‘ನನ್ನನ್ನೂ ಬಂಧಿಸಿ’: ಸಿಎಂ ಮನೆ ಎದುರು ಪೋಸ್ಟರ್‌ಗಳು ಪ್ರತ್ಯಕ್ಷ

  • ಬಿ.ಎಸ್‌. ಯಡಿಯೂರಪ್ಪ ಅವರ ಅಧಿಕೃತ ನಿವಾಸದ ಗೋಡೆ ಮೇಲೆ ನನ್ನನ್ನು ಬಂಧಿಸಿ ಪೋಸ್ಟರ್
  • ಗೋಡೆಗಳು ಹಾಗೂ ಬ್ಯಾರಿಕೇಡ್‌ಗಳ ಮೇಲೆ ‘ನನ್ನನ್ನೂ ಬಂಧಿ​ಸಿ’ ಎಂಬ ಭಿತ್ತಿಪತ್ರ
  • ರಾಜ್ಯದಲ್ಲಿ ಮಿತಿ ಮೀರಿದ ಕೊರೋನಾ ಪರಿಸ್ಥಿತಿ
Arrest Me Poster On Karnataka Cm BS Yediyurappa House  snr

ಬೆಂಗಳೂರು (ಮೇ.18):  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿ ಮುಂಭಾಗದ ಗೋಡೆಗಳು ಹಾಗೂ ಬ್ಯಾರಿಕೇಡ್‌ಗಳ ಮೇಲೆ ‘ನನ್ನನ್ನೂ ಬಂಧಿ​ಸಿ’ ಎಂಬ ಭಿತ್ತಿಪತ್ರಗಳು ರಾತ್ರೋರಾತ್ರಿ ಕಾಣಿಸಿಕೊಂಡಿವೆ.

ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸುವ ಪೋಸ್ಟರ್‌ಗಳನ್ನು ದೆಹಲಿಯ ಹಲವು ಬಡಾವಣೆಗಳ ಗೋಡೆಗಳಲ್ಲಿ ಅಂಟಿಸಿದವರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ​ ಟ್ವೀಟ್‌ ಮಾಡಿ ‘ಮೋದಿಜಿ ನಮ್ಮನ್ನು ಬಂ​ಧಿಸಿ’ ಎಂದು ಸವಾಲೆಸೆದಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ವೈದ್ಯರಿಗೆ ಧೈರ್ಯ ತುಂಬಿದ ಸಿಎಂ ಯಡಿಯೂರಪ್ಪ! ..

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಪರಿಚಿತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ನಿವಾಸದ ಮುಂದೆಯೇ ಪೋಸ್ಟರ್‌ ಅಂಟಿಸಿದ್ದಾರೆ. ಸಿಎಂ ನಿವಾಸದ ಕಣ್ಣಳತೆ ದೂರದಲ್ಲಿ ಭಾನುವಾರ ರಾತ್ರಿ ಗೋಡೆ ಹಾಗೂ ಪೊಲೀಸ್‌ ಬ್ಯಾರಿಕೇಡ್‌ಗಳ ಮೇಲೆ ಪೋಸ್ಟರ್‌ ಹಾಕಲಾಗಿದೆ. ಭಾರತದ ಜನರ ಪ್ರಾಣ ಉಳಿಸಬಲ್ಲ ಲಸಿಕೆಗಳನ್ನು ಕೇಂದ್ರ ಸರ್ಕಾರ ವಿದೇಶಕ್ಕೆ ರಫ್ತು ಮಾಡಿದ್ದೇಕೆ? ನನ್ನನ್ನೂ ಬಂಧಿ​ಸಿ ಮೋದಿಜಿ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಗೋಡೆಗಳು ಹಾಗೂ ಪೊಲೀಸ್‌ ಬ್ಯಾರಿಕೇಡ್‌ ಮೇಲೆ ಅಂಟಿಸಲಾಗಿದೆ.

ಟಾಸ್ಕ್‌ಪೋರ್ಸ್ ಮಹತ್ವದ ಸಭೆ, ಈ ತಿಂಗಳಾಂತ್ಯದವರೆಗೆ ಲಾಕ್ ಡೌನ್? ...

ಕುತೂಹಲಕಾರಿ ಸಂಗತಿಯೆಂದರೇ, ಪೊಲೀಸ್‌ ಬ್ಯಾರಿಕೇಡ್‌ ಮೇಲೆ ಅಂಟಿಸುವಾಗ ಪೊಲೀಸರು ಇರಲಿಲ್ಲವೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದ್ದು, ಭದ್ರತಾ ವೈಫಲ್ಯದ ಮಾತುಗಳು ಸಹ ಕೇಳಿಬಂದಿವೆ.

ನನ್ನನ್ನೂ ಬಂಧಿ​ಸಿ ಬಂಧಿಸಿ ಅಭಿಯಾನ:  ಈ ನಡುವೆ, ಸಾಮಾಜಿಕ ತಾಣಗಳಲ್ಲಿಯೂ ‘ನನ್ನನ್ನೂ ಬಂಧಿ​ಸಿ’ ಬಂಧಿಸಿ ಎಂಬ ಟ್ವೀಟರ್‌ ಅಭಿಯಾನ ಆರಂಭವಾಗಿದ್ದು, ಪರ- ವಿರೋಧ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಕೇಂದ್ರ ಸರ್ಕಾರ ಈ ಮೊದಲೇ ಲಸಿಕೆ ವಿತರಣೆಗೆ ಒಪ್ಪಂದ ಮಾಡಿಕೊಂಡಿತ್ತು ಎಂದು ಕೆಲವರು ಹಾಗೂ ಮತ್ತೊಂದಿಷ್ಟುಜನರು ದೇಶದ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಪರ- ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios