ಮೊದಲ ಬಾರಿಗೆ ಕರ್ನಾಟಕದಲ್ಲಿ ಸೇನಾ ದಿನಾಚರಣೆ, ರಾಜನಾಥ ಸಿಂಗ್‌, ಭೂಸೇನೆ ಮುಖ್ಯಸ್ಥ ಪಾಂಡೆ ಭಾಗಿ

ಬೆಂಗಳೂರು(ಜ.15): ಸಾಮಾನ್ಯವಾಗಿ ದೆಹಲಿಯಲ್ಲಿ ನಡೆಯುತ್ತಿದ್ದ ಸೇನಾ ದಿನವನ್ನು ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಿಂದ ಹೊರಗೆ ಆಚರಿಸಲಾಗುತ್ತಿದೆ. ಬೆಂಗಳೂರಿಗೆ ಸೇನಾ ದಿನದ ಆತಿಥ್ಯ ಲಭಿಸಿದ್ದು, ಭಾನುವಾರ ಸೇನಾಪಡೆಗಳ ಶಕ್ತಿ, ಶಿಸ್ತು ಪ್ರದರ್ಶನವಾಗಲಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್‌, ಭೂಸೇನಾ ಮುಖ್ಯಸ್ಥ ಮೇಜರ್‌ ಜನರಲ್‌ ಮನೋಜ್‌ ಪಾಂಡೆ ಪಾಲ್ಗೊಳ್ಳಲಿದ್ದಾರೆ.

ಏನಿದು ಸೇನಾ ದಿನ?

1949ರ ಜ.15ರಂದು ಬ್ರಿಟಿಷರಿಂದ ಕನ್ನಡಿಗ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಸೇನಾಧಿಕಾರ ವಹಿಸಿಕೊಂಡಿದ್ದರು. ಈ ಅಧಿಕಾರ ಹಸ್ತಾಂತರದ ಐತಿಹಾಸಿಕ ದಿನದ ಸ್ಮರಣಾರ್ಥ ಪ್ರತಿ ವರ್ಷ ಜ.15ರಂದು ಸೇನಾ ದಿನ ಆಚರಿಸಲಾಗುತ್ತದೆ.

ಈ ಬಾರಿ ಬೆಂಗಳೂರಿನಲ್ಲಿ ಭಾರತೀಯ ಸೇನಾ ಪಥಸಂಚಲನ ದಿನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ಗೌರವ!

ಬೆಂಗಳೂರಿನಲ್ಲಿ ಇಂದು ಸೇನಾ ದಿನಾಚರಣೆ

ದೇಶದಲ್ಲಿ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರಗೆ ಭಾರತೀಯ ಸೇನಾ ದಿನಾಚರಣೆಯು ಬೆಂಗಳೂರಿನಲ್ಲಿ ಜ.15ರಂದು ನಡೆಯುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ಎಂಇಜಿ ಸೆಂಟರ್‌ನಲ್ಲಿ ಪರೇಡ್‌ಗೆ ಸಕಲ ಸಿದ್ಧತೆಯಾಗಿದೆ. ಸಂಜೆ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಜರುಗಲಿರುವ ‘ಮಿಲಿಟರಿ ಟ್ಯಾಟೂ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಪಾಲ್ಗೊಳ್ಳಲಿದ್ದಾರೆ.

ರಾಷ್ಟ್ರ ರಾಜಧಾನಿಯ ಹೊರಭಾಗದಲ್ಲಿ ನಡೆಯುತ್ತಿರುವ ಈ ರಾಷ್ಟ್ರೀಯ ಕಾರ್ಯಕ್ರಮದ ಪ್ರಥಮ ಆತಿಥ್ಯವನ್ನು ರಾಜ್ಯವಹಿಸುತ್ತಿದೆ. ಸೇನಾ ದಿನದ ಪರೇಡ್‌ಗಾಗಿ ಎಂಇಜಿ ಸೆಂಟರ್‌ನ ‘ಗೋವಿಂದಸ್ವಾಮಿ ಸ್ಕೆ$್ವೕರ್‌ ಡ್ರಿಲ್‌’ನಲ್ಲಿ ವಿವಿಧ ರೆಜಿಮೆಂಟ್‌ಗಳ ಯೋಧರು ತಿಂಗಳು ತಾಲೀಮು ನಡೆಸಿದ್ದು, ಭಾನುವಾರ ಬೆಳಗ್ಗೆ ಸುಮಾರು 500ಕ್ಕೂ ಹೆಚ್ಚು ಯೋಧರಿಂದ ಆಕರ್ಷಕ ಪಥ ಸಂಚಲನ ನಡೆಯಲಿದೆ.

ಸೇನಾ ದಿನಾಚರಣೆ ನಿಮಿತ್ತ ಮದ್ರಾಸ್‌ ಎಂಜಿನಿಯರಿಂಗ್‌ ಯುದ್ಧ ಸ್ಮಾರಕದಲ್ಲಿ ಸೇನಾ ಪಡೆ ಮುಖ್ಯಸ್ಥ ಮೇಜರ್‌ ಜನರಲ್‌ ಮನೋಜ್‌ ಪಾಂಡೆ ಅವರು ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಬಳಿಕ ಪಥಸಂಚಲನ ವೀಕ್ಷಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಹಾಗೂ ಅಸಾಧಾರಣ ಕಾರ್ಯಕ್ಷಮತೆ ತೋರಿದ ಘಟಕಗಳಿಗೆ ಪ್ರಶಂಸಾ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಿದ್ದಾರೆ.

ಸಂಜೆ ಎಎಸ್‌ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ನಡೆವ ‘ಮಿಲಿಟರಿ ಟ್ಯಾಟೂ’ ಕಾರ್ಯಕ್ರಮದಲ್ಲಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಟಿ-90 ಟ್ಯಾಂಕ್‌ಗಳು, 155ಎಂ.ಎಂ. ಬೊಫೋರ್ಸ್‌ ಗನ್‌ ಸೇರಿದಂತೆ ಸೇನೆಯ ಸಾಮರ್ಥ್ಯ ಬಿಂಬಿಸುವ ವಿವಿಧ ಯುದ್ಧ ಟ್ಯಾಂಕ್‌ಗಳು, ರೇಡಾರ್‌ಗಳ ಪ್ರದರ್ಶಿಸಲಾಗುವುದು. ‘ಧ್ರುವ’ ಮತ್ತು ‘ರುದ್ರ’ ಹೆಲಿಕಾಪ್ಟರ್‌ಗಳ ಹಾರಾಟ, ಸೈನಿಕರಿಂದ ಆಕರ್ಷಕ ಮೋಟರ್‌ಸೈಕಲ್‌ ಸ್ಟಂಟ್‌, ಕುದುರೆ ಸವಾರಿ, ಟೆಕ್ವಾಂಡೋ, ಮಾರ್ಷಲ್‌ ಆಟ್ಸ್‌ರ್‍ ಸೇರಿ ಇನ್ನಿತರ ಸಾಹಸಮಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

Indian Army day: ಮೊದಲ ಬಾರಿಗೆ ನಗರದಲ್ಲಿ ಭೂಸೇನಾ ದಿನ

1949ರ ಜನವರಿ 15ರಂದು ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್‌ ಕಮಾಂಡರ್‌ ಇನ್‌ ಚೀಫ್‌ ಜನರಲ್‌ ಫ್ರಾನ್ಸಿಸ್‌ ರಾಯ್‌ ಬಚರ್‌ ಅವರಿಂದ ‘ಭಾರತೀಯ ಸೇನೆಯ ಕಮಾಂಡರ್‌ ಇನ್‌ ಚೀಫ್‌’ ಆಗಿ ಲೆಫ್ಟಿನೆಂಟ್‌ ಜನರಲ್‌ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಆಂಗ್ಲರು ಸೈನ್ಯದ ಅಧಿಕಾರ ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ.

ಪಾಲ್ಗೊಳ್ಳಲಿರುವ ರೆಜಿಮೆಂಟ್‌ಗಳು

ಆರ್ಮಿ ಸರ್ವಿಸ್‌ ಕಾಫ್ಸ್‌ರ್‍, ರೆಜಿಮೆಂಟ್‌ ಆಫ್‌ ಆರ್ಟಿಲರಿ, ಬಾಂಬೆ ಎಂಜಿನಿಯರ್ಸ್‌ ಗ್ರೂಪ್‌ ಆ್ಯಂಡ್‌ ಸೆಂಟರ್‌, ಮಹಾರ್‌ ರೆಜಿಮೆಂಟ್‌ ಸೆಂಟರ್‌, ಮದ್ರಾಸ್‌ ರೆಜಿಮೆಂಟ್‌ ಸೆಂಟರ್‌, ಆರ್ಮಿ ಆರ್ಡಿನನ್ಸ್‌ ಕೋರ್‌ ಮಿಲಿಟರಿ ಬ್ಯಾಂಡ್‌, ಗೋವಾದ 2 ಸಿಗ್ನಲ್‌ ಟ್ರೈನಿಂಗ್‌ ಸೆಂಟರ್‌ ಪಾಲ್ಗೊಳ್ಳಲಿವೆ.