33 ಮಂದಿಯನ್ನು ಬಲಿ ಪಡೆದ ಮಂಡ್ಯ ಜಿಲ್ಲೆಯ ವಿ.ಸಿ.ನಾಲೆ, ಮತ್ತೊಂದು ಬಲಿ ಪಡೆದಿದೆ. 

ಪಾಂಡವಪುರ[ಡಿ.20]: ಎರಡು ದುರ್ಘಟನೆಯಲ್ಲಿ 33 ಮಂದಿಯನ್ನು ಬಲಿ ಪಡೆದ ಮಂಡ್ಯ ಜಿಲ್ಲೆಯ ವಿ.ಸಿ.ನಾಲೆ, ಮತ್ತೊಂದು ಬಲಿ ಪಡೆದಿದೆ. ಭತ್ತ ತುಂಬಿಕೊಂಡು ಹೋಗುತ್ತಿದ್ದ ಎತ್ತಿನಗಾಡಿ ಪಲ್ಟಿಯಾಗಿ ಎತ್ತು ಮೃತಪಟ್ಟಘಟನೆ ಪಾಂಡವಪುರ ತಾಲೂಕಿನ ಜಯಂತಿ ನಗರದ ಸಮೀಪ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಲೂಕಿನ ಡಾಮಡಹಳ್ಳಿ ಗ್ರಾಮದ ಮಹದೇವು, ಕಾಂತರಾಜು ಅವರು ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿರುವ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತವನ್ನು ಕಟಾವು ಮಾಡಿಕೊಂಡು ಎತ್ತಿನಗಾಡಿಯಲ್ಲಿ ತುಂಬಿಕೊಂಡು ವಿಸಿ ನಾಲೆಯ ಏರಿಯ ಮೇಲೆ ತೆರಳುತ್ತಿದ್ದರು. ಏರಿಯ ಮೇಲೆ ಕೋಳಿ ಕಸವನ್ನು ಚೀಲದಲ್ಲಿ ಇಟ್ಟಿದ್ದನ್ನು ಕಂಡು ಬೆದರಿದ ಎತ್ತುಗಳು ಗಾಡಿಯ ಸಮೇತ ವಿ.ಸಿ. ನಾಲೆಗೆ ಉರುಳಿಬಿದ್ದಿವೆ.

ಮಹದೇವು, ಕಾಂತರಾಜು, ಸಹ ವಿಸಿ ನಾಲೆಗೆ ಉರುಳಿದ್ದು, ಈಜಿಕೊಂಡು ಹೊರಬಂದಿದ್ದಾರೆ. ಎತ್ತು ನಾಲೆಯಲ್ಲಿ ಮುಳುಗಿ ಮೃತಪಟ್ಟಿದೆ.