Asianet Suvarna News Asianet Suvarna News

ವಿಧಾನಮಂಡಲ 9 ಸ್ಥಾಯಿ ಸಮಿತಿಗೆ ಅಧ್ಯಕ್ಷ, ಸದಸ್ಯರ ನೇಮಿಸಿ ಸ್ಪೀಕರ್‌ ಆದೇಶ

ಸಾರ್ವಜನಿಕ ಲೆಕ್ಕಪತ್ರಗಳ ಸ್ಥಾಯಿ ಸಮಿತಿಗೆ ರಾಮಲಿಂಗಾರೆಡ್ಡಿ, ಉದ್ದಿಮೆಗಳ ಸಮಿತಿಗೆ ಲಿಂಬಾವಳಿ ನೇಮಕ| ಪ್ರತಿ ಸ್ಥಾಯಿ ಸಮಿತಿಯಲ್ಲಿ ಹದಿನೈದು ಮಂದಿ ಶಾಸಕರು ಹಾಗೂ ಐದು ಮಂದಿ ವಿಧಾನಪರಿಷತ್‌ ಸದಸ್ಯರನ್ನು ಸದಸ್ಯರನ್ನಾಗಿ ನೇಮಕ| 

Appointment of Chairman Member of the Standing Committee grg
Author
Bengaluru, First Published Nov 11, 2020, 9:13 AM IST
  • Facebook
  • Twitter
  • Whatsapp

ಬೆಂಗಳೂರು(ನ.11): ವಿಧಾನಮಂಡಲದ ಒಂಬತ್ತು ವಿವಿಧ ಸ್ಥಾಯಿ ಸಮಿತಿಗಳಿಗೆ ಪ್ರಸಕ್ತ (2020-21) ಸಾಲಿನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರಗಳ ಸ್ಥಾಯಿ ಸಮಿತಿಗೆ ಶಾಸಕ ರಾಮಲಿಂಗಾರೆಡ್ಡಿ, ಸಾರ್ವಜನಿಕ ಉದ್ದಿಮೆಗಳ ಸಮಿತಿಗೆ ಅರವಿಂದ ಲಿಂಬಾವಳಿ, ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ಎಸ್‌.ಅಂಗಾರ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ದಿನಕರ್‌ ಕೇಶವ ಶೆಟ್ಟಿ, ಅಧೀನ ಶಾಸನ ರಚನಾ ಸಮಿತಿಗೆ ಎಸ್‌.ಕುಮಾರ್‌ ಬಂಗಾರಪ್ಪ, ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿಗೆ ಸಾ.ರಾ.ಮಹೇಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಕೆ.ಪೂರ್ಣಿಮಾ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಗೆ ಜಿ.ಸೋಮಶೇಖರ್‌ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

375 ಪ್ರಶ್ನೆಗೆ ಉತ್ತರ ಬಂದಿ​ಲ್ಲ: ಸ್ಪೀಕರ್‌ಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ

ಇನ್ನು ಗ್ರಂಥಾಲಯ ಸಮಿತಿಯಲ್ಲಿ ವಿಧಾನಸಭೆ ಸಭಾಧ್ಯಕ್ಷರು ಹಾಗೂ ವಿಧಾನಪರಿಷತ್‌ನ ಸಭಾಪತಿಗಳು ಸದಸ್ಯರಾಗಿರುವುದರಿಂದ ನಿಯಮಗಳ ಪ್ರಕಾರ ಗ್ರಂಥಾಲಯ ಸಮಿತಿಗೆ ವಿಧಾನಪರಿಷತ್‌ ಸಭಾಪತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಆದೇಶದಲ್ಲಿ ತಿಳಿಸಿದ್ದಾರೆ. ಪ್ರತಿ ಸ್ಥಾಯಿ ಸಮಿತಿಯಲ್ಲಿ ಹದಿನೈದು ಮಂದಿ ಶಾಸಕರು ಹಾಗೂ ಐದು ಮಂದಿ ವಿಧಾನಪರಿಷತ್‌ ಸದಸ್ಯರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ವಿಧಾನಸಭೆಯ ವಿವಿಧ ಸಮಿತಿಗಳು:

ಇನ್ನು ವಿಧಾನಸಭೆಯ ಸಮಿತಿಗಳ ಪೈಕಿ ಅಂದಾಜುಗಳ ಸಮಿತಿಗೆ ಅಭಯ ಪಾಟೀಲ್‌, ಸರ್ಕಾರಿ ಭರವಸೆಗಳ ಸಮಿತಿಗೆ ಕೆ.ರಘುಪತಿ ಭಟ್‌, ಹಕ್ಕು ಬಾಧ್ಯತೆಗಳ ಸಮಿತಿಗೆ ಬಸನಗೌಡ ಆರ್‌.ಪಾಟೀಲ್‌ (ಯತ್ನಾಳ್‌), ಖಾಸಗಿ ಸದಸ್ಯರ ವಿಧೇಯಕ, ನಿರ್ಣಯಗಳ ಸಮಿತಿ, ಅರ್ಜಿಗಳ ಸಮಿತಿ ಹಾಗೂ ವಸತಿ ಸೌಕರ್ಯ ಸಮಿತಿಗಳಿಗೆ ವಿಶ್ವನಾಥ್‌ ಮಾಮನಿ ಅವರನ್ನು ಆಧ್ಯಕ್ಷರನ್ನಾಗಿ ನೇಮಿಸಲಾಗಿದೆ.
 

Follow Us:
Download App:
  • android
  • ios