Asianet Suvarna News Asianet Suvarna News

ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಇರಲಿ ಎಚ್ಚರ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಕಾಮುಕರು. ಆ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಅತ್ಯಾಚಾರ ನಡೆದಿರುವುದು ರಾಜ್ಯಧಾನಿಗೆ ತಲೆತಗ್ಗಿಸುವಂತಾಗಿದೆ.

Another rape incident in Bangalore today nayandahalli rav
Author
First Published Nov 30, 2022, 10:58 PM IST

ಬೆಂಗಳೂರು (ನ.30) : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಕಾಮುಕರು. ಆ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಅತ್ಯಾಚಾರ ನಡೆದಿರುವುದು ರಾಜ್ಯಧಾನಿ ತಲೆತಗ್ಗಿಸುವಂತಾಗಿದೆ. ಬೆಂಗಳೂರಿನಲ್ಲಿ ದಿನೇದಿನೆ ಅತ್ಯಾಚಾರಗಳು ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆ ಮೇಲೆ ಅನುಮಾನಪಡುವಂತಾಗಿದೆ. 

ಐವರು ಅಪ್ರಾಪ್ತರಿಂದ ಬಾಲಕಿ ಮೇಲೆ ಗ್ಯಾಂಗ್‌ರೇಪ್: ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದವರು ವಶಕ್ಕೆ

ನಿನ್ನೆ ಸಂಜೆ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಬಸ್ ಕಾಯುತ್ತಿದ್ದ ಮಹಿಳೆ. ಈ ವೇಳೆ ಶಾಲಾ ಮಕ್ಕಳನ್ನು ಡ್ರಾಪ್ ಮಾಡಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಕಾಮುಕ ಚಾಲಕ ಶಿವಕುಮಾರ ಅಲಿಯಾಸ್ ಶಿವ. ರಸ್ತೆಯಲ್ಲಿ ಒಂಟಿಯಾಗಿ ನಿಂತಿರುವ ಮಹಿಳೆಯನ್ನು ನೋಡಿದ ಕಾಮುಕ ಬಸ್ ನಿಲ್ಲಿಸಿದ್ದಾನೆ. ನಾಯಂಡಹಳ್ಳಿ ಜಂಕ್ಷನ್ ಬಳಿ ನಿಂತಿದ್ದ ಮಹಿಳೆಯನ್ನ ಎಲ್ಲಿ ಹೋಗಬೇಕು ಎಂದು ಕೇಳಿದ್ದಾನೆ. ನಾನು ಲಗ್ಗೆರೆಯ ಕಡೆ ಹೋಗುವುದಾಗಿ ಆ ಮಹಿಳೆ ಹೇಳಿದ್ದಾಳೆ. ಸಂಜೆಗತ್ತಲು ಇದನ್ನೇ ಅವಕಾಶವಾಗಿ ಬಳಸಿಕೊಂಡ ಕಾಮುಕ ಶಿವ. "ನಾನು ಅದೇ ಮಾರ್ಗವಾಗಿ ಹೋಗುತ್ತಿದ್ದೇನೆ. ಅಲ್ಲಿಗೆ ಡ್ರಾಪ್ ಮಾಡುತ್ತೇನೆ ಬಸ್ ಹತ್ತು ಎಂದು ಪುಸಲಾಯಿಸಿದ್ದಾನೆ. 

ಕಾಮುಕನ ಮಾತನ್ನು ನಂಬಿ ಸಂತ್ರಸ್ತ ಮಹಿಳೆ ಬೇಗನೇ ಮನೆ ತಲುಪುವ ಆತುರದಲ್ಲಿ ಬಸ್ ಹತ್ತಿದ್ದಾಳೆ. ಮಹಿಳೆ ಬಸ್ ಹತ್ತುತ್ತಿದ್ದಂತೆ ಎಲ್ಲ ವಿಂಡೋ ಗ್ಲಾಸ್ ಕ್ಲೋಸ್ ಮಾಡಿರುವ ಕಾಮುಕ. ಅನುಮಾನಗೊಂಡ ಮಹಿಳೆ, "ಯಾಕಪ್ಪ ಗ್ಲಾಸ್ ಕ್ಲೋಸ್ ಮಾಡುತ್ತೀಯಾ' ಎಂದು ಸಂತ್ರಸ್ತೆ ಕೇಳಿದ್ದಾಳೆ. ಅದಕ್ಕೆ ಟ್ರಾಫಿಕ್ ಪೊಲೀಸ್ರು ಫೈನ್ ಹಾಕುತ್ತಾರೆ ಎಂದು ಹೇಳಿರುವ ಕಾಮುಕ. ಮುಂದೆ ಇನ್ನೂ ಸಾಕಷ್ಟು ಜನ ಬಸ್ ಹತ್ತುತ್ತಾರೆ ಎಂದು ನಂಬಿಸಿದ್ದ. 

ನಾಯಂಡಹಳ್ಳಿಯಿಂದ ನಾಗರಭಾವಿ ಕಡೆ ತಿರುಗಿದ ಬಸ್:

ನಾಯಂಡಹಳ್ಳಿಯಿಂದ ಲಗ್ಗೆರೆ ಮಾರ್ಗವಾಗಿ ಹೋಗಬೇಕಿದ್ದ ಬಸ್. ಏಕಾಏಕಿ ನಾಗರಭಾವಿ ಬಳಿ ಮಾರ್ಗ ಬದಲಿಸಿದ ಕಾಮುಕ. ಅಲ್ಲಿಂದ 'ನಮ್ಮೂರು ತಿಂಡಿ' ಹೋಟೆಲ್ ಮುಂದಿನಿಂದ ಮಾಳಗಳದ ಕಡೆ ಬಸ್ ಚಲಾಯಿಸಿರುವ ಕಾಮುಕ ನೇರವಾಗಿ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಬಸ್ ನಿಲ್ಲಿಸಿದ್ದಾನೆ.

ಸಂತ್ರಸ್ತೆ ಮಹಿಳೆಗೆ ತಾನು ಬಸ್ ಹತ್ತಿ ಮೋಸಹೋಗಿದ್ದೇನೆ ಎಂಬುದು ತಿಳಿಯುವ ಹೊತ್ತಿಗೆ ಸಮಯ ಮಿಂಚಿಹೋಗಿದೆ. ಇಲ್ಲಿಗೆ ಯಾಕೆ ಕರೆತಂದಿದ್ದು ಎಂದು ಏರುದನಿಯಲ್ಲಿ ಪ್ರಶ್ನಿಸಿದ್ದಾಳೆ. ಅಲ್ಲಿಂದ ತಪ್ಪಿಸಿಕೊಂಡು ಬರಲು ಮಹಿಳೆ ಯತ್ನಿಸಿದ್ದಾಳೆ. ಈ ವೇಳೆ ಕಾಮುಕ ಶಿವ ಮಹಿಳೆಗೆ ಕಬ್ಬಿಣದ ರಾಡ್ ಮತ್ತು ಸ್ಪ್ಯಾನ್ನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆಯನ್ನು ಬಸ್‌ನಲ್ಲಿ ಕೆಡವಿ ಮಹಿಳೆಯ ಕೈಗಳನ್ನು ಕಾಲಿನಿಂದ ತುಳಿದು ಕ್ರೂರವಾಗಿ ವರ್ತಿಸಿದ್ದಾನೆ.

ಸಂತ್ರಸ್ತೆ ಮಹಿಳೆ ಕಾಪಾಡುವಂತೆ ಚೀರಾಡುತ್ತಿದ್ದಂತೆ ಕಿರಾತಕ ಚಾಕು ತೆಗೆದು ಮಹಿಳೆಯ ಕುತ್ತಿಗೆಗೆ ಇಟ್ಟಿದ್ದಾನೆ. ಕಿರುಚಾಡಿದರೆ ಕೊಂದು ಹಾಕುವುದಾಗಿ ಬೆದರಿಸಿದ್ದಾನೆ. ಇಷ್ಟಾದರೂ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಬಸ್ ಡೂರ್ ಬಳಿ ಬಂದ ಮಹಿಳೆಗೆ ಹಲ್ಲೆ ಮಾಡಿರುವ ಕಿರಾತಕ. ಮಹಿಳೆಯ ಕೋರೆಹಲ್ಲು ಮುರಿಯುವ ಹಾಗೆ ಗುದ್ದಿದ್ದಾನೆ.

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಕೇವಲ ಐದು ಬಸ್ಕಿಯ ಶಿಕ್ಷೆ

ಸಂತ್ರಸ್ತೆಯ ವೇಲಿನಿಂದ ಕೈಗಳನ್ನು ಕಟ್ಟಿ ಅತ್ಯಾಚಾರ:

ಸಂತ್ರಸ್ತ ಮಹಿಳೆಗೆ ಹಲ್ಲೆ ನಡೆಸಿ ಕೈಗಳನ್ನು ವೇಲ್‌ನಿಂದ ಬಿಗಿಯಾಗಿ ಕಟ್ಟಿ ಅತ್ಯಾಚಾರವೆಸಗಿರುವ ಕಾಮುಕ. ಈ ವೇಳೆ ಸಾಕಷ್ಟು ಹಲ್ಲೆಗೊಳಗಾಗಿದ್ದ ಮಹಿಳೆ ಭಯಭೀತಳಾಗಿದ್ದಾಳೆ.  ಕಿರುಚಾಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಲೇ ಅತ್ಯಾಚಾರವೆಸಗಿರುವ ಕಾಮುಕ.

ಘಟನೆ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ಮನೆಗೆ ಕರೆ ಮಾಡಿ ವಿಷಯ ತಿಳಿಸಿರುವ ಸಂತ್ರಸ್ತೆ ಮಹಿಳೆ. ಬಳಿಕ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

Follow Us:
Download App:
  • android
  • ios