ನವದೆಹಲಿ(ಮೇ.15):ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಿದ್ದರೂ ಗಮಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಹೌದು ಐಸಿಯುನಲ್ಲಿ ಚಿಕಿತ್ಸೆ ನೀಡಬೇಕಾದ ರೋಗಿಗಳ ಸಂಖ್ಯೆ ಬಹಳಷ್ಟು ಹೆಚ್ಚಿದೆ. ಇದೇ ಕಾರಣದಿಂದ ರಾಷ್ಟ್ರ ರಾಜಧಾನಿಯ ಶೇ. 96ರಷ್ಟು ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಮುಂದಿನ ಕೆಲ ದಿನಗಳಲ್ಲಿ ಈ ರೋಗಿಗಳ ಸಂಖ್ಯೆಯೂ ಕಡಿಮೆಯಾಗಲಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ಕೊಂಚ ಯಾಮಾರಿದ್ರೂ, ನಿಯಮಗಳನ್ನು ಕಡೆಗಣಿಸಿದರೂ ಸೋಂಕಿತರ ಸಂಖ್ಯೆ ದ್ವಿಉಗುಣಗೊಳ್ಳಲಿದೆ ಎಂದೂ ಎಚ್ಚರಿಸಿದ್ದಾರೆ.

ದೆಹಲಿಯ ಒಟ್ಟು 6,023 ಐಸಿಯು ಬೆಡ್‌ಗಳು ಆಕ್ಟವ್

ದೆಹಲಿ ಸರ್ಕಾರದ ದಾಖಲೆಯನ್ವಯ ರಾಜಧಾನಿಯ ಒಟ್ಟು 6,023 ಐಸಿಯು ಬೆಡ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 5,779 ಅಂದರೆ ಶೇ.. 96ರಷ್ಟು ಭರ್ತಿಯಾಗಿವೆ. ಇನ್ನು ಕೇವಲ 244 ಬೆಡ್‌ಗಳಷ್ಟೇ ಲಭ್ಯವಿದೆ. ಈಗಲೂ ಅಗತ್ಯವಿದ್ದವರಿಗೆ ಭಾರೀ ಸರ್ಕಸ್ ನಡೆಸಿದ ಬಳಿಕವಷ್ಟೇ ಐಸಿಯು ಬೆಡ್‌ಗಳು ಸಿಗುತ್ತಿವೆ. ಹೀಗಿರುವಾಗ ಶೀಘ್ರದಲ್ಲೇ ಐಸಿಯು ಬೆಡ್‌ಗಳ ಸಂಖ್ಯೆ ಹೆಚ್ಚಿಸುವುದಾಗಿ ಕೇಜ್ರೀವಾಲ್ ಸರ್ಕಾರ ತಿಳಿಸಿದೆ. 

ಕಳೆದ ವಾರ ಅನೇಕ ಆಕ್ಸಿಜನ್‌ ಬೆಡ್‌ಗಳು ಖಾಲಿ

ಇನ್ನು ಆಕ್ಸಿಜನ್ ಬೆಡ್‌ಗಳ ಬಗ್ಗೆ ಗಮನಹರಿಸುವುದಾದರೆ ಸದ್ಯ ಇದು ಕೂಡಾ ಶೇ. 74ರಷ್ಟು ಭರ್ತಿಯಾಗಿವೆ. ಕಕಳೆದ ವಾರ ಅನೇಕ ಆಕ್ಸಿಜನ್ ಬೆಡ್‌ಗಳು ಖಾಲಿಯಾಗಿವೆ. ಸದ್ಯ ಜನರಿಗೆ ಆಕಗ್ಸಿಜನ್ ಬೆಡ್‌ ಹುಡುಕಲು ಅಷಷ್ಟೇನೂ ಕಷ್ಟವಾಗುತ್ತಿಲ್ಲ. ಹತ್ತು ದಿನಗಳ ಹಿಂದೆ ಈ ಬೆಡ್‌ಗಳಿಗೂ ಜನ ಪರದಾಡುತ್ತಿದ್ದರು. ದೆಹಲಿ ಸರ್ಕಾಆರದ ಡೇಟಾ ಅನ್ವಯ ಆಸ್ಪತ್ರೆಗಳಲ್ಲಿ ಏಳು ಸಾವಿರಕ್ಕಿಂತ ಹೆಚ್ಚು ಸಾಮಾನ್ಯ ಬೆಡ್‌ಗಳು ಖಾಲಿ ಇವೆ ಎನ್ನಲಾಗಿದೆ. ಇದು ಒಂದು ಬಗೆಯ ಐಸೋಲೇಷನ್ ಬೆಡ್‌ ಆಗಿರುತ್ತದೆ. ಆದರೆ ಇಲ್ಲಿ ಐಸಿಯು ಅಥವಾ ಆಕ್ಸಿಜನ್‌ನಂತಹ ವ್ಯವಸ್ಥೆ ಇರುವುದಿಲ್ಲ. 

ಕಡೆಗಣಿಸಬೇಡಿ

ಇನ್ನು ಸರ್ಕಾರದವನ್ನು ಕೊರೋನಾ ಬಗ್ಗೆ ಎಚ್ಚರಿಸಿರುವ ತಜ್ಞರು, ಈ ಮಹಾಮಾರಿಯನ್ನು ಕಡೆಗಣಿಸಬೇಡಿ. ನಿಯಮ ಪಾಲನೆ ಅಗತ್ಯ. ಇಲ್ಲವೆಂದಾದರೆ ಈಗಾಗಲೇ ಅನುಭವಿಸಿರುವುದಕ್ಕಿಂತಲೂ ಕೆಟ್ಟ ದಿನಗಳನ್ನು ಕಾಣಬೇಕಾಗಬಹುದು ಎಂದಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona