ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಕುಟುಂಬದ ವಿರುದ್ಧ ಭೂ ಕಬಳಿಕೆ ಕಂಟಕ: ಲೋಕಾಯುಕ್ತಕ್ಕೆ ದೂರು!

ಮುಡಾ ನಿವೇಶನ ಹಂಚಿಕೆ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಭೂ ಕಬಳಿಕ ಉರುಳು ಸುತ್ತಿಕೊಂಡಿದೆ.

another khatakhat loot alleged after muda scam nr ramesh booked fir against kharge family rav

ಬೆಂಗಳೂರು (ಸೆ.27): ಮುಡಾ ನಿವೇಶನ ಹಂಚಿಕೆ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಭೂ ಕಬಳಿಕ ಉರುಳು ಸುತ್ತಿಕೊಂಡಿದೆ.

ಹೌದು, ಮುಡಾ ಹಗರಣದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಲೋಕಯುಕ್ತದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಅವರು ಭೂ ಕಬಳಿಕೆ ಆರೋಪದಡಿ ಇಬ್ಬರು ಸಚಿವರು ಹಾಗೂ ಹಿರಿಯ IAS ಅಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ, ರಾಹುಲ್  ಖರ್ಗೆ, ರಾಧಾಬಾಯಿ ಖರ್ಗೆ, ರಾಧಾಕೃಷ್ಣ, ಸಚಿವ M. B. ಪಾಟೀಲ್ ಮತ್ತು IAS ಅಧಿಕಾರಿ ಡಾ ಎಸ್ ಸೆಲ್ವಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 

ಖರ್ಗೆ ಪುತ್ರನಿಗೆ ಕೊಟ್ಟ ಸಿಎ ನಿವೇಶನದ ಬಗ್ಗೆ ಟೀಕಿಸುವ ಛಲವಾದಿ ನಾರಾಯಣಸ್ವಾಮಿ ಒಬ್ಬ 'ಶೆಡ್' ಗಿರಾಕಿ!

ಏನಿದು ಪ್ರಕರಣ?

ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ  "ಸಿದ್ಧಾರ್ಥ ವಿಹಾರ ಟ್ರಸ್ಟ್" ಸಂಸ್ಥೆ ಹೆಸರಿಗೆ ಒಂದೇ ಉದ್ದೇಶಕ್ಕೆ  2 ಪ್ರತ್ಯೇಕ ಸರ್ಕಾರಿ ಸಂಸ್ಥೆಗಳ ಮೂಲಕ 2 ಬೃಹತ್  ಆಸ್ತಿಗಳ ಹಂಚಿಕೆ ಆರೋಪ ಕೇಳಿಬಂದಿದೆ. 'ಸಿದ್ಧಾರ್ಥ ವಿಹಾರ ಟ್ರಸ್ಟ್;ನ ಅಧ್ಯಕ್ಷರು ಹಾಗೂ ಟ್ರಸ್ಟೀಗಳಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ  ಪತ್ನಿ ರಾಧಾಬಾಯಿ M. ಖರ್ಗೆ,  ಮಕ್ಕಳಾದ ಸಚಿವ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ ಹಾಗೂ ಅಳಿಯ ರಾಧಾಕೃಷ್ಣ ಅವರನ್ನು ಒಳಗೊಂಡಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್. ಶಿಕ್ಷಣ ವ್ಯವಸ್ಥೆ ಎಂಬ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಸರ್ಕಾರಿ ಸಂಸ್ಥೆಗಳಿಂದ ಕಾನೂನು ಬಾಹಿರವಾಗಿ ಸರ್ಕಾರಿ ಸ್ವತ್ತುಗಳನ್ನು ಅಧಿಕಾರ ಮತ್ತು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮಂಜೂರು ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ದೂರು ದಾಖಲಾಗಿದೆ.

ಭೂ ಮಂಜುರಾತಿ ಯಾವಾಗ? 

ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ 2014 ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ "ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ"ದ ಮೂಲಕ  BTM 4ನೇ ಹಂತದ 2ನೇ ಬ್ಲಾಕ್ ನ 8,002 ಚ. ಮೀ. (86,133 ಚ. ಅಡಿ) ವಿಸ್ತೀರ್ಣದ CA ನಿವೇಶನ ಸಂಖ್ಯೆ 05 ಹಂಚಿಕೆಯಾಗಿದೆ. 30 ವರ್ಷಗಳ ಗುತ್ತಿಗೆಗೆ ಪಡೆದಿರುವ BTM 4ನೇ ಹಂತದ ಸ್ವತ್ತಿಗೆ ₹ 1,99,56,572/- ರೂಪಾಯಿಗಳಷ್ಟು ಹಣವನ್ನು BDA ಗೆ ಪಾವತಿಸಿದ್ದ ಸಿದ್ಧಾರ್ಥ ವಿಹಾರ ಟ್ರಸ್ಟ್. BTM  4ನೇ ಹಂತದ 2ನೇ ಬ್ಲಾಕ್ ನ CA ನಿವೇಶನ ಸಂಖ್ಯೆ 05 ಅನ್ನು "ಸಿದ್ಧಾರ್ಥ ವಿಹಾರ ಟ್ರಸ್ಟ್" ನ ಕಾರ್ಯದರ್ಶಿ ಮಾರುತಿ ರಾವ್ ಡಿ. ಮಾಲೆ ಹೆಸರಿಗೆ ಸ್ವಾಧೀನ ಪತ್ರ ನೀಡಿರುವ ಬಿಡಿಎ. ಬಿಡಿಯ ಹಂಚಿಕೆ ಮಾಡಿರುವ ಸಿಎ ನಿವೇಶನಕ್ಕೆ ಬಿಬಿಎಂಪಿಯಿಂದ ಖಾತ ಆಗಿದೆ. 

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ BTM 4ನೇ ಹಂತದ CA ನಿವೇಶನವನ್ನು "ಸಿದ್ಧಾರ್ಥ ವಿಹಾರ ಟ್ರಸ್ಟ್" ಹೆಸರಿಗೆ ಹಂಚಿಕೆಯಾಗಿದೆ. 2024 ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮತ್ತೆ "ಸಿದ್ಧಾರ್ಥ ವಿಹಾರ ಟ್ರಸ್ಟ್" ಹೆಸರಿಗೆ CA ನಿವೇಶನ ಹಂಚಿಕೆ ಮಾಡುವಂತೆ KIADB ಗೆ  ಟ್ರಸ್ಟಿ ರಾಹುಲ್ ಎಂ ಖರ್ಗೆಯಿಂದ ಅರ್ಜಿ ಸಲ್ಲಿಕೆಯಾಗಿದೆ. ಸಲ್ಲಿಸಿದ ಅರ್ಜಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ 05 ಎಕರೆ ವಿಸ್ತೀರ್ಣದ CA ನಿವೇಶನವನ್ನು ಹಂಚಿಕೆ ಮಾಡಿರುವ KIADB. ಯಲಹಂಕ ಬಳಿಯ ಬಾಗಲೂರಿನಲ್ಲಿ ಕೆಐಎಡಿಬಿ ಅಭಿವೃದ್ಧಿ ಪಡಿಸಿರುವ "Hi - Tech Defence & Aerospace Park ನ Hardware Sector ನ 05 ಎಕರೆ ವಿಸ್ತೀರ್ಣದ CA ನಿವೇಶನ ಸಂಖ್ಯೆ AM - 4ನ್ನು ಸಿದ್ಧಾರ್ಥ ವಿಹಾರ ಟ್ರಸ್ಟ್" ನ ರಾಹುಲ್ M. ಖರ್ಗೆ ಅವರ ಹೆಸರಿಗೆ 30/05/2024 ರಂದು  ಹಂಚಿಕೆ ಮಾಡಲಾಗಿದೆ.

ಮುಡಾ ಬಳಿಕ ಪ್ರಿಯಾಂಕ್ ಖರ್ಗೆ ಬುದ್ಧ ವಿಹಾರ ವಿಚಾರವೂ ಬಯಲಿಗೆ; ಹೆಚ್‌ಡಿಕೆ ಆರೋಪವೇನು?

Aerospace Parkನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಹೆಸರಿಗೆ ಹಂಚಿಕೆ ಮಾಡಲಾದ CA ನಿವೇಶನ ಸಂಖ್ಯೆ AM - 4 ರ ಸ್ವತ್ತಿಗೆ ಗುತ್ತಿಗೆ ಮೊತ್ತವನ್ನು ₹ 14,25,00,000/- ರೂಪಾಯಿಗಳನ್ನು ನಿಗದಿ ಮಾಡಿ 30 ವರ್ಷಗಳ ಗುತ್ತಿಗೆ ಪಡೆಯಲಾಗಿದೆ. ಪ್ರಸ್ತುತ ಬಾಗಲೂರಿನಲ್ಲಿ KIADB ಅಭಿವೃದ್ಧಿ ಪಡಿಸಿರುವ Aerospace Park ನಲ್ಲಿ ಮಾರುಕಟ್ಟೆ ಬೆಲೆ ಪ್ರತಿ ಚ. ಅಡಿಗೆ ₹ 5,000/- ರೂಪಾಯಿಗಳು ಇರುತ್ತದೆ. ಸಿದ್ಧಾರ್ಥ ವಿಹಾರ ಟ್ರಸ್ಟ್"ಗೆ ಹಂಚಿಕೆ ಮಾಡಲಾಗಿರುವ Aerospace Park ನಲ್ಲಿ ಹಂಚಿಕೆ ಮಾಡಲಾಗಿರುವ 05 ಎಕರೆ ವಿಸ್ತೀರ್ಣದ CA ನಿವೇಶನದ ಪ್ರಸಕ್ತ ಮಾರುಕಟ್ಟೆ ಮೌಲ್ಯ ಕನಿಷ್ಠ ₹ 110 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ರಾಜಕೀಯ ಪ್ರಭಾವ, ಅಧಿಕಾರ ಬಳಸಿಕೊಂಡು ಶೈಕ್ಷಣಿಕ ಸಂಸ್ಥೆಯ ಹೆಸರಿನಲ್ಲಿ ಭೂಕಬಳಿಕೆ ಮಾಡಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ. ಇದೀಗ ಮುಡಾ ಕೇಸ್ ನಲ್ಲಿ ರಾಜ್ಯಾದ್ಯಂತ ಪರ-ವಿರೋಧ ಪ್ರತಿಭಟನೆಗಳು ಕಾವು ಏರುತ್ತರುವ ಹೊತ್ತಲ್ಲಿ ಇದೀಗ ಖರ್ಗೆ ಕುಟುಂಬದ ವಿರುದ್ಧ ಕೇಳಿಬಂದಿರುವ ಭೂ ಕಬಳಿಕೆ ಆರೋಪ ಮೇಲೆ ದೂರು ದಾಖಲಾಗಿರುವುದು ರಾಜ್ಯ ಸರ್ಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

Latest Videos
Follow Us:
Download App:
  • android
  • ios