ಟಾಸ್ಕ್‌ಪೋರ್ಸ್ ಮಹತ್ವದ ಸಭೆ, ಈ ತಿಂಗಳಾಂತ್ಯದವರೆಗೆ ಲಾಕ್ ಡೌನ್?
* ಸೆಮಿ ಲಾಕ್ ಡೌನ್ ನಂತರ ಕರ್ನಾಟಕದಲ್ಲಿ ಮುಂದೇನು?
* ಮೇ ತಿಂಗಳ ಅಂತ್ಯದ ವರೆಗೂ ಈಗಿರುವ ಸ್ಥಿತಿಯನ್ನೇ ಮುಂದುವರಿಸಲಾಗುತ್ತದೆಯೆ?
* ವಾಸ್ತವದ ಪಾಸಿಟಿವ್ ಲೆಕ್ಕ ಪರಿಶೀಲಿಸಲಿರುವ ಟಾಸ್ಕ್ ಪೋರ್ಸ್ ಸಭೆ
* ಲಾಕ್ ಡೌನ್ ಮುಂದುವರಿಕೆ ತೀರ್ಮಾನ ಸಾಧ್ಯತೆ
ಬೆಂಗಳೂರು(ಮೇ 14) ರಾಜ್ಯದಲ್ಲಿ ಮತ್ತೇ ಲಾಕ್ ಡೌನ್ ವಿಸ್ತರಣೆ ಆಗಲಿದೆಯಾ? ಸರ್ಕಾರದ ಮುಂದಿರುವ ಮುಖ್ಯವಾದ ಆಯ್ಕೆಗಳೇನು? ಇದು ಸದ್ಯ ಎಲ್ಲರೂ ತಮಗೆ ತಾವೆ ಕೇಳಿಕೊಳ್ಳುತ್ತಿರುವ ಪ್ರಶ್ನೆ
ಮೇ ತಿಂಗಳಾಂತ್ಯದವರೆಗೆ ಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನಿಸುವ ಎಲ್ಲ ಸಾಧ್ಯತೆ. ರಾಜ್ಯ ಸರ್ಕಾರದ ಟಾಸ್ಕ್ ಪೋರ್ಸ್ ಸಮಿತಿ ಸಭೆ ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿದ್ದು ಮಹತ್ವದ ತೀರ್ಮಾನ ಆಗಲಿದೆ.
ಡಿಸಿಎಂ ಡಾ.ಅಶ್ವತ್ ನಾರಾಯಣ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಚಿವರಾದ ಡಾ.ಕೆ.ಸುಧಾಕರ್, ಸುರೇಶ್ ಕುಮಾರ್, ಸಿ.ಸಿ.ಪಾಟೀಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಸಭೆಗೆಯಲ್ಲಿರಲಿದ್ದಾರೆ.
ಕಳೆದ ಒಂದು ವಾರದ ಪಾಸಿಟಿವ್ ಕೇಸ್ ಗಳ ಚಿತ್ರಣದ ಬಗ್ಗೆ ಚರ್ಚೆಯಾಗಲಿದೆ. ಜನತಾ ಕರ್ಪ್ಯೂಗಿಂತ ಲಾಕ್ ಡೌನ್ ವೇಳೆ ದಾಖಲಾದ ಕೇಸ್ ಗಳ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಸದ್ಯದ ಪರಿಸ್ಥಿತಿ ಹೇಗಿದೆ ಎನ್ನುವುದರ ಮೇಲೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಭಾರತದ ಎಂಟು ಲಸಿಕೆಗಳ ಬಗ್ಗೆ ತಿಳಿದುಕೊಳ್ಳಿ
ಲಾಕ್ ಡೌನ್ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಲಿದ್ದು ಅಧಿಕಾರಿಗಳು ಕೊಡುವ ಸಲಹೆಯನ್ನು ಟಾಸ್ಕ್ ಪೋರ್ಸ್ ಗಂಭೀರವಾಗಿ ತೆಗೆದುಕೊಳ್ಳಲಿದೆ.
ಕೆಳ ಹಂತದ ಆಸ್ಪತ್ರೆಗಳಲ್ಲಿ ಮೂಲ ಭೂತ ಸೌಲಭ್ಯಕ್ಕೆ ಆದ್ಯತೆ ನೀಡುವುದು. ತಾಲೂಕು ಕೇಂದ್ರಗಳಲ್ಲಿ ಸೂಕ್ತ ಆಸ್ಪತ್ರೆಗಳು ಇಲ್ಲದ ಕಡೆ ಆಸ್ಪತ್ರೆಗಳ ನಿರ್ಮಾಣ. ರಾಜ್ಯದಲ್ಲಿ ಸದ್ಯ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಸಂಖ್ಯೆ ಹೆಚ್ಚಳ, ಆಕ್ಸಿಜನ್ ಜನರೇಟರ್ ಇಲ್ಲದ ತಾಲೂಕು ಆಸ್ಪತ್ರೆಗಳಿಗೆ ಜನರೇಟರ್ ವ್ಯವಸ್ಥೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಜನರೇಟರ್ ವ್ಯವಸ್ಥೆಗೆ ಆರ್ಥಿಕ ಸಹಕಾರ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ದೊಡ್ಡ ಪ್ರಮಾಣದ ಐಸಿಯು ವ್ಯವಸ್ಥೆ ಕಲ್ಪಿಸುವುದದು, ಆಸ್ಪತ್ರೆ ಇಲ್ಲದ ಅಸೆಂಬ್ಲಿ ಕ್ಷೇತ್ರಗಳಲ್ಲಿ 100 ಬೆಡ್ ನ ಆಸ್ಪತ್ರೆ ನಿರ್ಮಾಣಕ್ಕೆ ನೀಲನಕ್ಷೆ ಸೇರಿ ಹಲವು ವಿಚಾರಗಳು ಚರ್ಚೆಯಾಗಲಿವೆ.
ಎಲ್ಲಾ ಜಿಲ್ಲೆಗಳಲ್ಲಿ ನೈಟ್ರೋಜನ್ ಗ್ಯಾಸ್ ನ್ನು ಆಕ್ಸಿಜನ್ ಗ್ಯಾಸ್ ಗೆ ಪರಿವರ್ತಿಸಲು ಕ್ರಮ ತೆಗೆದುಕೊಳ್ಳುವುದು ಆರೋಗ್ಯ ಸಿಬ್ಬಂದಿಗೆ ಇನ್ಸೆಂಟಿವ್ ಹೆಚ್ಚಳ, ಆಕ್ಸಿಜನ್ ಟ್ಯಾಂಕರ್ ಗಳ ಹೆಚ್ಚಳ ಮಾಡಬೇಕಾದ ಅನಿವಾರ್ಯತೆಯನ್ನು ಚರ್ಚೆ ಮಾಡಲಾಗುವುದು.