ಮೈಸೂರು ಜಿಲ್ಲೆಯಲ್ಲಿ ಹಾಡಹಗಲೇ ರೋಡ್ ರಾಬರಿ ನಡೆದಿದ್ದು, ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ ಹಣ ಮತ್ತು ಕಾರನ್ನು ದೋಚಿದ್ದಾರೆ. ಕೇರಳದ ಮೂಲದ ವ್ಯಕ್ತಿಯಿಂದ ಹವಾಲಾ ಹಣ ದೋಚಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು (ಜ.20): ಪ್ರತಿದಿನ ಸಿಎಂ ಖುರ್ಚಿಗಾಗಿ ನಡೆಯೋ ರಾಜಕಾರಣ, ಜನರಿಗೆ ಒಂಚೂರು ಉಪಯೋಗವಾಗದ ಸಮಾವೇಶಗಳಲ್ಲಿ ರಾಜ್ಯ ಸರ್ಕಾರದ ಗಮನ. ಇದನ್ನೇ ಲಾಭವನ್ನಾಗಿ ಮಾಡಿಕೊಂಡಿರುವ ಕಳ್ಳಕಾಕರು ದಿನಕ್ಕೊಂದರಂತೆ ರಾಬರಿ ಕೇಸ್‌ಗಳನ್ನು ನಡೆಸುತ್ತಿದ್ದಾರೆ. ಬೀದರ್‌ನಲ್ಲಿ ಎಟಿಎಂ ಎದುರು ಹಾಡಹಗಲ್ಲೇ ರಾಬರಿ ನಡೆದು ಸರಿಸುಮಾರು ಮೂರು ದಿನಗಳಾಗಿವೆ. ಸಿಸಿಟಿವಿ ಫೂಟೇಜ್‌ಗಳು, ಅವರ ಟ್ರಾವೆಲ್ ದಾಖಲೆಗಳು ಎಲ್ಲಾ ಸಿಕ್ಕರೂ ಈವರೆಗೂ ಅವರ ಬಂಧನವಾಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಅದಾದ ಬಳಿಕ ಮಂಗಳೂರಿನ ಬ್ಯಾಂಕ್‌ನಲ್ಲಿ ಗೋಣಿಚೀಲದಲ್ಲಿ ಚಿನ್ನಾಭರಣವನ್ನು ಕಟ್ಟಿಕೊಂಡು ಹೋಗಿದ್ದಾರೆ. ಈಗ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನ ದರೋಡೆ ಮೈಸೂರಿನಲ್ಲಿ ಆಗಿದೆ. ಸಾಲು ಸಾಲು ಘಟನೆಗಳಾದೂ ನಿದ್ರೆಯಿಂದ ರಾಜ್ಯ ಸರ್ಕಾರ ಏಳದ ಕಾರಣ, ಸರ್ವಜನಾಂಗದ ಶಾಂತಿಯ ತೋಟವೀಗ ದರೋಡೆಕೋರರ ತೋಟವಾಗಿ ಮಾರ್ಪಟ್ಟಿದೆ.
ಸೋಮವಾರ ಮೈಸೂರು ಜಿಲ್ಲೆಯಲ್ಲಿ ಹಾಗಹಗಲೇ ರೋಡ್ ರಾಬರಿ ಆಗಿದೆ. ಮುಸುಕುಧಾರಿಗಳು ಕಾರ್‌ಅನ್ನು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ. ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಘಟನೆ ನಡೆದಿದೆ. ಎರಡು ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು, ಇನೋವಾ ಕಾರ್‌ಅನ್ನು ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ಕದ್ದುಕೊಂಡು ಹೋಗಿದ್ದಾರೆ. ಜಯಪುರ ಪೊಲೀಸರಿಂದ ತನಿಖೆ ಆರಂಭವಾಗಿದೆ.
ಬೀದರ್ ಎಟಿಎಂ ದರೋಡೆ ಪ್ರಕರಣ: ಮಾಹಿತಿ ಪಡೆಯದೇ ಇಬ್ಬರ ಸಾವು ಎಂದ ಸಚಿವ ರಹೀಂ ಖಾನ್!
ರಾಬರಿಗೊಳಗಾದ ವ್ಯಕ್ತಿ ಕೇರಳದ ಮೂಲದವರು ಎನ್ನಲಾಗಿದೆ. ಆತನಲ್ಲಿದ್ದ ಹವಾಲಾ ಹಣ ರಾಬರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಳ್ಳರನ್ನು ಆದಷ್ಟು ಶೀಘ್ರವಾಗಿ ಪತ್ತೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಇಂದು ಬೆಳಗ್ಗೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಲ್ವರು ಎರಡು ಕಾರುಗಳಲ್ಲಿ ಬಂದು ದರೋಡೆ ಮಾಡಿದ್ದಾರೆ. ಕಾರಿನಲ್ಲಿ ಡ್ರೈವರ್ ಸೇರಿದಂತೆ ಇಬ್ಬರು ಇದ್ದರು. ಇಬ್ಬರ ಮೇಲೆ ಹಲ್ಲೆ ಮಾಡಿ ಕಾರನ್ನ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೇ ಮೂರು ತಂಡ ರಚನೆ ಮಾಡಲಾಗಿದೆ. ಗಡಿ ಭಾಗದಲ್ಲಿ ಅಲರ್ಟ್ ಮಾಡಲಾಗಿದೆ. ವೈನಾಡಿನ ಎಸ್ಪಿ ಜೊತೆ ಮಾತನಾಡಿದ್ದೇನೆ. ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯವಾಳಿಗಳನ್ನ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಎಸ್‌ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಗ್ರೇಟೆಸ್ಟ್ ಬ್ಯಾಂಕ್ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!
