ತ ತೆರಳುವಾಗ ಈ ಕೃತ್ಯ ನಡೆದಿತ್ತು. ಈ ಘಟನೆಯ ವಿಡಿಯೋವನ್ನು ಟ್ವೀಟರ್‌ನಲ್ಲಿ ದೂರು ದತ್ತ ಪೋಸ್ಟ್‌ ಮಾಡಿದ್ದರು. ಅಂತೆಯೇ ವಿಡಿಯೋ ಆಧರಿಸಿ ಆರೋಪಿಗಳನ್ನು ಸಬ್‌ ಇನ್‌ಸ್ಪೆಕ್ಟರ್‌ ನವೀನ್‌ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru crime: ತಪಾಸಣೆಗೆ ತಡೆದ ಪೊಲೀಸರ ಮೇಲೇ ಮಚ್ಚು ಬೀಸಿದ ಕಳ್ಳ!

ಕಲ್ಲಿನಿಂದ ಹೊಡೆದು ಸಾಯಿಸುವುದಾಗಿ ಧಮ್ಕಿ:

ವೈಟ್‌ಫೀಲ್ಡ್‌ ಸಮೀಪದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಅಸ್ಸಾಂ ಮೂಲದ ಪ್ರಿಯಂದತ್ತ ಅವರು, ತಮ್ಮ ಕುಟುಂಬದ ಜತೆ ವರ್ತೂರು ಹತ್ತಿರದ ಮಧುರ ನಗರದಲ್ಲಿ ನೆಲೆಸಿದ್ದಾರೆ. ಕೆಲಸದ ನಿಮಿತ್ತ ವೈಟ್‌ಫೀಲ್ಡ್‌ಗೆ ವಕೀಲರಾಗಿರುವ ತಮ್ಮ ಪತ್ನಿ ಲಲಿತಾ ಜತೆ ಶನಿವಾರ ದತ್ತ ತೆರಳಿದ್ದರು. ಅಲ್ಲಿ ಕೆಲಸ ಮುಗಿಸಿಕೊಂಡು ಎಚ್‌ಎಎಲ್‌ ಮುಖ್ಯರಸ್ತೆಯಲ್ಲಿ ಕಾರಿನಲ್ಲಿ ದಂಪತಿ ಮನೆಗೆ ಮರಳುತ್ತಿದ್ದರು. ಆಗ ಮಾರ್ಗ ಮಧ್ಯೆ ನಲ್ಲೂರಹಳ್ಳಿ ಬಳಿ ದತ್ತ ಅವರ ಕಾರನ್ನು ಹಿಂದಿಕ್ಕಲು ಬೈಕ್‌ನಲ್ಲಿ ತೆರಳುತ್ತಿದ್ದ ಮುರಳಿ ಹಾಗೂ ರಘು ಯತ್ನಿಸಿದ್ದಾರೆ. ಆದರೆ ಆ ವೇಳೆ ತಮಗೆ ಸೈಡ್‌ ಕೊಡಲಿಲ್ಲ ಎಂದು ಕೆರಳಿದ ಆರೋಪಿಗಳು, ಕೆಲ ದೂರ ಸಾಗಿದ ಬಳಿಕ ಪ್ರಿಯಂದತ್ತ ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ಕಿಟಕಿ ಗಾಜು ಒಡೆದು ದುಂಡಾವರ್ತನೆ ತೋರಿದ ಇಬ್ಬರು, ದತ್ತ ಅವರನ್ನು ಕಾರಿನಿಂದ ಇಳಿಯುವಂತೆ ಆಗ್ರಹಿಸಿದ್ದಾರೆ.

ಈ ಬೆದರಿಕೆ ಹೆದರಿದ ದತ್ತ ಕಾರಿನಿಂದಿಳಿಯಲು ನಿರಾಕರಿಸಿದ್ದಾರೆ. ಆಗ ಕಲ್ಲು ಹೊಡೆದು ಸಾಯಿಸುತ್ತೇವೆ ಎಂದು ದತ್ತ ದಂಪತಿಗೆ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಗಲಾಟೆ ನೋಡಿ ಜಮಾಯಿಸಿದ ಸ್ಥಳೀಯರು, ದತ್ತ ದಂಪತಿಗೆ ರಕ್ಷಣೆಗೆ ನಿಂತಿದ್ದಾರೆ. ಆಗ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುತ್ತಿದ್ದಂತೆ ಮುರಳಿ ಹಾಗೂ ರಘು ಅಲ್ಲಿಂದ ಕಾಲ್ಕಿತ್ತಿದ್ದರು. ಕೂಡಲೇ ಈ ಘಟನೆ ಸಂಬಂಧ ವೈಟ್‌ಫೀಲ್ಡ್‌ ಠಾಣೆಗೆ ದತ್ತ ದೂರು ದಾಖಲಿಸಿದ್ದರು. ಅದರನ್ವಯ ತನಿಖೆ ಕೈಗೆತ್ತಿಕೊಂಡ ಪಿಎಸ್‌ಐ ನವೀನ್‌ ಸಾರಥ್ಯದ ತಂಡವು, ಕಾರಿನ ಡ್ಯಾಶ್‌ಬೋರ್ಡ್‌ ಮೇಲಿನ ಕ್ಯಾಮರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಸ್ತೆ ಮಧ್ಯೆ ನಿಂತಿದ್ದ ಬೈಕ್‌ ತೆಗೆಯಲು ಹೇಳಿದ್ದಕ್ಕೆ ಹಲ್ಲೆ: ರೌಡಿಗಳ ಬಂಧನ

ಟೆನ್ನಿಸ್‌ ಗುರುವಿನ ಪುಂಡಾಟ

ನಲ್ಲೂರುಹಳ್ಳಿಯಲ್ಲಿ ಖಾಸಗಿ ಕ್ರೀಡಾ ತರಬೇತಿ ಕೇಂದ್ರದಲ್ಲಿ ಮುರುಳಿ ಟೆನ್ನಿಸ್‌ ತರಬೇತುದಾರನಾಗಿದ್ದರೆ, ಆತನ ಸ್ನೇಹಿತ ರಘು ಎಲೆಕ್ಟ್ರಿಷಿಯನ್‌ ಆಗಿದ್ದ. ಅಹಂಕಾರದಲ್ಲಿ ಗೂಂಡಾಗಿರಿ ನಡೆಸಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.