ಚಿಕ್ಕಪೇಟೆಯಲ್ಲಿ ಮಾರ್ವಾಡಿ ಅಂಗಡಿಗಳು ಕನ್ನಡ ಬೋರ್ಡ್‌ಗಳು ದೊಡ್ಡದಾಗಿ ಹಾಕಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದ ನಡುವೆಯೇ ಇತಿಹಾಸಕಾರ ಧರ್ಮೇಂದ್ರ ಕುಮಾರ್‌ ಅವರ ಮಾತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಬೆಂಗಳೂರು (ಡಿ.22): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕನ್ನಡ ನಾಮಫಲಕಗಳ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಕನ್ನಡ ನಾಮಫಲಕಗಳನ್ನು ಹಾಕದ ಹಾಗೂ ದೊಡ್ಡದಾಗಿ ಹಾಕದೇ ಇರುವ ಅಂಗಡಿಗಳ ಮೇಲೆ ದಾಳಿ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಷ್ಟು ಮಾತ್ರವಲ್ಲದೆ, ಜಿಯೋ ಕಂಪನಿಯ ಬೋರ್ಡ್‌ಗಳು, ಚಿಕ್ಕಪೇಟೆಯಲ್ಲಿನ ಮಾರ್ವಾಡಿಗಳ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಈ ಕುರಿತಂತೆ ಸೋಶಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈ ನಡುವೆ ಇತಿಹಾಸಕಾರ ಎಂದು ಹೇಳಿಕೊಳ್ಳುವ ಆರ್ನೇಹಳ್ಲಿ ಶಿವಶಂಕರ್‌ ಧರ್ಮೇಂದ್ರ ಕುಮಾರ್‌, ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 'ಎಸ್ಪೀ ರೋಡಿನ ತುಂಬಾ ತಮ್ಮ ಕೋಟೆ ಕಟ್ಟಿಕೊಂಡು ಮೆರೆಯುತ್ತಿರುವ ಮಾರವಾಡಿಗಳ ಏಕಚಕ್ರಾಧಿಪತ್ಯವನ್ನು ಮುರಿದಿದ್ದು...ಕನ್ನಡಿಗ ಮುಸ್ಲಿಮರು...' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. 'ಮಾರ್ವಾಡಿಗಳು ಅಂದ್ರೆ ಅವರೇನು ಪಾಕಿಸ್ತಾನಿಯರೆ. ಮುಸ್ಲಿಮರೇನು ಕನ್ನಡದ ಕಣ್ಮಣಿ ಗಳೇ. ನಿಮ್ಮ ಈ ಧೋರಣೆ ಸಂವಿಧಾನ ವಿರೋಧಿ. ಈ ಧೋರಣೆ ಬದಲಾಯಿಸಿಕ್ಕೊಳ್ಳಿ' ಎಂದು ಧರ್ಮೇಂದ್ರ ಕುಮಾರ್‌ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

'ನೋಡಿದಿರಾ ಮಹಾಜನಗಳೇ ಇವರ ಕನ್ನಡ ಪರ ಹೋರಾಟ ನಿಧಾನವಾಗಿ ಯಾವ ಕಡೆ ವಾಲುತ್ತಿದೆ ಅಂತಾ? ಇವರಿಗೇ ಕನ್ನಡ ಅನ್ನೋದು Cannon fodder ಅಷ್ಟೆ, ಅದರ ಹಿಂದೆ ಇರುವುದು ಜನಾಂಗೀಯ ದ್ವೇಷ. ಹೆಸರಿಗೆ ಮಾತ್ರ ಸರ್ವ ಜನಾಂಗದ ಶಾಂತಿಯ ತೋಟ..' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಕನ್ನಡ ಹೋರಾಟದ ಹೆಸರಿನಲ್ಲಿ ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ತಯಾರಿ ನಡೆಯುತ್ತಿದೆ. ಜಾತಿ, ಭಾಷೆ ಹೆಸರಿನಲ್ಲಿ ಹಿಂದುಗಳನ್ನು ಒಡೆದು ಮುಸ್ಲಿಂ ಕ್ರೈಸ್ತ ಮತಗಳಿಂದ ಚುನಾವಣಾ ಗೆಲ್ಲುವ ಕುಯುಕ್ತಿ. ಇವರನ್ನೆಲ್ಲಾ ವಿಧಾನಸಭೆ ಚುನಾವಣೆ ಮುಂಚೆ ಪೋಷಣೆ ಮಾಡಿದ್ದು ಕಾಂಗ್ರೆಸಿಗರೇ...' ಎಂದು ಕೆ.ಸುಧಾಕರ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. 'ಕನ್ನಡ ಭಾಷೆಗೆ ಗೌರವ ಕೊಡದ ಯಾರೇ ಆಗಿರಲಿ ಅವರು ಕನ್ನಡಿಗರ ಶತ್ರುಗಳು' ಎಂದು ಇನ್ನೊಬ್ಬರು ಬರೆದಿದ್ದಾರೆ.

ಧರ್ಮೇಂದ್ರ ಕುಮಾರ್‌ ಅವರ ಫೇಸ್‌ಬುಕ್‌ ಪೋಸ್ಟ್‌ಗೆ, 'ಶಿವಾಜಿ ನಗರ, ಕೆ ಜಿ ಹಳ್ಳಿ, ಶ್ರೀರಾಂಪುರ,ಡಿ ಜಿ ಹಳ್ಳಿಯಲ್ಲಿ ಉರ್ದು ಭಾಷಿಕರಾದ ಮುಸ್ಲಿಂರು ಕಟ್ಟಿರೋ ಕೋಟೆಯನ್ನು ಕನ್ನಡಿಗ ಹಿಂದೂಗಳಾದ ನೀವು ಯಾವಾಗ ಕೆಡಗೋದು ಇತಿಹಾಸ ತಜ್ಞರೇ...?' ಎಂದು ಅವರಿಗೆ ಪ್ರಶ್ನೆ ಮಾಡಿದ್ದಾರೆ.

'ಮಾರ್ವಾಡಿಗಳೂ ನಮ್ಮ ಹಿಂದೂ /ಜೈನರು. ಅವರು ಕಷ್ಟಪಟ್ಟು ದುಡಿಯುತ್ತಾರೆ. ಅವರು ನಮ್ಮ‌‌ ದೇಶದವರು. ಮುಸ್ಲಿಮರು ನಮ್ಮ ದೇಶದವರು ಅಲ್ಲ. ನೀವು ಸ್ವಲ್ಪ ಇತಿಹಾಸವನ್ನು ತಿರುವುಹಾಕಿ..' ಎಂದು ಇನ್ನೊಬ್ಬರು ಬರೆದಿದ್ದಾರೆ. 'ವಿಜಯನಗರ ಸಾಮ್ರಾಜ್ಯವನ್ನ ಹಾಳುಹಂಪೆಯನ್ನಾಗಿಸಿದ ಪುಣ್ಯಾತ್ಮರು ಯಾರು ಗುರುಗಳೆ...‌?' ಎಂದು ಅವರಿಗೆ ಪ್ರಶ್ನೆ ಮಾಡಿದ್ದಾರೆ.
'ಗುರುಗಳೇ ನೀವು ಹೋಗಿ ನೋಡಿ ಕನ್ನಡ ಎಷ್ಟು ಚೆನ್ನಾಗಿ ಮಾತಾಡತ್ತಾರೆ ಅಂತ ನಿಮಗೆ ಗೊತ್ತಾಗುತ್ತೆ.... ಮುಸ್ಲಿಂ ಅಂದ್ರೆ ಕನ್ನಡ ಮಾತಾಡೋದ್ ಅಂದ್ರೆ ಉತ್ತರ ಕರ್ನಾಟಕ ನೀವು ಅವರನ್ನ ವಹಿಸಿಕೊಂಡು ಹೋಗೋದು ಎಷ್ಟು ಸರಿ.... ಮಾರ್ವಾಡಿಗಳು ಮೋಸ ಮಾಡಿ ವ್ಯಾಪಾರ ಮಾಡಿದ್ರು ಕನ್ನಡ ಮಾತಾಡತ್ತಾರೆ..... ಮುಸ್ಲಿಂ ಗಿಂತ ಇವರೇ ಹೆಚ್ಚು ಕನ್ನಡ ಕಲಿತ್ತಿರೋದು...... ನಮ್ಮ ರಾಜ್ಯದ ಮುಸ್ಲಿಂ ಬಿಟ್ಟು ಹೊರಗಿನ ರಾಜ್ಯದ ಮುಸ್ಲಿಂ ಜಾಸ್ತಿ ಇರೋದು ಬೆಂಗಳೂರುಲಿ ಕನ್ನಡ ಮಾತಾಡಿಸಿ ನಿಮಗೆ ಗೊತ್ತಾಗುತ್ತೆ..' ಎಂದು ಬರೆದಿದ್ದಾರೆ.

ಫಿಲ್ಮ್‌ ಸ್ಟಾರ್‌ಗಳ ಸ್ಮಾರಕಕ್ಕೆ ಸರ್ಕಾರದ ಹಣ, ಜಾಗ ಬಳಸಬಾರದು: ಚೇತನ್‌ ಅಹಿಂಸಾ

'ನಿಮಗ್ಯಾಕ್ರೀ ಬಂತು ಈ ದುರ್ಬುದ್ಧಿ? ಸರ್ಕಾರದ ಬಿಟ್ಟಿ ಗಂಜಿ ಮತ್ತು ಕಿತ್ತೋದ ಪ್ರಶಸ್ತಿಗೆ ಈ ರೀತಿ ನಂದೆಲ್ಡಿಲಿ ನಂದಗೋಪಾಲ ಆಗ್ಬೇಡಿ.ಅಷ್ಟೊಂದು ಬರಗೆಟ್ಟಿದ್ದೀರಾ' ಎಂದು ಧರ್ಮೇಂದ್ರ ಕುಮಾರ್‌ ಅವರ ಪೋಸ್ಟ್‌ನ ಹಿಂದಿನ ಮರ್ಮ್ ಬಗ್ಗೆ ಮಾತನಾಡಿದ್ದಾರೆ.

ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್‌ ಮಾರ್ಷ್‌, 'ಅಗೌರವವಲ್ಲ, ಅದು ಆತನ ವಿಶ್ರಾಂತಿ ರೀತಿ' ಎಂದ ಚೇತನ್‌ ಅಹಿಂಸಾ!